Gold Rate Today Bangalore: ಚಿನ್ನದ ಬೆಲೆ ಇಳಿಕೆ; ಬೆಳ್ಳಿ ಹೊಸ ದಾಖಲೆ – Kannada News | Gold Price Today on 15th January 2026, Gold And Silver Rates In Bengaluru, Delhi, Mumbai | Latest News in Kannada
ಬೆಂಗಳೂರು, ಜನವರಿ 15: ಚಿನ್ನದ ಬೆಲೆ ಗುರುವಾರ ತುಸು ಇಳಿಕೆಗೊಂಡಿದೆ. ಆದರೆ, ಬೆಳ್ಳಿ ಬೆಲೆಯ ನಾಗಾಲೋಟ ಮುಂದುವರಿದಿದೆ. ಇದರ ಬೆಲೆ ಇಂದು ಗ್ರಾಮ್ಗೆ 3ರಿಂದ 5 ರೂವರೆಗೆ ಏರಿಕೆ ಆಗಿದೆ. ಬೆಂಗಳೂರಿನಲ್ಲಿ 100 ಗ್ರಾಮ್ ಬೆಳ್ಳಿ ಬೆಲೆ 29,500 ರೂ ಮುಟ್ಟಿದೆ. ಕೆಲ ನಗರಗಳಲ್ಲಿ ಇದರ ಬೆಲೆ 31,000 ರೂಗೆ ಏರಿ ಹೋಗಿದೆ. ಚಿನ್ನದ ಬೆಲೆ (Gold Rates) ಭಾರತದಲ್ಲಿ ಗ್ರಾಮ್ಗೆ ಸುಮಾರು 40 ರೂನಷ್ಟು ಕಡಿಮೆ ಆಗಿದೆ. ವಿದೇಶಗಳಲ್ಲಿ ಮಿಶ್ರ ಫಲ ನೀಡಿದ್ದ ಏರಿಳಿತಗಳು ದಾಖಲಾಗಿವೆ….