Headlines

nagaraj11081993

ಇಸ್ರೇಲ್ – ಹೆಜ್ಬೊಲ್ಲಾ ಕದನ ವಿರಾಮ ಒಪ್ಪಂದ ನಾಳೆಯಿಂದ ಜಾರಿ; ಅಮೆರಿಕ ಘೋಷಣೆ – Kannada News | Israel and Hezbollah Agreed To Ceasefire Starting June 20 US Official announces

ನವದೆಹಲಿ, ಜೂನ್ 19: ಕಳೆದ ಹಲವು ತಿಂಗಳುಗಳಿಂದ ಇಸ್ರೇಲ್ (Israel) ಸೇನೆ ಮತ್ತು ಲೆಬನಾನ್ (Lebanon) ಮೂಲದ ಹೆಜ್ಬೊಲ್ಲಾ ಸಂಘಟನೆಯ ನಡುವೆ ಭಾರಿ ಪ್ರಮಾಣದ ಕ್ಷಿಪಣಿ ದಾಳಿಗಳು ಹಾಗೂ ವೈಮಾನಿಕ ದಾಳಿಗಳು ನಡೆಯುತ್ತಿದ್ದವು. ಈ ಯುದ್ಧವನ್ನು ಕೊನೆಗಾಣಿಸಲು ಅಮೆರಿಕ ಮತ್ತು ಇತರ ಅಂತಾರಾಷ್ಟ್ರೀಯ ಮಧ್ಯಸ್ಥಿಕೆದಾರರು ನಿರಂತರ ರಾಜತಾಂತ್ರಿಕ ಮಾತುಕತೆಗಳನ್ನು ನಡೆಸುತ್ತಿದ್ದರು. ಇದೀಗ ಕೊನೆಗೂ ಉಭಯ ದೇಶಗಳು ಶಾಂತಿಗೆ ಸಮ್ಮತಿಸಿವೆ. ಈ ಒಪ್ಪಂದದ ಅನ್ವಯ ನಾಳೆ ಮುಂಜಾನೆಯಿಂದಲೇ ಎರಡೂ ದೇಶದವರು ದಾಳಿಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾಗುತ್ತದೆ. ದಕ್ಷಿಣ ಲೆಬನಾನ್‌ನ ಗಡಿ…

Read More

IND vs AFG: ಭಾರತ- ಅಫ್ಘನ್ ನಡುವಿನ ಕೊನೆಯ ಏಕದಿನ ಪಂದ್ಯ ಎಲ್ಲಿ, ಎಷ್ಟು ಗಂಟೆಗೆ ಆರಂಭ? – Kannada News | India vs Afghanistan 3rd ODI: Clean Sweep Bid, Live Stream and Match Details

ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ (India vs Afghanistan) ಈಗಾಗಲೇ 2 ಪಂದ್ಯಗಳನ್ನು ಗೆದ್ದು ಸರಣಿಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ. ಈಗ ಟೀಂ ಇಂಡಿಯಾ ಮೂರನೇ ಮತ್ತು ಅಂತಿಮ ಪಂದ್ಯಕ್ಕೆ ಸಿದ್ಧವಾಗಿದೆ. ಈ ಪಂದ್ಯವನ್ನು ಗೆದ್ದು ಹ್ಯಾಟ್ರಿಕ್ ಗೆಲುವು ಸಾಧಿಸುವ ಅವಕಾಶ ಟೀಂ ಇಂಡಿಯಾಕ್ಕಿದೆ. ಅಲ್ಲದೆ, ಅಫ್ಘಾನಿಸ್ತಾನವನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡುವ ಅವಕಾಶ ಭಾರತಕ್ಕಿದೆ. ಮತ್ತೊಂದೆಡೆ ಮೂರನೇ ಪಂದ್ಯವನ್ನು ಗೆಲ್ಲುವ ಮೂಲಕ ಅಫ್ಘಾನಿಸ್ತಾನ, ಭಾರತದ ಪ್ರವಾಸವನ್ನು ಅಂತ್ಯಗೊಳಿಸಲು ಪ್ರಯತ್ನಿಸಲಿದೆ….

