ಲಕ್ಕುಂಡಿ ಸಿಕ್ಕ ನಿಧಿಗೆ ಇದೆ 300 ವರ್ಷಗಳ ಇತಿಹಾಸ, ಗ್ರಾಮಸ್ಥರಲ್ಲಿ ಶುರುವಾಯ್ತು ಹೊಸ ಆತಂಕ – Kannada News | Lakkundi Gold Treasure 300 year Old Says Gadag And villagers worried about treasure hunters
ಗದಗ, (ಜನವರಿ 14): ಜಿಲ್ಲೆಯ ಲಕ್ಕುಂಡಿಯಲ್ಲಿ ಸಿಕ್ಕ ನಿಧಿ (Lakkundi Gold Treasure) ಈಗ ಭಾರಿ ಚರ್ಚೆ ಹುಟ್ಟುಹಾಕಿದ್ದು, ಈ ಚಿನ್ನದ ಹಿನ್ನೆಲೆಯ ರಹಸ್ಯ ಬಯಲಾಗಿದೆ. ಹೌದು…ಜಿಲ್ಲಾಡಳಿತ ವಶಕ್ಕೆ ಪಡೆದ ಚಿನ್ನವನ್ನು ಪರಿಶೀಲನೆ ನಡೆಸಿದಾಗ ಚಿನ್ನ ಪುರಾತನ ಕಾಲದ್ದು, ಕಲ್ಯಾಣ ಚಾಳುಕ್ಯರು, ಹಾಗೂ ವಿಜಯನಗರದ ಸಾಮ್ರಾಜ್ಯದ ಆಡಳಿತದ ವೇಳೆಯ ಚಿನ್ನ ಎನ್ನುವುದು ಬಹಿರಂಗವಾಗಿದೆ. ಇನ್ನು ಈ ಬಗ್ಗೆ ಟಿವಿ9ಗೆ ಗದಗ (Gadag) ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಮಾಹಿತಿ ನೀಡಿದ್ದು, ಸಿಕ್ಕಿರುವ ನಿಧಿ ವಿಜಯನಗರ ಸಾಮ್ರಾಜ್ಯ ಅಥವಾ ಚಾಲುಕ್ಯರ ಕಾಲದ್ದು….