ಕೋಗಿಲು ಬೆನ್ನಲ್ಲೇ ನಾಗವಾರ ಬಳಿ ಬೃಹತ್ ಒತ್ತುವರಿ ತೆರವು ಕಾರ್ಯಾಚರಣೆ: 30ಕ್ಕೂ ಹೆಚ್ಚು ಮನೆ, ಶೆಡ್, ಗ್ಯಾರೇಜ್ ಧ್ವಂಸ – Kannada News | Major Encroachment Eviction Drive Near Nagawara After Kogilu Operation, Over 30 Houses Demolished in Bengaluru
ಸಾರಾಯಿ ಪಾಳ್ಯದಲ್ಲಿ ಬಿಡಿಎಗೆ ಸೇರಿದ ಜಾಗ ಮರುಸ್ವಾಧೀನ ಬೆಂಗಳೂರು, ಜನವರಿ 9: ಕೋಗಿಲು ಲೇಔಟ್ನಲ್ಲಿ (Kogilu Layout) ಸರ್ಕಾರದ ಭೂಮಿ ಒತ್ತುವರಿ ಮಾಡಿದ್ದವರಿಗೆ ಬಿಗ್ ಶಾಕ್ ನೀಡಿದ ಬೆನ್ನಲ್ಲೇ ನಾಗವಾರದಲ್ಲೂ ಒತ್ತುವರಿ ತೆರವು ಕಾರ್ಯಾಚರಣೆ ತೀವ್ರಗೊಂಡಿದೆ. ನಾಗವಾರದ ಥಣಿಸಂದ್ರ ಬಳಿಯ ಸಾರಾಯಿ ಪಾಳ್ಯದಲ್ಲಿ ಬಿಡಿಎಗೆ (BDA) ಸೇರಿದ ಸರ್ವೆ ಸಂಬರ್ 28 ರ 2 ಎಕರೆ ಜಾಗವನ್ನು ಮರುಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಜಾಗದಲ್ಲಿದ್ದ 30ಕ್ಕೂ ಹೆಚ್ಚು ಮನೆ, ಶೆಡ್ ಹಾಗೂ ಗ್ಯಾರೇಜ್ಗಳನ್ನು ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸಿ ಕೆಡವಲಾಗಿದೆ. ಇನ್ನು…