12 ಕೋಟಿ ರೂ. ಕಾರು ಖರೀದಿಸಿ, 10 ನಿಮಿಷದಲ್ಲಿ ಬೋರ್ ಆಯ್ತು ಎಂದ ಗಾಯಕ ಬಾದ್ಷಾ – Kannada News | Singer Badshah talks about Rolls Royce Cullinan Series 2
ಗಾಯಕ ಬಾದ್ಷಾ (Singer Badshah) ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಆ ಬೇಡಿಕೆಗೆ ತಕ್ಕಂತೆ ಅವರಿಗೆ ಸಂಭಾವನೆ ಸಿಗುತ್ತದೆ. ಪ್ರತಿ ಹಾಡಿಗೆ ಅಂದಾಜು 20 ಲಕ್ಷ ರೂಪಾಯಿ ಸಂಭಾವನೆ ಪಡೆಯುವ ಅವರ ಲೈಫ್ ಸ್ಟೈಲ್ ಕೂಡ ಐಷಾರಾಮಿ ಆಗಿದೆ. ದುಬಾರಿ ವಸ್ತುಗಳ ಬಗ್ಗೆ ಅವರು ಸಖತ್ ಕ್ರೇಜ್ ಇದೆ. ಜಗತ್ತಿನ ಅತಿ ದುಬಾರಿ ಜಾಕೆಟ್, ಶೂ, ಕಾರುಗಳು ಬಾದ್ಚಾ ಅವರ ಬಳಿ ಇವೆ. ಅಚ್ಚರಿ ಏನೆಂದರೆ, 12 ಕೋಟಿ ರೂಪಾಯಿ ಬೆಲೆ ಬಾಳುವ ರೋಲ್ಸ್ ರಾಯ್ಸ್ (Rolls…