Headlines

nagaraj11081993

ಟಿ20 ವಿಶ್ವಕಪ್‌ನಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ ಅತ್ಯಂತ ಹಿರಿಯ ಆಟಗಾರ – Kannada News | Mohammed Nadeem Breaks Jayasuriya’s Record: Oldest T20 WC Fifty as Sri Lanka Dominates Oman

ಓಮನ್ ತಂಡವನ್ನು 105 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿದ ಶ್ರೀಲಂಕಾ ತಂಡ ಅತಿ ದೊಡ್ಡ ಗೆಲುವಿನ ದಾಖಲೆಯನ್ನು ಬರೆದಿದೆ. ಇದರ ಜೊತೆಗೆ 19 ಎಸೆತಗಳಲ್ಲಿ ಅರ್ಧಶತಕದ ಬಾರಿಸಿದ ದಸುನು ಶನಕ ಕೂಡ ಲಂಕಾ ಪರ ಅತಿ ವೇಗದ ಟಿ20 ಶತಕ ಬಾರಿಸಿದ ದಾಖಲೆ ನಿರ್ಮಿಸಿದರು. ಇದು ಲಂಕಾ ತಂಡದ ಕಥೆಯಾದರೆ, ಈ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ ಓಮನ್ ತಂಡದ ಮೊಹಮ್ಮದ್ ನದೀಮ್ ಕೂಡ ದಾಖಲೆಯೊಂದನ್ನು ನಿರ್ಮಿಸಿದರು. ಓಮನ್ ಪರ ಅರ್ಧಶತಕ ಬಾರಿಸಿ ಏಕಾಂಗಿ ಹೋರಾಟ ನೀಡಿದ…

Read More

Video: ಯಕ್ಷಗಾನ ನೋಡಲು ವೇದಿಕೆಯತ್ತ ಬಂದ ಬೆಕ್ಕಣ್ಣ, ಮುಂದೇನಾಯ್ತು ನೋಡಿ – Kannada News | A cat rushed to the stage to watch a Yakshagana

ಕರಾವಳಿ ಗಂಡು ಕಲೆ ಯಕ್ಷಗಾನ (Yakshagana) ನೋಡುವುದೇ ಚಂದ.ಪ್ರಸಂಗದ ನಡುವೆ ಹಾಸ್ಯಮಯ ಸಂಭಾಷಣೆಗಳು ಪ್ರೇಕ್ಷಕ ವರ್ಗವನ್ನು ನಗೆಗಡಲಿನಲ್ಲಿ ತೇಲಿಸುತ್ತದೆ. ಹೀಗಾಗಿ ಈ ಕಲೆಗೆ ಬಹುದೊಡ್ಡ ಅಭಿಮಾನಿ ಬಳಗವಿದೆ. ಆದರೆ, ಕಲಾಭಿಮಾನಿಗಳಿಗೆ ಮಾತ್ರವಲ್ಲ ಈ ಪ್ರಾಣಿಗಳಿಗೆ ಯಕ್ಷಗಾನ ಎಂದರೆ ಪ್ರೀತಿಯಿದೆ ಎನ್ನುವುದಕ್ಕೆ ಈ ದೃಶ್ಯವೇ ಸಾಕ್ಷಿ. ಯಕ್ಷಗಾನ ನೋಡಲು ರಂಗಸ್ಥಳಕ್ಕೆ ಬೆಕ್ಕು ಬಂದಿದ್ದು, ಕಲಾವಿದರೊಬ್ಬರು ಸಮಯ ಪ್ರಜ್ಞೆಯಿಂದ ಆ ಬೆಕ್ಕಿನ ಮರಿಯನ್ನು ಕಾಲಡಿಯಲ್ಲಿ ಬೀಳದಂತೆ ರಕ್ಷಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿದೆ. PK Jain…

Read More

NCL Recruitment 2026: ಡಿಪ್ಲೊಮಾ, B.Tech ಪದವೀಧರರಿಗೆ ಸರ್ಕಾರಿ ಉದ್ಯೋಗವಕಾಶ; 270 ತಾಂತ್ರಿಕ ಹುದ್ದೆಗೆ ನೇಮಕಾತಿ – Kannada News | NCL Assistant Foreman Recruitment 2026: 270 Technical Posts Open for Diploma/B.Tech Grads

