IND vs NZ: ಸಂಜು ಬದಲು ಕಿಶನ್ ವಿಕೆಟ್‌ಕೀಪರ್; ಸ್ಯಾಮ್ಸನ್ ವೃತ್ತಿಜೀವನ ಅಂತ್ಯ
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯ ತಿರುವನಂತಪುರದ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯವು ಸಂಜು ಸ್ಯಾಮ್ಸನ್‌ಗೆ ವಿಶೇಷವಾಗಿತ್ತು, ಏಕೆಂದರೆ ಇದು ಅವರ ತವರು ನೆಲದಲ್ಲಿ ಮೊದಲ ಅಂತರರಾಷ್ಟ್ರೀಯ ಪಂದ್ಯವಾಗಿತ್ತು. ಹೀಗಾಗಿ ಕೇರಳ ಅಭಿಮಾನಿಗಳು ಕೂಡ ಲೋಕಲ್ ಹುಡುಗನ ಆಟವನ್ನು ಕಣ್ತುಂಬಿಕೊಳ್ಳಲು ಕಾದು ಕುಳಿತಿದ್ದರು. ಆದರೆ ಸಂಜು ಆ ಸಂದರ್ಭವನ್ನು ಸ್ಮರಣೀಯವಾಗಿಸಲು ಸಾಧ್ಯವಾಗಲಿಲ್ಲ. ವಾಸ್ತವವಾಗಿ ಈ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್ ಅವರ ಬ್ಯಾಟ್ ಸಂಪೂರ್ಣವಾಗಿ…