Read More

ಬಂಡಾಯ ಸಂಸದರ ವಿರುದ್ಧ ಕಾನೂನು ಸಮರಕ್ಕಿಳಿದ ಟಿಎಂಸಿ; 20 ರೆಬೆಲ್​ಗಳ ಅನರ್ಹತೆಗೆ ಸ್ಪೀಕರ್​ಗೆ ಮನವಿ – Kannada News | Abhishek Banerjee meets Speaker Om Birla demands disqualification of 20 rebel TMC MPs

ನವದೆಹಲಿ, ಜೂನ್ 19: ಪಶ್ಚಿಮ ಬಂಗಾಳದ ಸಾರ್ವತ್ರಿಕ ಚುನಾವಣೆಗಳ ಬೆನ್ನಲ್ಲೇ ಟಿಎಂಸಿ (TMC) ಪಕ್ಷದಲ್ಲಿ ಭಾರಿ ರಾಜಕೀಯ ಬಿರುಗಾಳಿ ಎದ್ದಿದೆ. ಪಕ್ಷದ ನಿಲುವಿಗೆ ವಿರುದ್ಧವಾಗಿ ಬಂಡಾಯ ಎದ್ದು, ಬೇರೆ ಪಕ್ಷದೊಂದಿಗೆ ವಿಲೀನ ಪ್ರಕ್ರಿಯೆಗೆ ಮುಂದಾಗಿರುವ 20 ಸಂಸದರ ವಿರುದ್ಧ ಟಿಎಂಸಿ ಹೈಕಮಾಂಡ್ ಕಠಿಣ ಕ್ರಮಕ್ಕೆ ಮುಂದಾಗಿದೆ. ನವದೆಹಲಿಯಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿರುವ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ, ಆ ಎಲ್ಲಾ 20 ಬಂಡಾಯ ಸಂಸದರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಬೇಕು ಎಂದು ಲಿಖಿತ ಮನವಿ…

Read More

ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ನಿಮ್ಮ ಮನೆಗೆ ಬರಲಿದ್ದಾರೆ ಚೆಕ್ಕಿಂಗ್ ಆಫೀರ್ಸ್ – Kannada News | Guarantee Schemes Revision: DK Shivakumar Governmnet to Plan Door To door survey for document verification

ಬೆಂಗಳೂರು, (ಜೂನ್ 19): ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಗಳಿಗೆ (guarantee schemes) ಆಪರೇಷನ್ ಮಾಡಲು ಸಿಎಂ ಡಿಕೆ ಶಿವಕುಮಾರ್ ಮುಂದಾಗಿದ್ದಾರೆ. ಯೋಜನೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಅನರ್ಹರಿಗೆ ಸಂಪೂರ್ಣವಾಗಿ ಬ್ರೇಕ್ ಹಾಕಿ ಅರ್ಹರಿಗೆ ಮುಟ್ಟಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದು, ಇದಕ್ಕಾಗಿ ನಾನಾ ನಿಯಮಗಳನ್ನ ಜಾರಿಗೆ ತರುವ ಚಿಂತನೆಗಳು ನಡೆದಿವೆ. ಇಂದು (ಜೂನ್ 19) ವಿಧಾನಸೌಧದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಹಿರಿಯ ಅಧಿಕಾರಿಗಳು ಹಾಗೂ ಸಚಿವರ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ…

Read More

‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ತಂದೆಯ ಸ್ಮರಿಸಿದ ವಿನೋದ್ ಪ್ರಭಾಕರ್ – Kannada News | Vinod Prabhakar remembers his father Tiger Prabhakar in Balaramana Dinagalu movie press meet

ಬಹುನಿರೀಕ್ಷಿತ ‘ಬಲರಾಮನ ದಿನಗಳು’ (Balaramana Dinagalu) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ತಂದೆ ಟೈಗರ್ ಪ್ರಭಾಕರ್ ಅವರನ್ನು ವಿನೋದ್ ನೆನಪಿಸಿಕೊಂಡರು. ‘ನಾನು ಇಲ್ಲಿ ನಿಂತಿದ್ದಕ್ಕೆ ನಮ್ಮ ತಂದೆ ಟೈಗರ್ ಪ್ರಭಾಕರ್ ಕಾರಣ. ಅವರು ಬಿಟ್ಟು ಹೋದ ಅಧ್ಯಾಯ ನಾನು. ಅವರು 52ನೇ ವರ್ಷಕ್ಕೆ ತೀರಿ ಹೋದರು. ಅವರ ಕನಸುಗಳು ಇನ್ನೂ ಬಹಳ ಇತ್ತು. ಕೆಲವು ಸಿನಿಮಾಗಳನ್ನು ನಮ್ಮ ತಂದೆಯವರು ಮಾಡಬೇಕಾಗಿತ್ತು. ಅವರ ಕನಸು ನನಗೆ ಗೊತ್ತಿತ್ತು….

