Headlines

nagaraj11081993

ಅವರು ಗೆದ್ದು, ಇವರು ಸೋತರೂ ಆಸ್ಟ್ರೇಲಿಯಾ ಟಿ20 ವಿಶ್ವಕಪ್​ನಿಂದ ಔಟ್! – Kannada News | T20 World Cup 2026: Australia’s Super Eight qualification scenario

T20 World Cup 2026: ಟಿ20 ವಿಶ್ವಕಪ್​ 2026 ರಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ಗೆದ್ದಿರುವುದು ಕೇವಲ ಒಂದು ಮ್ಯಾಚ್ ಮಾತ್ರ. ಅದು ಕೂಡ ಐರ್ಲೆಂಡ್ ವಿರುದ್ಧ. ಇದಾದ ಬಳಿಕ ಝಿಂಬಾಬ್ವೆ ಹಾಗೂ ಶ್ರೀಲಂಕಾ ತಂಡಗಳ ವಿರುದ್ಧ ಸೋಲನುಭವಿಸಿದೆ. ಈ ಸೋಲುಗಳಿಂದಾಗಿ ಆಸ್ಟ್ರೇಲಿಯಾ ತಂಡದ ಸೂಪರ್-8 ಹಾದಿ ಮತ್ತಷ್ಟು ಕಠಿಣವಾಗಿದೆ. ಅಂದರೆ ಆಸೀಸ್ ಪಡೆಯ ಸೂಪರ್-8 ಭವಿಷ್ಯ ಎರಡು ತಂಡಗಳ ಕೈಯಲ್ಲಿದೆ. ಈ ಎರಡು ಟೀಮ್​ಗಳು ಗೆದ್ದರೆ ಮಾತ್ರ ಆಸ್ಟ್ರೇಲಿಯಾ ಮುಂದಿನ ಸುತ್ತಿಗೆ ಪ್ರವೇಶಿಸಲಿದೆ….

Read More

ಬೆಂಗಳೂರು ರೈಲು ಪ್ರಯಾಣಿಕರಿಗೆ ಕೇಂದ್ರ ಸಚಿವ ಸೋಮಣ್ಣ ಗುಡ್ ನ್ಯೂಸ್: ಕೊನೆಗೂ ಈಡೇರಿತು ಬಹುಕಾಲದ ಬೇಡಿಕೆ – Kannada News | Bengaluru Passengers Get Good News as Union Minister Somanna Flags Off Express Train Halt at Nayandahalli Railway Station

ಬೆಂಗಳೂರು, ಫೆಬ್ರವರಿ 17: ಬೆಂಗಳೂರಿನ (Bangalore) ನಾಯಂಡಹಳ್ಳಿ ರೈಲ್ವೆ ನಿಲ್ದಾಣದಲ್ಲಿ (Nayandahalli Railway Station) ಎಕ್ಸ್‌ಪ್ರೆಸ್ ರೈಲುಗಳಿಗೆ ನಿಲುಗಡೆ ಕಲ್ಪಿಸುವ ಬಹುಕಾಲದ ಬೇಡಿಕೆ ಕೊನೆಗೂ ಈಡೇರಿದೆ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ (V Somanna) ಅವರು ಮಂಗಳವಾರ ನಾಲ್ಕು ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಇದುವರೆಗೆ ನಾಯಂಡಹಳ್ಳಿ ನಿಲ್ದಾಣದಲ್ಲಿ ಪ್ಯಾಸೆಂಜರ್ ರೈಲುಗಳು ಮಾತ್ರ ನಿಲ್ಲುತ್ತಿದ್ದು, ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗಾಗಿ ಪ್ರಯಾಣಿಕರು ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದರು. ಇಂದು…

Read More

Video: ತಮಿಳುನಾಡಿನ ಮಾಯಾನ ಕೊಲ್ಲೈ ಉತ್ಸವದಲ್ಲಿ ಕುಸಿದು ಬಿದ್ದ ದೇವಾಲಯದ ರಥ, ಹಲವರಿಗೆ ಗಾಯ – Kannada News | Massive Temple Car Overturns During Festival in Tamil Nadu, Several Hurt

