Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಯವರು ಬೇರೆಯವರ ಜಗಳದಲ್ಲಿ ಮಧ್ಯಸ್ಥಿಕೆ ವಹಿಸಲು ಹೋಗಬೇಡಿ – Kannada News | Numerology Prediction: Birth Numbers 1, 2, 3 Horoscope for January 18
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1): ನೀವು ಮನೆಯಲ್ಲಿ ಹಳೆಯ ವಸ್ತುಗಳನ್ನು ವಿಂಗಡಿಸುವಾಗ ಅಥವಾ ಶುಚಿಗೊಳಿಸುವಾಗ ಪ್ರಮುಖವಾದ ದಾಖಲೆ ಅಥವಾ ಕಳೆದುಹೋಗಿದ್ದ ವಸ್ತುಗಳನ್ನು ಮರಳಿ ಪಡೆಯುವಿರಿ. ಸಂಜೆ ವೇಳೆ ಬಾಲ್ಯದ ಸ್ನೇಹಿತರ ಭೇಟಿಯಿಂದ ಮನಸ್ಸು ಹಗುರವಾಗಲಿದೆ. ನೀವು ತೆಗೆದುಕೊಳ್ಳುವ ನಿರ್ಧಾರವೊಂದು ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ದಾರಿಯಾಗಲಿದೆ. ವಿನಾಕಾರಣ ಬೇರೆಯವರ ಜಗಳದಲ್ಲಿ ಮಧ್ಯಸ್ಥಿಕೆ ವಹಿಸಲು ಹೋಗಬೇಡಿ. ನೀವು ಭವಿಷ್ಯದ ಯೋಜನೆಗಳ ಬಗ್ಗೆ ಚಿಂತನೆ ನಡೆಸಲು ಸೂಕ್ತ ಸಮಯ….