ಷೇರುಬಜಾರಿನಲ್ಲಿ ಭಾರಿ ಗೂಳಿ ಓಟ; ಗರಿಬಿಚ್ಚಿದ ಸೆನ್ಸೆಕ್ಸ್, ನಿಫ್ಟಿ; ಮಾರುಕಟ್ಟೆಯ ಭರ್ಜರಿ ಆಟಕ್ಕೆ ಕಾರಣಗಳೇನು? – Kannada News | Indian Stock Market Surges: Sensex Jumps 1700 Pts, Nifty Crosses 23600 – Why?
ನವದೆಹಲಿ, ಜೂನ್ 12: ಭಾರತೀಯ ಷೇರು ಮಾರುಕಟ್ಟೆ (India Stock Market) ಇಂದು ಶುಕ್ರವಾರ ಭಾರಿ ಏರಿಕೆ ಕಂಡಿದೆ. ಬಿಎಸ್‌ಇ ಸೆನ್ಸೆಕ್ಸ್ (BSE Sensex) ಸುಮಾರು 1,700 ಅಂಕಗಳಷ್ಟು ಜಿಗಿತ ಸಾಧಿಸಿದರೆ, ಎನ್‌ಎಸ್‌ಇ ನಿಫ್ಟಿ (NSE Nifty 50) ಮತ್ತೆ 23,600 ರ ಮಟ್ಟವನ್ನು ದಾಟಿದೆ. ಈ ಭರ್ಜರಿ ಚೇತರಿಕೆಯಿಂದಾಗಿ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ ಸುಮಾರು 7 ಲಕ್ಷ ಕೋಟಿ ರೂಗಿಂತಲೂ ಹೆಚ್ಚು ಹೆಚ್ಚಾಗಿದೆ. ಮಾರುಕಟ್ಟೆ ಇವತ್ತು ಶೇ. 2ರಷ್ಟು ಜಿಗಿತ ಕಂಡಿರುವುದು ವಿಶೇಷ. ಸೆನ್ಸೆಕ್ಸ್…