ಇವರ ಬಳಿ 20ಕ್ಕೂ ಹೆಚ್ಚು ಮನೆಗಳಿವೆ, ಆದರೂ ಬಾಡಿಗೆ ಮನೆಯಲ್ಲಿ ವಾಸ; ಕಾರಣ ಗೊತ್ತಾ? – Kannada News | Indian origin Ravi Sharma rents out home despite owning over 20 properties
ನವದೆಹಲಿ, ಫೆಬ್ರುವರಿ 18: ಮನೆ ಹೊಂದುವುದು ಎಲ್ಲರಿಗೂ ಇರುವ ಕನಸು. ಒಬ್ಬ ವ್ಯಕ್ತಿ ತನ್ನ ಜೀವಮಾನದಲ್ಲಿ ಒಂದು ಮನೆ ಕಟ್ಟಿಕೊಂಡರೆ ಸಾಕು ಎನ್ನುವಂತಾಗಿರುತ್ತದೆ. ತಮಗೆ ಸ್ವಂತ ಮನೆಯ ಸಹವಾಸವೇ ಬೇಡ, ಬಾಡಿಗೆ ಮನೆ ಸಾಕು ಎಂದೂ ಹೇಳುವವರಿದ್ದಾರೆ. ಆಸ್ಟ್ರೇಲಿಯಾದಲ್ಲಿರುವ ಭಾರತ ಮೂಲದ ವ್ಯಕ್ತಿಯೊಬ್ಬರು 20ಕ್ಕೂ ಹೆಚ್ಚು ಪ್ರಾಪರ್ಟಿಗಳನ್ನು ಹೊಂದಿದ್ದರೂ ಬಾಡಿಗೆ ಮನೆಯಲ್ಲಿ ವಾಸವಿದ್ದಾರಂತೆ. ಇವರ ಹೆಸರು ರವಿ ಶರ್ಮಾ (Ravi Sharma). 32 ವರ್ಷದ ಇವರು ಸರ್ಚ್ ಪ್ರಾಪರ್ಟಿ ಬಯರ್ಸ್ ಏಜೆನ್ಸಿ ಸಂಸ್ಥೆಯ ಸಂಸ್ಥಾಪಕರು. ರವಿ ಶರ್ಮಾ…