ತಾಂತ್ರಿಕ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕರಿಗೆ ನಾರ್ದರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ (NCL) ಉತ್ತಮ ಅವಕಾಶವನ್ನು ಘೋಷಿಸಿದೆ. ಕೋಲ್ ಇಂಡಿಯಾ ಲಿಮಿಟೆಡ್‌ಗೆ ಸೇರಿರುವ ಈ ಸಂಸ್ಥೆಯು 270 ಸಹಾಯಕ ಫೋರ್‌ಮ್ಯಾನ್ (ತರಬೇತಿ) ಗ್ರೇಡ್–C ಹುದ್ದೆಗಳಿಗೆ ನೇರ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಮಧ್ಯಪ್ರದೇಶದ ಸಿಂಗ್ರೌಲಿ ಮತ್ತು ಉತ್ತರ ಪ್ರದೇಶದ ಸೋನ್‌ಭದ್ರ ಪ್ರದೇಶಗಳಲ್ಲಿರುವ ಕಲ್ಲಿದ್ದಲು ಗಣಿಗಳು ಹಾಗೂ ಸಂಬಂಧಿತ ಘಟಕಗಳಲ್ಲಿ ನಿಯೋಜಿಸಲಾಗುತ್ತದೆ. ಆಸಕ್ತರು ನಿಗದಿತ ಅವಧಿಯೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ…

Read More

ವ್ಯಾಲೆಂಟೈನ್ಸ್ ಡೇ ಹಿನ್ನೆಲೆ ಕೆಂಪು ಸುಂದರಿಗೆ ಭಾರೀ ಬೇಡಿಕೆ: ಕೆಂಗುಲಾಬಿ ಬೆಳೆದ ರೈತರ ಜೇಬಿಗೆ ಜಣಜಣ ಕಾಂಚಾಣ – Kannada News | Valentine Day Red Rose Boom: Chikkaballapur Farmers Rejoice in High Demand

ಕೆಂಪು ಗುಲಾಬಿ ಕಂಡರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಅದರಲ್ಲೂ ಪ್ರೇಮಿಗಳ ದಿನಾಚರಣೆ ಬೇರೆ. ಪ್ರೀತಿಯ ಹುಡುಗಿಯನ್ನು ಓಲೈಸಿಕೊಳ್ಳಲು, ಒಲಿಯದ ಹುಡುಗನನ್ನು ತಬ್ಬಿಕೊಳ್ಳಲು ರೆಡ್ ರೋಸ್ ಬೇಕೇಬೇಕು. ಹೀಗಾಗಿ ರೆಡ್ ರೋಸ್​​ಗೆ ಭಾರೀ ಡಿಮ್ಯಾಂಡ್ ಬಂದಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.  ಫೆಬ್ರವರಿ 14 ಬಂದರೆ ಸಾಕು ಪ್ರೇಮಿಗಳಿಗೆ ಎಲ್ಲಿಲ್ಲದ ರೋಮಾಂಚನ. ಮತ್ತೊಂದೆಡೆ ಇದೇ ಪ್ರೇಮಿಗಳ ದಿನದಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗುಲಾಬಿ ಬೆಳೆದ ರೈತರ ಮೊಗದಲ್ಲಿ ಮಂದಹಾಸ ಮೂಡುತ್ತೆ. ದೊಡ್ಡದೊಡ್ಡ ವರ್ತಕರು ತಲಾ ಒಂದು ರೆಡ್…

Read More

Sarla Maheshwari Death: ದೂರದರ್ಶನದ ಜನಪ್ರಿಯ ನಿರೂಪಕಿ ಸರಳ ಮಹೇಶ್ವರಿ ನಿಧನ – Kannada News | Sarla maheshwari death doordarshan veteran anchor dies at 71

ನವದೆಹಲಿ, ಫೆಬ್ರವರಿ 12: ದೂರದರ್ಶನದ ಜನಪ್ರಿಯ ನಿರೂಪಕಿ ಸರಳ ಮಹೇಶ್ವರಿ ತಮ್ಮ 71ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸರಳ ಮಹೇಶ್ವರಿ ಅವರನ್ನು ಕೇವಲ ಸುದ್ದಿ ವಾಚಕಿಯಾಗಿ ಮಾತ್ರವಲ್ಲ, ದೂರದರ್ಶನದ (Doordarshan) ಸುದ್ದಿಗಳು ಸ್ಪಷ್ಟತೆ, ಘನತೆ ಮತ್ತು ನಂಬಿಕೆಯನ್ನು ಉಳಿಸಿಕೊಂಡಿದ್ದ ಯುಗದ ಕಾಲದ ಕೊಂಡಿಯಾಗಿದ್ದರು. ಸುದ್ದಿಗೆ ಸೊಬಗು ಮತ್ತು ಸರಳತೆಯನ್ನು ನೀಡಿದ ಸಾಂಸ್ಕೃತಿಕ ವ್ಯಕ್ತಿಯಾಗಿ ಅವರನ್ನು ಸ್ಮರಿಸಲಾಗುತ್ತಿದೆ. ಸರಳ ಮಹೇಶ್ವರಿ ಅವರ ಕಾಲದಲ್ಲಿ ಡಿಜಿಟಲ್ ಮಾಧ್ಯಮಗಳು, ಇಡೀ ದಿನ ಸುದ್ದಿ ಪ್ರಸಾರ ಮಾಡುವ ನ್ಯೂಸ್ ಚಾನೆಲ್​ಗಳು, ಯೂಟ್ಯೂಬ್ ಚಾನೆಲ್​ಗಳು, ಸೋಷಿಯಲ್…

