ಥಿಯೇಟರ್ ಶೌಚಾಲಯದಲ್ಲಿ ಕ್ಯಾಮರಾ: ಮೊಬೈಲ್ನಲ್ಲಿ ಯುವತಿಯರ ಖಾಸಗಿ ವಿಡಿಯೋಗಳು ಪತ್ತೆ; ಕೇಸ್ ಬುಕ್ – Kannada News | Hidden Camera Found in Sandhya Theatre Women’s Toilet: FIR Filed Against Theatre Management and Staff
ಬೆಂಗಳೂರು, ಜನವರಿ 05: ಸಂಧ್ಯಾ ಥಿಯೇಟರ್‌ನ (Sandhya Theatre) ಬಾತ್ ರೂಮ್‌ನಲ್ಲಿ ಕ್ಯಾಮರಾ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ. ಮಹಿಳಾ ಟೆಕ್ಕಿ ದೂರಿನ ಮೇರೆಗೆ ಥಿಯೇಟರ್ ಹಾಗೂ ಸಿಬ್ಬಂದಿ ರಾಜೇಶ್, ಕಮಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸದ್ಯ ಆರೋಪಿಗಳನ್ನ ವಶಕ್ಕೆ ಪಡೆದು ಮಡಿವಾಳ ಪೊಲೀಸರಿಂದ ವಿಚಾರಣೆ ನಡೆದಿದೆ. ನಡೆದದ್ದೇನು? ರವಿವಾರದಂದು ಮಹಿಳಾ ಟೆಕ್ಕಿಯೊಬ್ಬರು ಸ್ನೇಹಿತರ ಜೊತೆ ಸಿನಿಮಾ ನೋಡಲು ಸಂಧ್ಯಾ ಥಿಯೇಟರ್ಗೆ ಹೋಗಿದ್ದರು. ಇಂಟರ್ವೆಲ್ ವೇಳೆ ವಾಶ್ ರೂಂಗೆ…