Viral Video: ಆಹಾರ ಡೆಲಿವರಿ ಏಜೆಂಟ್ಗೆ ಸ್ಮಶಾನದಿಂದ ಬಂತೊಂದು ಕರೆ – Kannada News | Food Delivery Takes Unexpected Turn at Graveyard, Video Sparks Online Buzz
ನವದೆಹಲಿ, ಫೆಬ್ರವರಿ 04: ಸಾಮಾನ್ಯವಾಗಿ ರಾತ್ರಿ ಹೊತ್ತು ಸ್ಮಶಾನದ ಅಕ್ಕಪಕ್ಕದ ಜಾಗದಲ್ಲಿ ಹಾದುಹೋಗುವಾಗಲೇ ಜೀವ ಬಾಯಿಗೆ ಬಂದಂಥಾ ಅನುಭವವಾಗುತ್ತೆ. ಇನ್ನು ಸ್ಮಶಾನದಿಂದಲೇ ಕಾಲ್ ಬಂದರೆ ಭಯವಾಗದೇ ಇದ್ದೀತೆ. ಆಹಾರ ವಿತರಣಾ ಏಜೆಂಟ್ಗೆ ತಡರಾತ್ರಿ ಸ್ಮಶಾನದಿಂದ ಕರೆ ಬಂದಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಸಣ್ಣ ವಿಡಿಯೋದಲ್ಲಿ ಡೆಲಿವರಿ ಏಜೆಂಟ್ ಗ್ರಾಹಕನಿಗೆ ಕರೆ ಮಾಡಿ ಆ ಜಾಗವನ್ನು ತಲುಪಿದ್ದರು. ಫೋನ್‌ನಲ್ಲಿರುವ ಮಹಿಳೆ ಶಾಂತವಾಗಿ ಅವರಿಗೆ ಮುಂದೆ ನಡೆಯಲು ಹೇಳುತ್ತಾಳೆ. ನಾಯಿಯನ್ನು ತೋರಿಸುತ್ತಾಳೆ ಮತ್ತು ಚಿಂತಿಸಬೇಡಿ ಎಂದೂ…