Read More

ಸೈಫ್ ಅಲಿ ಖಾನ್ ಧರಿಸಿರುವ ಪುಟ್ಟ ವಸ್ತುವಿನ ಬೆಲೆಯಲ್ಲಿ ಒಳ್ಳೆ ಮನೆ ಕಟ್ಟಿಸಬಹುದು – Kannada News | Saif Ali Khan wore 42 lakh rs worth Broach here is the details

ಬಾಲಿವುಡ್‌ನ (Bollywood) ‘ನವಾಬ’ ಎಂದೇ ಖ್ಯಾತರಾಗಿರುವ ಸೈಫ್ ಅಲಿ ಖಾನ್ ತಮ್ಮ ಸ್ಟೈಲ್ ಮತ್ತು ರಾಯಲ್ ಲುಕ್‌ನಿಂದ ಸುದ್ದಿಯಲ್ಲಿರುತ್ತಾರೆ. ರಾಯಲ್ ಕುಟುಂಬದ ಸೈಫ್ ಅಲಿ ಖಾನ್, ಬಾಲಿವುಡ್​ನ ಖಾನ್​​ಗಳಷ್ಟು ಸ್ಟಾರ್ ಎನಿಸಿಕೊಳ್ಳದಿದ್ದರೂ ರಾಯಲ್​​ನೆಸ್​​ಗೆ ಏನೂ ಕಡಿಮೆ ಇಲ್ಲ. ಸಾವಿರಾರು ಕೋಟಿ ಮೌಲ್ಯದ ಅರಮನೆ, ಆಸ್ತಿಗಳು ಸಾಕಷ್ಟಿದೆ. ಇದೇ ಕಾರಣಕ್ಕೆ ಅವರು ತಮ್ಮ ನವಾಬಿ ಕುಟುಂಬದ ಘನತೆಗೆ ತಕ್ಕಂತೆ ನವಾಬರಂತೆ ಬದುಕುತ್ತಿದ್ದಾರೆ. ಸೈಫ್ ಅಲಿ ಖಾನ್ ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಕಪ್ಪು ಬಣ್ಣದ ವೆಲ್ವೆಟ್ ಸೂಟ್ ಧರಿಸಿದ್ದರು. ಆದರೆ,…

Read More

ಸಚಿವ ಜಮೀರ್ ಆಪ್ತ ಕಾರ್ಯದರ್ಶಿ ಮೇಲಿನ ಲೋಕಾಯುಕ್ತ ಕೇಸ್​​ಗೆ ಹೈಕೋರ್ಟ್​​ ತಡೆ – Kannada News | Zameer Khan PS Lokayukta Case: High Court Stays Disproportionate Assets Probe

ಸರ್ದಾರ್ ಸರ್ಫರಾಜ್ ಖಾನ್​​ಗೆ ತಾತ್ಕಾಲಿಕ ರಿಲೀಫ್​Image Credit source: Tv9 Kannada ಬೆಂಗಳೂರು, ಫೆಬ್ರವರಿ 12: ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಕಾರ್ಯದರ್ಶಿ ಸರ್ದಾರ್ ಸರ್ಫರಾಜ್ ಖಾನ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್​​ಗೆ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ತಡೆ ನೀಡಿ ಆದೇಶಿಸಿದೆ. ಅರ್ಜಿದಾರರ ಪರ ವಾದಿಸಿದ್ದ ಹಿರಿಯ ವಕೀಲ ಸಿ.ಹೆಚ್.ಜಾಧವ್, ಆಸ್ತಿಗಳ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಘೋಷಣೆ ಮಾಡಿಕೊಂಡಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಆದರೆ ಲೋಕಾಯುಕ್ತ ಪರ ವಕೀಲ…

Read More

Kiss Day 2026 Date: ವ್ಯಾಲೆಂಟೈನ್‌ ವೀಕ್‌ನಲ್ಲಿ ಕಿಸ್‌ ಡೇ ಆಚರಿಸುವುದೇಕೆ? ಈ ದಿನದ ಹಿನ್ನೆಲೆಯನ್ನು ತಿಳಿಯಿರಿ – Kannada News | Kiss Day 2026: Know the history and significance of Kiss Day