Read More

IPL 2027: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಯುವರಾಜ್ ಸಿಂಗ್ ಕೋಚ್?

ಐಪಿಎಲ್‌ನಲ್ಲಿ ಇದುವರೆಗೆ ಒಮ್ಮೆಯೂ ಪ್ರಶಸ್ತಿಯನ್ನು ಗೆಲ್ಲದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರತಿ ಆವೃತ್ತಿಗೂ ಮುನ್ನ ತಂಡವನ್ನು ಬಲಿಷ್ಠಗೊಳಿಸಿ ಕಣಕ್ಕಿಳಿಯುತ್ತದೆ. ಆದರೆ ಟ್ರೋಫಿ ಮಾತ್ರ ತಂಡದ ಕೈಸೇರಿಲ್ಲ. 2026 ರ ಆವೃತ್ತಿಯಲ್ಲಿ ಪ್ಲೇಆಫ್​ಗೂ ಅರ್ಹತೆ ಪಡೆಯದ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಬದಲಾವಣೆಯ ಗಾಳಿ ಬೀಸಲು ಶುರುವಾಗಿದೆ (PC-PTI). ಸಧ್ಯಕ್ಕೆ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಈಗಿರುವ ನಾಯಕ ಅಕ್ಷರ್ ಪಟೇಲ್​ರನ್ನು ಆ ಸ್ಥಾನದಿಂದ ಕೆಳಗಿಳಿಸಿ ಕನ್ನಡಿಗ ಕೆಎಲ್ ರಾಹುಲ್​ಗೆ ತಂಡದ ನಾಯಕತ್ವವಹಿಸುವ ಮಾತುಕತೆಗಳು ನಡೆಯುತ್ತಿವೆ ಎನ್ನಲಾಗುತ್ತಿದೆ. ಇದರ ಜೊತೆಗೆ ಲಕ್ನೋ…

Read More

ರಾಹುಲ್ ಗಾಂಧಿಯನ್ನು ಪರಶುರಾಮನ ಅವತಾರದಲ್ಲಿ ಚಿತ್ರಿಸಿ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು! – Kannada News | Congress Workers Pour Milk On Rahul Gandhi Portrait Depicted As Lord Parashurama In Varanasi on his 56th Birthday

ನವದೆಹಲಿ, ಜೂನ್ 19: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ 56ನೇ ಜನ್ಮದಿನದ ಪ್ರಯುಕ್ತ ವಾರಾಣಸಿಯ ಗಂಗಾ ನದಿಯ ಘಾಟ್‌ನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪೋಸ್ಟರ್ ಒಂದನ್ನು ಪ್ರದರ್ಶಿಸಿದ್ದಾರೆ. ಈ ಪೋಸ್ಟರ್‌ನಲ್ಲಿ ರಾಹುಲ್ ಗಾಂಧಿ (Rahul Gandhi) ಅವರನ್ನು ಭಗವಾನ್ ಪರಶುರಾಮನ ರೂಪದಲ್ಲಿ ಬಿಂಬಿಸಲಾಗಿದ್ದು, ಗಂಗಾನದಿಯ ನೀರಿನಲ್ಲಿ ನಿಂತು ಆ ಪೋಸ್ಟರ್‌ಗೆ ಕ್ಷೀರಾಭಿಷೇಕ ಮಾಡುವ ಮೂಲಕ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಲಾಗಿದೆ. ಈ ಘಟನೆ ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿದೆ. ವಾರಾಣಸಿಯಲ್ಲಿ ನಡೆದ ಈ ಆಚರಣೆಯಲ್ಲಿ ವೇದ ಮಂತ್ರಗಳನ್ನು…

Read More

ಹಾವೇರಿಯಲ್ಲಿ ಚಿನ್ನ ನಿಕ್ಷೇಪಗಳು ಪತ್ತೆ: ಬಂಗಾರದಂತ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿ ರೈತರು – Kannada News | Ganjur Gold Mining Project: Farmers Fear Land Acquisition and Environmental Impact

