ಶಬರಿಮಲೆಗೆ ಹೋಗಿ ಬಂದ, ಬಳಿಕ ಪತ್ನಿ ಕೊಂದ: ಸಿನಿಮಾ ಸ್ಟೈಲ್ನಲ್ಲಿ ನಡೀತು ಹತ್ಯೆ! – Kannada News | Husband Kills Wife After Sabarimala Visit Over Second Marriage Row
ಆರೋಪಿ ಕುಮಾರ್ ಮತ್ತು ಮೃತ ಮಹಿಳೆ ರಾಧಾ. ಹಾಸನ, ಜನವರಿ 13: ಎರಡನೇ ಮದುವೆಯಾಗಿದ್ದನ್ನು ಪ್ರಶ್ನಿಸಿದ್ದಕ್ಕೆ ಮೊದಲ ಪತ್ನಿಯನ್ನ ಪತಿಯೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆ ಆಲೂರು ತಾಲೂಕಿನ ಯಡೂರು ಗ್ರಾಮದಲ್ಲಿ ನಡೆದಿದೆ. ಪತ್ನಿ ರಾಧಾ(40) ಮೃತ ದುರ್ದೈವಿಯಾಗಿದ್ದು, ಶವವನ್ನು ಪತಿ ನದಿಗೆ ಎಸೆದಿದ್ದ ಎನ್ನಲಾಗಿದೆ. ಜನವರಿ 10ರರಂದು ರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 22 ವರ್ಷಗಳ ಹಿಂದೆ ಕುಮಾರ ಜೊತೆ ರಾಧಾ ವಿವಾಹವಾಗಿತ್ತು. ಆದರೆ ತನ್ನ ಮೇಲೆ ಕುಮಾರ ಅನುಮಾನ…