ಬೆಂಗಳೂರು ರೋಡ್ರೇಜ್ನ ಈ ವಿಡಿಯೋ ನೋಡಿದ್ರೆ ಎದೆ ಝಲ್ ಎನ್ನುತ್ತೆ! – Kannada News | Bengaluru Road Rage: Man Dragged on Car Bonnet for 1 Km in HAL, Driver Arrested for Attempt to Murder
ಬೆಂಗಳೂರು, ಫೆಬ್ರವರಿ 12: ಬೆಂಗಳೂರಿನ (Bangalore) ಹೆಚ್ಎಎಲ್ (HAL) ರಸ್ತೆಯಲ್ಲಿ ನಡೆದ ಭಯಾನಕ ಘಟನೆಯೊಂದು ಸಾರ್ವಜನಿಕರನ್ನು ಬೆಚ್ಚಿಬೀಳುವಂತೆ ಮಾಡಿದೆ. ಕಾರು ಮತ್ತು ಗೂಡ್ಸ್ ವಾಹನ ಚಾಲಕರ ನಡುವೆ ಸಣ್ಣ ಗಲಾಟೆ ನಡೆದು, ಬಳಿಕ ಕಾರು ಚಾಲಕ ಗೂಡ್ಸ್ ವಾಹನದ ಚಾಲಕನನ್ನು ತನ್ನ ಕಾರಿನ ಬಾನೆಟ್ ಮೇಲೆ ಹೊತ್ತೊಯ್ದ ಘಟನೆ ಬುಧವಾರ ಮಧ್ಯಾಹ್ನ ಸುಮಾರು 12.45ರ ಸುಮಾರಿಗೆ ನಡೆದಿದೆ. ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ, ಗೂಡ್ಸ್ ವಾಹನ ಮತ್ತು ಕಾರು ಟಚ್ ಆಗಿದ್ದ ಹಿನ್ನೆಲೆಯಲ್ಲಿ ಇಬ್ಬರು ಚಾಲಕರ ನಡುವೆ…