ಆರ್ಬಿಐ ಹರಸಾಹಸ ಪಟ್ಟರೂ ನಿಲ್ಲದ ರುಪಾಯಿ ಮೌಲ್ಯ ಕುಸಿತ; ಮೊದಲ ಬಾರಿಗೆ 95ರ ಮೈಲಿಗಲ್ಲು ದಾಟಿದ ಭಾರತೀಯ ಕರೆನ್ಸಿ
ನವದೆಹಲಿ, ಮಾರ್ಚ್ 30: ಭಾರತದ ಕರೆನ್ಸಿಯಾದ ರುಪಾಯಿ ಅಮೆರಿಕದ ಡಾಲರ್ (US dollar vs Indian Rupee) ಎದುರು ಕುಸಿತ ಕಾಣುವುದು ಮುಂದುವರಿದಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ರುಪಾಯಿ ಮೌಲ್ಯವು 95ರ ಗಡಿದಾಟಿ ಕುಸಿತ ಕಂಡಿದೆ. ವಿದೇಶೀ ವಿನಿಮಯ ಮಾರುಕಟ್ಟೆಯಲ್ಲಿ ಸೋಮವಾರ ಡಾಲರ್ ಎದುರು ರುಪಾಯಿ 95.21 ಮಟ್ಟಕ್ಕೆ ಕುಸಿಯಿತು. ಭಾರತದ ಕರೆನ್ಸಿ ಮೌಲ್ಯದ ಕುಸಿತವನ್ನು ತಪ್ಪಿಸಲು ರಿಸರ್ವ್ ಬ್ಯಾಂಕ್ ಕೈಗೊಂಡ ಕೆಲ ಕ್ರಮಗಳು ನಿರೀಕ್ಷಿತ ಫಲ ಕೊಡಲಿಲ್ಲ. ವಿದೇಶೀ ಹೂಡಿಕೆಗಳ ಹೊರಹರಿವು ಸತತವಾಗಿ ನಡೆಯುತ್ತಿರುವುದು ರುಪಾಯಿ…