ಹಿಮಪಾತದಿಂದ ಉತ್ತರಾಖಂಡದ 77 ಗ್ರಾಮಗಳಿಗೆ ಸಂಕಷ್ಟ, ರಸ್ತೆಗಳು ಬಂದ್, ಪ್ರವಾಸಿಗರು ಕಂಗಾಲು – Kannada News | Snowfall in Uttarakhand 77 villages affected roads blocked in Chamoli
ಡೆಹ್ರಾಡೂನ್, ಜನವರಿ 29: ಉತ್ತರಾಖಂಡದಲ್ಲಿ ಹಿಮಪಾತದ (Snowfall) ಪರಿಣಾಮದಿಂದ ಅನೇಕ ಪ್ರವಾಸಿಗರು ಮಧ್ಯದಲ್ಲೇ ಸಿಲುಕಿಕೊಂಡಿದ್ದಾರೆ. ಚಮೋಲಿಯಲ್ಲಿ 77 ಗ್ರಾಮಗಳು ಹಿಮಪಾತದಿಂದ ತೊಂದರೆಗೆ ಸಿಲುಕಿವೆ, ರಸ್ತೆಗಳ ಸಂಪರ್ಕ ಸ್ಥಗಿತಗೊಂಡಿದೆ, ಪ್ರವಾಸಿಗರು ತಮ್ಮ ಊರನ್ನು ತಲುಪಿದರೆ ಸಾಕಪ್ಪ ಎಂದು ಚಡಪಡಿಸುತ್ತಿದ್ದಾರೆ. ಭಾರೀ ಹಿಮಪಾತವಾಗುತ್ತಿರುವುದರಿಂದ ಪ್ರವಾಸಿಗರು ಹೆಚ್ಚು ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾಡಳಿತ ಸೂಚಿಸಿದೆ. ಕಳೆದ 4 ದಿನಗಳಿಂದ ಉತ್ತರಾಖಂಡದಲ್ಲಿ ಹವಾಮಾನ ಅಸ್ಥಿರವಾಗಿದ್ದು, ತಡರಾತ್ರಿಯ ಮಳೆ, ಆಲಿಕಲ್ಲು ಮಳೆ ಮತ್ತು ಭಾರೀ ಹಿಮಪಾತವು ಹಲವಾರು ಜಿಲ್ಲೆಗಳಲ್ಲಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಅವುಗಳಲ್ಲಿ ಚಮೋಲಿ ಅತ್ಯಂತ…