ಚೆನ್ನೈ, ಫೆಬ್ರವರಿ 17: ತಮಿಳುನಾಡಿನ ವೆಲ್ಲೂರಿನಲ್ಲಿ ಸೋಮವಾರ ರಾತ್ರಿ ಮಾಯಾನ ಕೊಲ್ಲೈ ಉತ್ಸವದ ಸಂದರ್ಭದಲ್ಲಿ 60 ಅಡಿ ಎತ್ತರದ ದೇವಾಲಯದ ರಥ ಕುಸಿದು ಬಿದ್ದು 7 ಮಂದಿ ಗಾಯಗೊಂಡಿದ್ದಾರೆ. ಕೂಡಲೇ ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಸಹಾಯ ಮಾಡಿದ್ದಾರೆ. ಹೇಗೆ ರಥ ಕುಸಿಯಿತು ಎಂಬುದಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರತಿ ವರ್ಷ ಮಹಾಶಿವರಾತ್ರಿ ಸಂದರ್ಭದಲ್ಲಿ ಈ ರಥೋತ್ಸವ ನಡೆಯುತ್ತದೆ.     ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ  Source link

Read More

‘ಕನ್ನಡದಲ್ಲಿ ನಾಯಕ ನಟನ ಕೊರತೆಯನ್ನು ಕಡಿಮೆ ಮಾಡಿ’; ಗಿಲ್ಲಿಗೆ ಹಾರೈಸಿದ ಮುನಿರತ್ನ – Kannada News | Kannada Cinema Needs New Heroes: Gilli Actor Gets Munirathna’s Support

ಕನ್ನಡ ಚಿತ್ರರಂಗದಲ್ಲಿ ಹೀರೋಗಳ ಕೊರತೆ ಎದ್ದು ಕಾಣಿಸುತ್ತಿದೆ. ಕೆಲವರು ಪ್ಯಾನ್ ಇಂಡಿಯಾ ಸಿನಿಮಾ ಮಾಡುವತ್ತ ಗಮನ ಹರಿಸುತ್ತಿರುವುದರಿಂದ ಸಹಜವಾಗಿಯೇ ವಿಳಂಬ ಆಗುತ್ತಿದೆ. ಇನ್ನೂ ಕೆಲವರು ತಮ್ಮ ಪ್ರಾಮಾಣಿಕ ಶ್ರಮ ಹಾಕುತ್ತಿದ್ದಾರೆ. ಈ ಮಧ್ಯೆ ಯುವ ಹೀರೋಗಳು ಎಂಟ್ರಿ ಕೊಟ್ಟು, ಸ್ಟಾರ್​​​ಗಳಾಗಿ ಬೆಳೆಯಬೇಕು ಎಂಬುದು ಅನೇಕರ ಕೋರಿಕೆ. ಈಗ ಬೆಂಗಳೂರಿನ ಆರ್​​ಆರ್​​ ನಗರ ಶಾಸಕ ಮುನಿರತ್ನ ಅವರು ಗಿಲ್ಲಿಗೆ ಇದೇ ರೀತಿಯ ಹಾರೈಸಿದ್ದಾರೆ. ಗಿಲ್ಲಿ ದೊಡ್ಡ ಸ್ಟಾರ್ ಆಗಿ ಬೆಳೆಯಬೇಕು ಎಂದು ಬಯಸಿದ್ದಾರೆ. ಗಿಲ್ಲಿ ನಟ ಅವರು ಓರ್ವ…

Read More

ಕರಾವಳಿಯಲ್ಲಿ ಮತ್ತೆ ಕಾರಣಿಕ ತೋರಿದ ದೈವ: ತನ್ನಿಂದ ತಾನೆ ತೂಗಿತು ಉಯ್ಯಾಲೆ! ಪಿಲಿಚಂಡಿ ಕಾರ್ಣಿಕ ಕಂಡು ಭಕ್ತರು ಶಾಕ್ – Kannada News | Coastal Karnataka Miracle: Pilichandi Daiva Swing Moves on Its Own, Devotees Stunned by Divine Phenomenon

ಪಿಲಿಚಂಡಿ ದೈವದ ಕಾರ್ಣಿಕ ಕಂಡು ಭಕ್ತರು ಶಾಕ್Image Credit source: tv9 ಮಂಗಳೂರು, ಫೆಬ್ರವರಿ 17: ಕರಾವಳಿಯಲ್ಲಿ (Coastal Karnataka) ಮತ್ತೆ ದೈವದ ಕಾರ್ಣಿಕದ ಕಂಡು ಭಕ್ತರು ಚಕಿತರಾಗಿದ್ದಾರೆ. ಮಂಗಳೂರಿನ (Mangalore) ಬೈಕಂಪಾಡಿ ಕೈಗಾರಿಕಾ ವಲಯದ ಕುಡುಂಬೂರು ನಡುಗಿರಿಯಲ್ಲಿರುವ ದೈವಸ್ಥಾನದಲ್ಲಿ ಅಪರೂಪದ ಘಟನೆ ನಡೆದಿದೆ. ಮಂಗಳೂರು ಭಾಗದ ಶ್ರೀ ಜಾರಂದಾಯ ಹಾಗೂ ಸಹಪರಿವಾರ ದೈವಸ್ಥಾನದಲ್ಲಿ ನಡೆದ ಪಿಲಿಚಂಡಿ ದೈವದ ನೇಮೋತ್ಸವದ ವೇಳೆ ದೈವದ ಉಯ್ಯಾಲೆ ತನ್ನಿಂದ ತಾನೇ ತೂಗಿದ ದೃಶ್ಯ ಭಕ್ತರಲ್ಲಿ ಅಚ್ಚರಿ ಮೂಡಿಸಿದೆ. ನೇಮೋತ್ಸವದ ಸಂದರ್ಭದಲ್ಲಿ ಪಿಲಿಚಂಡಿ ದೈವಕ್ಕೆ…

