ಹುಬ್ಬಳ್ಳಿಯಲ್ಲಿ ಡಿ.27ರಂದು ಸುರೇಂದ್ರ ದಾನಿ ಜನ್ಮಶತಮಾನೋತ್ಸವ – Kannada News | Surendra Dani Centenary: Hubballi Celebrates Kannada Journalism Icon’s Legacy
ಹುಬ್ಬಳ್ಳಿಯಲ್ಲಿ ಡಿ.27ರಂದು ಸುರೇಂದ್ರ ದಾನಿ ಜನ್ಮಶತಮಾನೋತ್ಸವ ಕಾರ್ಯಕ್ರಮ ಹುಬ್ಬಳ್ಳಿ, ಡಿಸೆಂಬರ್ 19: ಕನ್ನಡ ಮಾಧ್ಯಮ ಕ್ಷೇತ್ರದ ಪ್ರತಿಷ್ಠಿತ ಟಿಯೇಸ್ಸಾರ್ ಪ್ರಶಸ್ತಿ ಪುರಸ್ಕೃತ ಸುರೇಂದ್ರ ದಾನಿ ಜನ್ಮಶತಮಾನೋತ್ಸವ ಕಾರ್ಯಕ್ರಮ ಇದೇ ತಿಂಗಳು 27ರಂದು ಹುಬ್ಬಳ್ಳಿಯ (Hubli) ಸವಾಯಿ ಗಂಧರ್ವ ಹಾಲ್ನಲ್ಲಿ ನಡೆಯಲಿದೆ. ಸುರೇಂದ್ರ ದಾನಿ ಜನ್ಮಶತಮಾನೋತ್ಸವ ಸಮಿತಿ ವತಿಯಿಂದ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಚಾಲನೆ ನೀಡಲಿದ್ದಾರೆ. ಹುಬ್ಬಳ್ಳಿಯ ಅದ್ವೈತ ವಿದ್ಯಾಶ್ರಮದ ಶ್ರೀ ಪ್ರಣವಾನಂದ ತೀರ್ಥರು ಸಾನಿಧ್ಯ ವಹಿಸಲಿರುವ ಕಾರ್ಯಕ್ರಮ ಅಧ್ಯಕ್ಷತೆಯನ್ನು ಖ್ಯಾತ ವೈದ್ಯ…