‘ಟಾಕ್ಸಿಕ್’ ಸಿನಿಮಾ ಟೀಸರ್ನಲ್ಲಿ ಅಶ್ಲೀಲತೆ: ಸಿಬಿಎಫ್ಸಿ ಮುಖ್ಯಸ್ಥ ಹೇಳಿದ್ದೇನು? – Kannada News | CBFC Chief talks about Toxic movie teaser and its controversy
ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆ ಆಗಿ ಕೆಲ ವಾರಗಳಾಗಿವೆ. ಟೀಸರ್, ಈಗಾಗಲೇ ದಾಖಲೆ ಸಂಖ್ಯೆಯ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ಸಹ ಕೋಟ್ಯಂತರ ಮಂದಿ ‘ಟಾಕ್ಸಿಕ್’ ಸಿನಿಮಾದ ಟೀಸರ್ ನೋಡಿದ್ದಾರೆ. ಟೀಸರ್ನ ಗುಣಮಟ್ಟವನ್ನು ಬಹುವಾಗಿ ಕೊಂಡಾಡಿದ್ದಾರಾದರೂ ಕೆಲವರು, ಟೀಸರ್ನಲ್ಲಿ ಅನವಶ್ಯಕ ಅಶ್ಲೀಲತೆ ಇದೆ ಎಂದು ಮೂಗು ಮುರಿದಿದ್ದಾರೆ. ಕೆಲವರು ಈಗಾಗಲೇ ಮಕ್ಕಳ ಆಯೋಗ, ಮಹಿಳಾ ಆಯೋಗಕ್ಕೆ ಈ ಬಗ್ಗೆ ದೂರು ಸಹ ನೀಡಿದ್ದಾರೆ. ಸಿಬಿಎಫ್ಸಿಗೆ ಸಹ ಈ ಬಗ್ಗೆ ದೂರು ನೀಡಲಾಗಿದ್ದು,…