ಟಿ20 ವಿಶ್ವಕಪ್ನಲ್ಲಿ 10 ಹೊಸ ನಿಯಮಗಳು ಜಾರಿ! – Kannada News | New Rules in ICC T20 World Cup 2026
ಬಹುನಿರೀಕ್ಷಿತ ಟಿ20 ವಿಶ್ವಕಪ್ಗೆ ವೇದಿಕೆ ಸಿದ್ಧವಾಗಿದೆ. ಫೆಬ್ರವರಿ 7 ರಿಂದ ಶುರುವಾಗಲಿರುವ 20 ತಂಡಗಳ ಚುಟಕು ಮಹಾ ಸಮರಕ್ಕೂ ಮುನ್ನವೇ ಐಸಿಸಿ ಕೆಲ ನಿಯಮಗಳನ್ನು ಜಾರಿಗೊಳಿಸಿದೆ. ಈ ನಿಯಮಗಳ ಮೂಲಕ ಪಂದ್ಯವನ್ನು ಮತ್ತಷ್ಟು ರೋಚಕ ಹಾಗೂ ನ್ಯಾಯಯುತವಾಗಿ ಆಯೋಜಿಸಲು ನಿರ್ಧರಿಸಲಾಗಿದೆ. ಅದರಂತೆ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಜಾರಿಯಲ್ಲಿರುವ ಹೊಸ ನಿಯಮಗಳಾವುವು ಎಂದು ನೋಡುವುದಾದರೆ… ಸ್ಟಾಪ್ ಕ್ಲಾಕ್ ನಿಯಮ: ಓವರ್‌ಗಳ ನಡುವೆ ಕಡ್ಡಾಯ 60-ಸೆಕೆಂಡ್‌ಗಳ “ಸ್ಟಾಪ್ ಕ್ಲಾಕ್” ಈಗ ಜಾರಿಯಲ್ಲಿರಲಿದೆ. ಅಂದರೆ ಹಿಂದಿನ ಓವರ್ ಮುಗಿದ ಒಂದು…