ಗ್ರೋಕ್ ಅಶ್ಲೀಲ ಅವಾಂತರಗಳು; ತಪ್ಪೊಪ್ಪಿಕೊಂಡು ಭಾರತ ಸರ್ಕಾರದ ಆದೇಶ ಪಾಲಿಸಿದ ಎಕ್ಸ್ – Kannada News | X admits its mistakes over grok generated obscene content, says it will comply with Indian law
ನವದೆಹಲಿ, ಜನವರಿ 11: ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಆದ ಎಕ್ಸ್ನಲ್ಲಿ ಇತ್ತೀಚೆಗೆ ಎಐ ದುರುಪಯೋಗಪಡಿಸಿಕೊಂಡು ಅಶ್ಲೀಲ ಕಂಟೆಂಟ್ ಅನ್ನು ಸೃಷ್ಟಿಸುತ್ತಿರುವ ಪ್ರಕರಣ ಜಾಗತಿಕವಾಗಿ ಪಿಡುಗಾಗಿ ಪರಿಣಿಸಿದೆ. ಭಾರತ ಸರ್ಕಾರ ಈ ವಿಚಾರದಲ್ಲಿ ಗಂಭೀರವಾಗಿದ್ದು, ಗ್ರೋಕ್ (Grok AI) ಮೂಲಕ ಸೃಷ್ಟಿಯಾಗುತ್ತಿರುವ ಅಶ್ಲೀಲ ಕಂಟೆಂಟ್ ಅನ್ನು ಅಳಿಸಬೇಕೆಂದೂ ಮತ್ತು ಭಾರತೀಯ ಕಾನೂನು ನಿಯಮಗಳಿಗೆ ಬದ್ಧವಾಗಿರಬೇಕೆಂದೂ ಎಕ್ಸ್ಗೆ ಸರ್ಕಾರ ತಿಳಿಸಿತ್ತು. ಇದರ ಬೆನ್ನಲ್ಲೇ ಎಕ್ಸ್ (ಹಿಂದಿನ ಟ್ವಿಟ್ಟರ್) ತನ್ನಿಂದ ತಪ್ಪಾಗಿರುವುದನ್ನು ಒಪ್ಪಿಕೊಂಡಿದ್ದು, ಭಾರತೀಯ ಕಾನೂನಿಗೆ ಬದ್ಧವಾಗಿರುವುದಾಗಿ ಭರವಸೆ ನೀಡಿದೆ. ಸರ್ಕಾರದ…