ದೇವರ ಹಾಡು ಹಾಡಿದ್ದಕ್ಕೆ ಕ್ರುದ್ಧಗೊಂಡ ಶಾಲಾ ಸಹ-ಮಾಲೀಕ; ಬಂಗಾಳಿ ಗಾಯಕಿ ಮೇಲೆ ಹಲ್ಲೆಗೆ ಯತ್ನ? – Kannada News | Bengali singer Lagnajita Chakraborty allegedly abused for singing Hindu religious song
ಕೋಲ್ಕತಾ, ಡಿಸೆಂಬರ್ 21: ಬಂಗಾಳಿ ಸಿನಿಮಾವೊಂದರ ಭಕ್ತಿ ಗೀತೆಯನ್ನು ಹಾಡಿದ್ದಕ್ಕೆ ಗಾಯಕಿ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಪೂರ್ಬ ಮೇದಿನಿಪುರ್ನ ಭಾಗಬನ್ಪುರ್ ಎಂಬಲ್ಲಿನ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಖ್ಯಾತ ಬಂಗಾಳಿ ಗಾಯಕಿ ಲಗ್ನಜಿತಾ ಚಕ್ರಬರ್ತಿ (Lagnajita Chakraborty) ಎಂಬಾಕೆಯನ್ನು ನಿಂದಿಸಿ ಹಲ್ಲೆಗೆ ಯತ್ನಿಸಿದ ಆರೋಪ ಹೊತ್ತು ಬಂಧಿತರಾಗಿರುವ ವ್ಯಕ್ತಿಯು ಆ ಶಾಲೆಯ ಒಬ್ಬ ಸಹ-ಮಾಲೀಕ ಎನ್ನಲಾಗಿದೆ. ಭಾಗಬನ್ಪುರ್ನಲ್ಲಿರುವ ಸೌತ್ ಪಾಯಿಂಟ್ ಪಬ್ಲಿಕ್ ಸ್ಕೂಲ್ನಲ್ಲಿ ಶನಿವಾರ ಸಂಜೆ…