ಬೆಂಗಳೂರು ವಿಶಾಖಪಟ್ಟಣ ವಿಶೇಷ ರೈಲು ಅವಧಿ ವಿಸ್ತರಣೆ: ಇನ್ಮುಂದೆ ನಾಯಂಡಹಳ್ಳಿಯಲ್ಲಿ ಈ 4 ರೈಲುಗಳಿಗೆ ಇರುತ್ತೆ ನಿಲುಗಡೆ – Kannada News | Bengaluru–Visakhapatnam Special Train Extended Till March 30; Four Trains Get Halt at Nayandahalli
ಬೆಂಗಳೂರು, ಫೆಬ್ರವರಿ 16: ಹೋಳಿ ಹಬ್ಬದ (Holi Festival) ಹಿನ್ನೆಲೆ ಹೆಚ್ಚುವರಿ ಪ್ರಯಾಣಿಕರ ದಟ್ಟಣೆ ನಿವಾರಣೆಗೆ ಭಾರತೀಯ ರೈಲ್ವೆ (Indian Railways) ಮಹತ್ವದ ಕ್ರಮ ಕೈಗೊಂಡಿದೆ. ವಿಶಾಖಪಟ್ಟಣ ಮತ್ತು ಎಸ್‌ಎಂವಿಟಿ ಬೆಂಗಳೂರು ನಡುವೆ ಸಂಚರಿಸುವ ವಿಶೇಷ ರೈಲು ಸೇವೆಯ ಅವಧಿಯನ್ನು ವಿಸ್ತರಿಸಿದೆ. ರೈಲು ಸಂಖ್ಯೆ 08581 ಬೆಂಗಳೂರು ಕಡೆಗೆ ಬರುವ ವಿಶಾಖಪಟ್ಟಣಂ–ಎಸ್‌ಎಂವಿಟಿ ಬೆಂಗಳೂರು ವಾರಾಂತ್ಯ ಎಕ್ಸ್‌ಪ್ರೆಸ್ (ಭಾನುವಾರ ಸಂಚಾರ) ಅನ್ನು ಮಾರ್ಚ್ 29ರವರೆಗೆ ವಿಸ್ತರಿಸಲಾಗಿದೆ. ಅದೇ ರೀತಿ ರೈಲು ಸಂಖ್ಯೆ 08582 ಎಸ್‌ಎಂವಿಟಿ ಬೆಂಗಳೂರು–ವಿಶಾಖಪಟ್ಟಣಂ ವಾರಾಂತ್ಯ ಎಕ್ಸ್‌ಪ್ರೆಸ್…