ಒಮಾನ್-ಭಾರತ ಗ್ಯಾಸ್ ಪೈಪ್‌ಲೈನ್ ಪ್ರಾಜೆಕ್ಟ್ಗೆ ಮರುಜೀವ; ಸಾಧ್ಯತಾ ವರದಿಗೆ ಸರ್ಕಾರ ಆದೇಶ; ಈ ಯೋಜನೆಯಿಂದ ಭಾರತಕ್ಕಿದೆಯಾ ಲಾಭ? – Kannada News
ಆಳಸಮುದ್ರ ಕೊಳವೆ ಮಾರ್ಗImage Credit source: Indiatoday ನವದೆಹಲಿ, ಜೂನ್ 10: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಇಂಧನ ಭದ್ರತೆಯ ಕಾಳಜಿಯ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ಮೂರು ದಶಕಗಳಷ್ಟು ಹಳೆಯದಾದ, ಮಹತ್ವಾಕಾಂಕ್ಷೆಯ ‘ಒಮಾನ್-ಗುಜರಾತ್ ಆಳಸಮುದ್ರದ ನೈಸರ್ಗಿಕ ಅನಿಲ ಪೈಪ್‌ಲೈನ್ ಯೋಜನೆ’ಗೆ (Middle East-India Deepwater Pipeline – MEIDP) ಮರುಜೀವ ನೀಡಿದೆ. ಸುಮಾರು 40,000 ಕೋಟಿ ರೂ ವೆಚ್ಚದ ಈ ಬೃಹತ್ ಯೋಜನೆಗಾಗಿ ವಿವರವಾದ ಸಾಧ್ಯತಾ ವರದಿ (Detailed Feasibility Report) ಸಿದ್ಧಪಡಿಸುವಂತೆ…