Read More

ಮೂರು ಮಕ್ಕಳ ಕೊಂದು ಶಿಕ್ಷೆ ಅನುಭವಿಸಿ ಬಂದಿದ್ದ ವ್ಯಕ್ತಿ, ಮಹಿಳೆಯ ಕೊಂದು ರೈಲಿನೆದುರು ಹಾರಿ ಆತ್ಮಹತ್ಯೆ – Kannada News | MP Crime Shocker, Man Jailed 18 Yrs for Sons Murder Kills Woman, Commits Suicide

ಭೋಪಾಲ್, ಫೆಬ್ರವರಿ 17: ಮೂವರು ಗಂಡು ಮಕ್ಕಳನ್ನು ಕೊಂದ ಆರೋಪದಲ್ಲಿ ಈಗಾಗಲೇ 18 ವರ್ಷ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದ ವ್ಯಕ್ತಿ ಮಹಿಳೆಯೊಬ್ಬರನ್ನು ಕೊಂದು ಬಳಿಕ ರೈಲಿನೆದುರು ಹಾರಿ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 50 ವರ್ಷದ ದುರ್ಗಾ ಎಂಬ ಮಹಿಳೆಯನ್ನು ಭೋಪಾಲ್‌ನ ಗೌತಮ್ ನಗರ ಪ್ರದೇಶದಲ್ಲಿ ಆಕೆಯ ಸಂಬಂಧಿ ಪ್ರೀತಮ್ ಕುಶ್ವಾಹ ಇರಿದು ಕೊಂದಿದ್ದಾನೆ. ಜೈಲಿನಿಂದ ಬಿಡುಗಡೆಯಾದ ನಂತರ ಸುಮಾರು ಒಂದು ವರ್ಷದಿಂದ ದುರ್ಗಾ ಅವರ ಮನೆಯಲ್ಲಿ ವಾಸಿಸುತ್ತಿದ್ದರು. ಗೌತಮ್ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ…

Read More

ಯಾರಿಗೂ ಸಾಧ್ಯವಾಗದೇ ಇರುವುದನ್ನು ಸಾಧಿಸಿ ತೋರಿಸಿದ ಪಾತುಮ್ ನಿಸ್ಸಂಕಾ – Kannada News | Pathum Nissanka Creates New Record Against Australia

T20 World Cup 2026: ಟಿ20 ವಿಶ್ವಕಪ್​ 2026ರ ಮೊದಲ ಶತಕ ಮೂಡಿಬಂದಿದೆ. ಅದು ಸಹ ಶ್ರೀಲಂಕಾದ ಆರಂಭಿಕ ದಾಂಡಿಗ ಪಾತುಮ್ ನಿಸ್ಸಂಕಾ (Pathum Nissanka) ಬ್ಯಾಟ್​ನಿಂದ. ಈ ಸೆಂಚುರಿ ಮೂಡಿಬಂದಿರುವುದು ಆಸ್ಟ್ರೇಲಿಯಾ ವಿರುದ್ಧ ಎಂಬುದೇ ಇಲ್ಲಿ ವಿಶೇಷ.  Source link

Read More

ಮನೆ ಕಟ್ಟಲು ಅನುಮತಿ ನೀಡದ ಪಿಡಿಒ: ಗ್ರಾಮ ಪಂಚಾಯತ್ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ರೈತ, ವಿಡಿಯೋ ವೈರಲ್ – Kannada News | Farmer Attempts to end life at Gram Panchayat Office After PDO Denies House Construction Permission, Video Goes Viral

