ಶತಕಗಳ ಮೇಲೆ ಶತಕ… ಬಿಗ್ ಬ್ಯಾಷ್ನಲ್ಲಿ ಹೊಸ ದಾಖಲೆ ನಿರ್ಮಾಣ
BBL 2026: ಬಿಗ್ ಬ್ಯಾಷ್ ಲೀಗ್ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಅದು ಕೂಡ ಬ್ಯಾಟರ್ಗಳ ಸಿಡಿಲಬ್ಬರದೊಂದಿಗೆ. ಈ ಸಿಡಿಲಬ್ಬರದೊಂದಿಗೆ ಬಿಗ್ ಬ್ಯಾಷ್ ಲೀಗ್ ಸೀಸನ್ವೊಂದರಲ್ಲಿ ಅತ್ಯಧಿಕ ಸೆಂಚುರಿಗಳು ಮೂಡಿಬಂದಿವೆ. ಅಂದರೆ ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲೇ ಈ ಬಾರಿಯ ಆವೃತ್ತಿಯಲ್ಲಿ ಅತೀ ಹೆಚ್ಚು ಶತಕಗಳು ದಾಖಲಾಗಿವೆ. BBL 2025-26 ರಲ್ಲಿ ಈವರೆಗೆ 8 ಬ್ಯಾಟರ್ಗಳು ಬರೋಬ್ಬರಿ 9 ಸೆಂಚುರಿ ಸಿಡಿಸಿದ್ದಾರೆ. ಇದಕ್ಕೂ ಮುನ್ನ ಬಿಬಿಎಲ್ನಲ್ಲಿ ಆರಕ್ಕಿಂತ ಅಧಿಕ ಶತಕ ಮೂಡಿಬಂದಿರಲಿಲ್ಲ ಎಂಬುದು ವಿಶೇಷ. 2022-23 ರ ಸೀಸನ್ನಲ್ಲಿ…