ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆ, ಕಾಂಪೌಂಡ್ಗಳ ತೆರವು – Kannada News | More Than 20 Houses Demolished on Mavinakere Road, Raichur
ರಾಯಚೂರು, ಡಿಸೆಂಬರ್ 29: ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ನಡೆದ ಅನಧಿಕೃತ ಮನೆಗಳ ತೆರವು ಕಾರ್ಯಾಚರಣೆ ವಿಚಾರ ದೇಶಾದ್ಯಂತ ಚರ್ಚೆಯಾಗುತ್ತಿರುವ ನಡುವೆ ರಾಯಚೂರಿನಲ್ಲೂ ಜೆಸಿಬಿಗಳು ಘರ್ಜಿಸಿವೆ. ನಗರದ ಮಾವಿನಕೆರೆ ರಸ್ತೆಯ ವಾರ್ಡ್ ನಂ. 4ರ ಮುಖ್ಯ ರಸ್ತೆಯ ಎರಡು ಬದಿಯಲ್ಲಿ 20 ಅಡಿ ತೆರವುಗೊಳಿಸಲಾಗಿದೆ. ರಾಯಚೂರು ಎಸಿ ಗಜಾನನ ಬಾಳೆ ನೇತೃತ್ವದಲ್ಲಿ 20ಕ್ಕೂ ಅಧಿಕ ಮನೆ, 25 ಕಾಂಪೌಂಡ್ ಮತ್ತು ಕಟ್ಟೆಗಳು ತೆರವು ಮಾಡಲಾಗಿದೆ. ಪೊಲೀಸ್ ಬಂದೋಬಸ್ತ್ನಲ್ಲಿ ತೆರವು ಕಾರ್ಯಾಚರಣೆ ನಡೆದಿದೆ. ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್…