ವಿಜಯನಗರ, ಫೆಬ್ರವರಿ 17: ಮನೆ ಕಟ್ಟಲು ಪರವಾನಗಿ ನೀಡದ ಹಿನ್ನೆಲೆಯಲ್ಲಿ ರೈತೊಬ್ಬ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಡಬಗೆರೆ ಗ್ರಾಮ ಪಂಚಾಯತ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಕಡಬಗೆರೆ ಪಂಚಾಯತ್ ವ್ಯಾಪ್ತಿಯ ಪವನಪುರ ಗ್ರಾಮದ ನಿವಾಸಿ ಕೆ. ಬಸವರಾಜ್ ಎಂಬವರು ಗ್ರಾ.ಪಂ. ಕಚೇರಿಯಲ್ಲೇ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮನೆ ನಿರ್ಮಾಣಕ್ಕಾಗಿ ಇ-ಸೊತ್ತು ಹಾಗೂ ಪರವಾನಗಿ ನೀಡುವಂತೆ ಹಲವಾರು ಬಾರಿ ಅರ್ಜಿ ಸಲ್ಲಿಸಿದ್ದರೂ ಅನುಮತಿ ನೀಡಲಾಗಿಲ್ಲವೆಂದು…

Read More

‘ನಿಮಗೆ ಡಿ ಬಾಸ್, ನನಗೆ ಮಗ; ಇನ್ನೆರಡು ತಿಂಗಳಲ್ಲಿ ಅವನು ಆಚೆ ಬರ್ತಾನೆ’; ರವಿಚಂದ್ರನ್ – Kannada News | Darshan Bail Update: Ravichandran Hints at D boss’ Two Month Release

ನಟ ದರ್ಶನ್ (Darshan) ಅವರು ಸದ್ಯ ಜೈಲಿನಲ್ಲಿದ್ದಾರೆ. ಅವರು ಯಾವಾಗ ಹೊರ ಬರುತ್ತಾರೆ ಎಂದು ಫ್ಯಾನ್ಸ್ ಕಾಯುತ್ತಾ ಕೂತಿದ್ದಾರೆ. ಜಾಮೀನು ಅರ್ಜಿ ಸುಪ್ರೀಂಕೋರ್ಟ್​​​ನಲ್ಲೇ ರಿಜೆಕ್ಟ್ ಆಗಿರುವುದರಿಂದ ಅವರು ಯಾವುದೇ ಜಾಮೀನು ಅರ್ಜಿ ಸಲ್ಲಿಕೆ ಮಾಡಿಲ್ಲ ಎನ್ನಲಾಗುತ್ತಿದೆ. ಹೀಗಿರುವಾಗಲೇ ರವಿಚಂದ್ರನ್ ಕಡೆಯಿಂದ ಒಂದು ಗುಡ್ ನ್ಯೂಸ್ ಸಿಕ್ಕಿದೆ. ದರ್ಶನ್ ಹೊರ ಬರೋದು ಯಾವಾಗ ಎಂಬ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ದರ್ಶನ್ ಹಾಗೂ ರವಿಚಂದ್ರನ್ ಮಧ್ಯೆ ಒಳ್ಳೆಯ ಬಾಧಂವ್ಯ ಇದೆ. 2023ರ ‘ಕ್ರಾಂತಿ’…

Read More

ಚಿಕ್ಕಮಗಳೂರು: ಕಲ್ಲು ತೂರಾಟ ಮಾಡಿದವರ ಮೇಲೆ, ಕಿಡಿಗೇಡಿಗಳ ಹಿಡಿದವರ ಮೇಲೂ ಎಫ್​ಐಆರ್! – Kannada News | Chikkamagaluru Stone Pelting Case: FIR Against Muslim Attackers and Hindus Those Who Caught Them

ಚಿಕ್ಕಮಗಳೂರಿನಲ್ಲಿ ಬಿಗಿ ಬಂದೋಬಸ್ತ್Image Credit source: tv9 ಚಿಕ್ಕಮಗಳೂರು, ಫೆಬ್ರವರಿ 17: ಚಿಕ್ಕಮಗಳೂರು (Chikkamagaluru) ನಗರದ ತಿಲಕ್ ಪಾರ್ಕ್ ಸಮೀಪ ಹಿಂದೂ ಮನೆಯ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎರಡು ಪ್ರತ್ಯೇಕ ಎಫ್​ಐಆರ್​​ಗಳನ್ನು ದಾಖಲಿಸಿದ್ದಾರೆ. ಕಲ್ಲು ತೂರಾಟ ಮಾಡಿದವರ ಹಾಗೂ ಅವರನ್ನು ಹಿಡಿದು ಪೊಲೀಸರಿಗೊಪ್ಪಿಸಿದವರ ವಿರುದ್ಧವೂ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಲಾಗಿದೆ. ಸುಧಾ ಎಂಬವರ ಮನೆಯ ಮೇಲೆ ಕಲ್ಲು ಎಸೆದ ಆರೋಪದ ಮೇರೆಗೆ ಹುಸೇನ್ ಮತ್ತು ರಿಯಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಲ್ಲು…

Read More