ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು: ಮೈ ಜುಮ್ಮೆನಿಸುವ ಸಿಸಿಟಿವಿ ವಿಡಿಯೋ – Kannada News | Belagavi Couple and Child Narrowly Escape Stray Dog Attack, CCTV Video Goes Viral
ಬೆಳಗಾವಿ, ಡಿಸೆಂಬರ್ 27: ದಂಪತಿ ತಮ್ಮ ಪಾಡಿಗೆ ತಾವು ಮಕ್ಕಳೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬೀದಿ ನಾಯಿಗಳು ಏಕಾಏಕಿ ದಾಳಿ ಮಾಡಿದ ಘಟನೆ ಬೆಳಗಾವಿ ನಗರದ ಜೋಶಿಮಾಳಾದಲ್ಲಿ ನಡೆದಿದೆ. ಆರಂಭದಲ್ಲಿ ಒಂದೆರಡು ನಾಯಿಗಳಷ್ಟೇ ಕಾಣ್ತಿವೆ. ಆದರೆ, ಉಳಿದ ಬೀದಿನಾಯಿಗಳ ಪಡೆ ಅದೆಲ್ಲಿದ್ದವೋ ಏನೋ ಒಮ್ಮಿಂದೊಮ್ಮೆಲೇ ಪ್ರತ್ಯಕ್ಷವಾಗಿ ದಂಪತಿ ಮತ್ತು ಮಕ್ಕಳನ್ನು ಸುತ್ತುವರಿದಿವೆ. ಬೀದಿನಾಯಿಗಳು ಅಟ್ಟಹಾಸ ಮೆರೆಯುತ್ತಿತಿದ್ದಂತೆಯೇ ಬೆಚ್ಚಿದ ಪುಟ್ಟ ಮಗು, ಕಿರುಚಾಡತೊಡಗಿದೆ. ಇನ್ನು, ತಂದೆ ನಾಯಿಗಳನ್ನು ಓಡಿಸಿದ್ದಾರೆ. ಕೂದಲೆಳೆ ಅಂತರದಲ್ಲಿ ದಂಪತಿ ಮತ್ತು ಮಕ್ಕಳು ಪಾರಾಗಿದ್ದಾರೆ. ಕರ್ನಾಟಕದ ಇನ್ನಷ್ಟು…