ವೈದ್ಯೆಯಾದ ಶ್ರೀಲೀಲಾ: ಸಹಪಾಠಿಗಳೊಟ್ಟಿಗೆ ಚಿತ್ರಗಳ ಹಂಚಿಕೊಂಡ ನಟಿ
ನಟಿ ಶ್ರೀಲೀಲಾ ಈಗ ಪ್ಯಾನ್ ಇಂಡಿಯಾ ನಟಿಯಾಗಿದ್ದಾರೆ. ತೆಲುಗು, ಹಿಂದಿ ಮತ್ತು ಬಾಲಿವುಡ್ನಲ್ಲಿ ಬಲು ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಶ್ರೀಲೀಲಾ ಕೇವಲ ನಟಿ ಮಾತ್ರವಲ್ಲ ಅವರು ಇನ್ನು ಮುಂದೆ ವೈದ್ಯೆ ಸಹ. ಓದುತ್ತಲೇ ಸಿನಿಮಾ ರಂಗದಲ್ಲಿಯೂ ತೊಡಗಿಸಿಕೊಂಡಿದ್ದ ಶ್ರೀಲೀಲಾ ಎಂಬಿಬಿಎಸ್ ಮುಗಿಸಿದ್ದಾರೆ. ಮುಂಬೈನ ಡಿವೈ ಯುನಿವರ್ಸಿಟಿಯ ವೈದ್ಯಕೀಯ ವಿದ್ಯಾರ್ಥಿನಿ ಆಗಿದ್ದ ಶ್ರೀಲೀಲಾ, ವೈದ್ಯಕೀಯ ಪದವಿ ಮುಗಿಸಿದ್ದು, ಇದೀಗ ಅಧಿಕೃತವಾಗಿ ವೈದ್ಯೆ. 2020ರಲ್ಲಿ ಎಂಬಿಬಿಎಸ್ ಪದವಿ ಆರಂಭಿಸಿದ ನಟಿ ಶ್ರೀಲೀಲಾ ಇದೀಗ ಪದವಿ ಮುಗಿಸಿದ್ದು, ಘಟಿಕೋತ್ಸವದ ಚಿತ್ರಗಳನ್ನು ಸಾಮಾಜಿಕ…