ಚಿನ್ನ ನಿಕ್ಷೇಪಗಳು ಪತ್ತೆImage Credit source: tv9 kannada ಹಾವೇರಿ, ಜೂನ್​​ 19: ಹಾವೇರಿ (haveri) ಸಮೀಪದ ಗಣಜೂರಿನಲ್ಲಿ ಚಿನ್ನದ ಗಣಿಗಾರಿಕೆ (gold mining) ಶುರುವಾಗಲಿದೆ ಎಂಬ ವಿಚಾರ ಸದ್ಯ ಚರ್ಚೆಗೆ ಗ್ರಾಸವಾಗಿದೆ. 2015ರಲ್ಲಿ ನಡೆದ ಸಂಶೋಧನೆಯಲ್ಲಿ ಚಿನ್ನ ನಿಕ್ಷೇಪಗಳು ಇರುವುದು ಪತ್ತೆಯಾಗಿತ್ತು. ಹೀಗಾಗಿ ಇದೀಗ ಚಿನ್ನದ ಗಣಿಗಾರಿಕೆ ಪ್ರಾರಂಭಗಲಿದೆ ಎನ್ನಲಾಗುತ್ತಿದೆ. ಈ ಕುರಿತಾಗಿ ಅನ್ನದಾತರಿಗೆ ಆತಂಕ ಹೆಚ್ಚಿದ್ದು, ಭೂಮಿ ಕೊಟ್ಟು ಏನು ಮಾಡಬೇಕು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಾಂಶಗಳು 2015ರಲ್ಲಿ ನಡೆದಿದ್ದ ಸಂಶೋಧನೆಯಲ್ಲಿ ಚಿನ್ನ…

Read More

ಕಿಲ್ಲರ್​ ಬಿಎಂಟಿಸಿಗೆ ಒಂದೇ ಕುಟುಂಬದ ಮೂವರು ಬಲಿ: ಓರ್ವ ಮಗು ಸ್ಥಿತಿ ಗಂಭೀರ – Kannada News | Horrific Accident in Hoskote: Speeding BMTC Bus Flying on Wrong Route Wipes Out Family of Three

ಕಿಲ್ಲರ್​ ಬಿಎಂಟಿಸಿಗೆ ಒಂದೇ ಕುಟುಂಬದ ಮೂವರು ಬಲಿImage Credit source: Tv9 Kannada ದೇವನಹಳ್ಳಿ, ಜೂನ್​​ 19: ಕಿಲ್ಲರ್​ ಬಿಎಂಟಿಸಿಗೆ ಒಂದೇ ಕುಟುಂಬದ ಮೂವರು ಬಲಿಯಾಗಿರುವ ಅಘಾತಕಾರಿ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಬಳಿ ನಡೆದಿದೆ. ಬೈಕ್​ಗೆ ಬಿಎಂಟಿಸಿ ಬಸ್​ ಡಿಕ್ಕಿಯಾದ ಪರಿಣಾಮ ದಂಪತಿ, ಪುತ್ರಿ ಮತಪಟ್ಟಿದ್ದಾರೆ. ಮೃತರನ್ನುಅರುಣ್(35), ಅನುಷಾ(32) ಮತ್ತು ಹರ್ನಾ(2) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ 5 ವರ್ಷದ ಅನುಶಿಕಾಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೂಲಿಬೆಲೆಯಿಂದ ಹೊಸಕೋಟೆ…

Read More

ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್? – Kannada News | Karnataka Transport Corporations Seeks Government about Bus Fare Hike

ಬೆಂಗಳೂರು, (ಜೂನ್ 19): ಪೆಟ್ರೋಲ್ ಡೀಸೆಲ್ ಹಾಗೂ ಗ್ಯಾಸ್ ಸಿಲೆಂಡರ್ ದರ ಏರಿಕೆ ಬೆನ್ನಲ್ಲೇ ಹಲವು ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಇದರ ಮಧ್ಯೆ ಇದೀಗ ಕರ್ನಾಟಕದಲ್ಲಿ ಸಾರಿಗೆ ಬಸ್​ ಟಿಕೆಟ್ ದರ ಏರಿಕೆ ಚರ್ಚೆಗಳು ನಡೆದಿವೆ. ಹೀಗಾಗಿ ಸಾರ್ವಜನಿಕರಿಗೆ ಮತ್ತೊಂದು ಬೆಲೆ ಏರಿಕೆ ಆತಂಕ ಶುರುವಾಗಿದೆ. ಹೌದು…ಬಸ್ ಪ್ರಯಾಣ ದರ ಹೆಚ್ಚಳ ಮಾಡುವಂತೆ ಸಾರಿಗೆ ನಿಗಮಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿವೆ. ಇಮದು (ಜೂನ್ 19) ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ…

Read More