Video: ಮಂಚದ ಪೆಟ್ಟಿಗೆಯಲ್ಲಿ 13 ವರ್ಷದ ಬಾಲಕಿಯನ್ನು ಅಡಗಿಸಿಟ್ಟಿದ್ದ ಮನೆ ಮಾಲೀಕ – Kannada News | Guwahati Horror: Teen Rescued After Being Hidden Inside Bed Box
ಗುವಾಹಟಿ, ಫೆಬ್ರವರಿ 05: ಗುವಾಹಟಿಯ ಮನೆಯೊಂದರಲ್ಲಿ ವ್ಯಕ್ತಿಯೊಬ್ಬ ಮಂಚದ ಪೆಟ್ಟಿಗೆಯಲ್ಲಿ 13 ವರ್ಷದ ಬಾಲಕಿಯನ್ನು ಅಡಗಿಸಿಟ್ಟಿದ್ದ ವಿಡಿಯೋ ವೈರಲ್ ಆಗಿದೆ. ಮಕ್ಕಳ ಮೇಲಿನ ದೌರ್ಜನ್ಯದ ಪ್ರಕರಣ ಬೆಳಕಿಗೆ ಬಂದಿದ್ದು, ಅಧಿಕಾರಿಗಳು ಬಾಲಕಿಯನ್ನು ಮಂಚದ ಪೆಟ್ಟಿಗೆಯಿಂದ ಹೊರಗೆ ತೆಗೆಯುತ್ತಿರುವುದನ್ನು ಕಾಣಬಹುದು. ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಮನೆಗೆಲಸಗಾರರಾಗಿ ನೇಮಿಸಿಕೊಂಡು ದೌರ್ಜನ್ಯವೆಸಗುವವರ ಸಂಖ್ಯೆ ಹೆಚ್ಚಾಗಿದೆ. ಬಾಲಕಿ ಸುಮಾರು ಆರು ವರ್ಷಗಳಿಂದ ಆ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮನೆ ಮಾಲೀಕ ಅರಿನಾ ಲಸ್ಕರ್ ಖತುನ್, ಬಾಲಕಿಯ ಮೇಲೆ ಪದೇ…