ಮುಸ್ಲಿಂ ಯುವಕನ ಮದುವೆ ಸಂಭ್ರಮದ ವೇಳೆ ದೈವಕ್ಕೆ ಅವಮಾನ? ವಿವಾದಕ್ಕೆ ಕಾರಣವಾಯ್ತು ವರನ ವೇಷ
ಮಡಿಕೇರಿ, ಮಾರ್ಚ್ 30: ಮಡಿಕೇರಿ ತಾಲ್ಲೂಕಿನ ಎಮ್ಮೆಮಾಡು ಗ್ರಾಮದಲ್ಲಿ ಮುಸ್ಲಿಂ ಯುವಕನೋರ್ವನ ವಿವಾಹದ ಹಿಂದಿನ ದಿನ ಮಧುಮಗನಿಗೆ ಎಲೆಗಳನ್ನ ಸುತ್ತಿ, ಮುಖಕ್ಕೆ ಬಣ್ಣ ಬಳಿದು ಹಾಡುತ್ತಾ ಎಂಜಾಯ್ ಮಾಡಿರೋದೀಗ ಹೊಸ ವಿವಾದ ಹುಟ್ಟುಹಾಕಿದೆ. ಇದು ದೈವ ನರ್ತನವನ್ನು ಹೋಲುತ್ತಿದ್ದು, ತುಳುನಾಡು ಮತ್ತು ಕೊಡಗಿನ ದೈವ ಸಂಸ್ಕೃತಿಗೆ ಅವಮಾನ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮೈ ತುಂಬಾ ಸೊಪ್ಪು, ಬಾಳೆಕೊನೆ, ಮುಖದ ತುಂಬ ಬಣ್ಣ ಮತ್ತು ಕೈಯಲ್ಲಿ ದೊಣ್ಣೆ ಹಿಡಿದಿರೋ ಯುವಕನ ವಿಡಿಯೋ ವೈರಲ್ ಆಗಿರುವ ಬೆನ್ನಲ್ಲೇ…