ವ್ಯಾಲೆಂಟೈನ್‌ ವೀಕ್‌ನ ಆರನೇ ದಿನ ಕಿಸ್‌ ಡೇಯನ್ನು (Kiss Day) ಆಚರಿಸಲಾಗುತ್ತದೆ. ಕಿಸ್ ಡೇ ಕೇವಲ ಪ್ರಣಯದ ದಿನವಲ್ಲ, ಇದು ಸಂಬಂಧದಲ್ಲಿ ಅನ್ಯೋನ್ಯತೆಯನ್ನು ಹೆಚ್ಚಿಸುವ ಮತ್ತು ಭಾವನಾತ್ಮಕ ಬಂಧಗಳನ್ನು ಬಲಪಡಿಸುವ ಒಂದು ಮಾರ್ಗವಾಗಿದೆ. ಹಾಗಾಗಿ ಈ ದಿನ ಪ್ರತಿಯೊಬ್ಬ ಪ್ರೇಮಿಗೂ ತುಂಬಾನೇ ವಿಶೇಷವಾದ ದಿನವಾಗಿದೆ. ಈ ದಿನದಂದು ಸಂಗಾತಿಗಳು ಪರಸ್ಪರ ಸಿಹಿ ಮುತ್ತನಿಡುವ ಮೂಲಕ ತಮ್ಮ ಪ್ರೀತಿಯ ಬಂಧವನ್ನು ಮತ್ತಷ್ಟು ಬಲಪಡಿಸುತ್ತಾರೆ. ಪ್ರೇಮಿಗಳ ವಾರದಂದು ಕಿಸ್‌ ಡೇ ಆಚರಿಸುವ ಪದ್ಧತಿ ಆರಂಭವಾಗಿದ್ದು ಹೇಗೆ, ಈ ದಿನದ ಹಿನ್ನೆಲೆಯೇನು…

Read More

ನಾಳೆಗೆ ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ ಎಂದ ಡಿಕೆ ಶಿವಕುಮಾರ್​​ – Kannada News | Tomorrow marks 1,000 days for the state government: DK Shivakumar Announces 6th Guarantee

ಬೆಂಗಳೂರು, ಫೆಬ್ರವರಿ 12: ನಾಳೆಗೆ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು 1 ಸಾವಿರ ದಿನ. ಹಾಗಾಗಿ ನಾಳೆ ಹಾಗೂ ನಾಡಿದ್ದು ನೀರಾವರಿ ವಿಚಾರದಲ್ಲಿ ಸಮ್ಮೇಳನವನ್ನು ಹಮ್ಮಿಕೊಂಡಿದ್ದೇವೆ. ಕೇಂದ್ರ ಮಂತ್ರಿಗಳು, ಸಿಎಂ ಸಿದ್ದರಾಮಯ್ಯ ಭಾಗಿಯಾಗುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್​ ಹೇಳಿದ್ದಾರೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆರನೇ ಗ್ಯಾರಂಟಿ ಯೋಜನೆಯಾದ ಭೂಮಿ ಗ್ಯಾರಂಟಿ ಬಗ್ಗೆ ಮಾಹಿತಿ ನೀಡಿದ್ದಾರೆ. ಸಾರ್ವಜನಿಕರಿಗೆ ನಿವೇಶನಗಳಿಗೆ ಭೂಮಿ ಹಕ್ಕುಗಳನ್ನು ಒದಗಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಭೂಮಿ ಹಕ್ಕುಗಳಿಲ್ಲದ ಸಾಮಾನ್ಯ…

Read More

SL vs OMN: 19 ವರ್ಷಗಳ ನಂತರ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾಕ್ಕೆ ದಾಖಲೆಯ ಗೆಲುವು – Kannada News | Sri Lanka Dominates Oman by 105 Runs in T20 World Cup 2026: Records Largest Win

ಸಹ ಆತಿಥೇಯ ರಾಷ್ಟ್ರ ಶ್ರೀಲಂಕಾ 2026 ರ ಟಿ20 ವಿಶ್ವಕಪ್​ನಲ್ಲಿ (T20 World Cup 2026) ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಪಂದ್ಯಾವಳಿಯ 16ನೇ ಪಂದ್ಯದಲ್ಲಿ ಓಮನ್ ತಂಡವನ್ನು ಎದುರಿಸಿದ್ದ ಶ್ರೀಲಂಕಾ (Sri Lanka vs Oman) ಬರೋಬ್ಬರಿ 105 ರನ್​ಗಳ ಅಂತರದ ಗೆಲುವು ದಾಖಲಿಸಿತು. ಈ ಮೂಲಕ ಲಂಕಾ ತಂಡ ಈ ಆವೃತ್ತಿಯಲ್ಲಿ ಅತಿ ದೊಡ್ಡ ಅಂತರದಿಂದ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಲಂಕಾಗೂ ಮೊದಲು ಯಾವುದೇ ತಂಡ ಈ ಆವೃತ್ತಿಯಲ್ಲಿ 100…

Read More