ಅಕ್ರಮ BPL ಕಾರ್ಡ್ದಾರರಿಗೆ ಭರ್ಜರಿ ಶಾಕ್ ಕೊಟ್ಟ ಸರ್ಕಾರ: 3 ತಿಂಗಳಲ್ಲಿ ರದ್ದಾದ ಪಡಿತರ ಚೀಟಿಗಳೆಷ್ಟು? – Kannada News | Karnataka Government Cancels 15,000 Fake BPL Ration Cards
ಬೆಂಗಳೂರು, ಡಿಸೆಂಬರ್ 19: ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಆಹಾರ ಇಲಾಖೆ ಭರ್ಜರಿ ಶಾಕ್ ಕೊಟ್ಟಿದ್ದು, ಕಳೆದ 3 ತಿಂಗಳ ಅವಧಿಯಲ್ಲಿ ಬರೋಬ್ಬರಿ 15,056 ಬಿಪಿಎಲ್ ಕಾರ್ಡ್ಗಳು ರಾಜ್ಯದಲ್ಲಿ ರದ್ದಾಗಿವೆ. 5,632 ಬಿಪಿಎಲ್ ಕಾರ್ಡ್ಗಳ ವಿಚಾರಣೆ ಕಾಯ್ದಿರಿಸಿ ತಾತ್ಕಾಲಿಕ ಅಮಾನತು ಮಾಡಲಾಗಿದೆ. ಬರೋಬ್ಬರಿ 3.90 ಲಕ್ಷ ಕಾರ್ಡ್ಗಳು ಎಪಿಎಲ್ ಆಗಿ ಬದಲಾಗಿವೆ. ಆ ಮೂಲಕ ಒಟ್ಟು 4.10 ಲಕ್ಷ ಬಿಪಿಎಲ್ ಕಾರ್ಡ್ ದಾರರಿಗೆ ಸರ್ಕಾರ ಬಿಸಿ ಮುಟ್ಟಿಸಿದೆ. 4 ಲಕ್ಷ ಅಕ್ರಮ ಫಲಾನುಭವಿಗಳಿಗೆ ಶಾಕ್ 2025ರ ಸೆಪ್ಟೆಂಬರ್…