ಕನ್ನಡ ಸೆಲೆಬ್ರಿಟಿ ಜೋಡಿಗಳ ಕ್ಯೂಟ್ ಲವ್ ಸ್ಟೋರಿ – Kannada News | Sandalwood Stars: Reel to Real Love Stories – Kannada Actors Who Fell in Love On Set
ತೆರೆಯ ಮೇಲೆ ನಟನೆ ಮಾಡುತ್ತಾ ನಂತರ ಸಂಬಂಧ ನಿಜವಾದ ಪ್ರೀತಿಗೆ ತಿರುಗಿದ ಅದೆಷ್ಟೋ ಉದಾಹರಣೆಗಳನ್ನು ನೀವು ನೋಡಬಹುದು. ನಟಿಸುತ್ತಲೇ ಪ್ರೀತಿಗೆ ಬಿದ್ದವರು ಅನೇಕರಿದ್ದಾರೆ. ಸೆಟ್ನಲ್ಲಿ ಉಂಟಾಗುವ ಗೆಳೆತನ ನಂತರ ಮದುವೆವರೆಗೆ ಹೋದ ಉದಾಹರಣೆ ಇದೆ. ಸ್ಯಾಂಡಲ್ವುಡ್ನಲ್ಲೂ (Sandalwood) ಅನೇಕರು ಹೀಗೆ ವಿವಾಹವಾಗಿದ್ದಾರೆ. ಪ್ರೇಮದ ಪಾತ್ರ ಮಾಡುತ್ತ ವಿವಾಹ ಆದ ಸ್ಯಾಂಡಲ್ವುಡ್ ಜೋಡಿಗಳ ಪಟ್ಟಿ ಇಲ್ಲಿದೆ. ಯಶ್ ಹಾಗೂ ರಾಧಿಕಾ ಪಂಡಿತ್ ಸ್ಯಾಂಡಲ್ವುಡ್ನ ಸಾಕಷ್ಟು ಜನಪ್ರಿಯ ಜೋಡಿ ಎಂದರೂ ತಪ್ಪಾಗಲಿಕ್ಕಿಲ್ಲ. ‘ನಂದಗೋಕುಲ’ ಧಾರಾವಾಹಿಯಲ್ಲಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದರು. ‘ಮೊಗ್ಗಿನ…