Weekly Employment Predictions: ಈ ರಾಶಿಯ ನಿರುದ್ಯೋಗಿಗಳಿಗೆ ಈ ವಾರ ಪ್ರಭಾವಿ ವ್ಯಕ್ತಿಗಳಿಂದ ಉದ್ಯೋಗಕ್ಕೆ ಸಹಾಯವಾಗಲಿದೆ – Kannada News | Weekly Employment Predictions 2026: Zodiac Job Opportunities and Challenges
28-12-2025ರಿಂದ 03-01-2026ರವರಗೆ ಉದ್ಯೋಗದಲ್ಲಿ ಹಲವು ಬದಲಾವಣೆ ಹಾಗೂ ಎಚ್ಚರಿಕೆ ಎಲ್ಲವೂ ಬರಲಿದ್ದು, ಅದಕ್ಕೂ ಮೊದಲೇ ಸಿದ್ಧತೆಯಲ್ಲಿದ್ದರೆ ಒಳ್ಳೆಯದು. ಉದ್ಯೋಗದಲ್ಲಿ ಅನ್ಯರ ಹಸ್ತಕ್ಷೇಪವೂ ಆಗಲಿದೆ. ಎದುರಿಸುವ ಚಾಕಚಕ್ಯತೆ ಇರಲಿ. ಬುದ್ಧಿ ಮನಸ್ಸುಗಳು ದೃಢವಾಗಿದ್ದರೆ ಎಂತಹ ಆಟವನ್ನೂ ಗೆಲ್ಲಬಹುದು. ಸೋತರೂ ಗೆಲುವಿನಂತೆ ಬಿಗಬಹುದು. ಮೇಷ ರಾಶಿ: ಡಿಸೆಂಬರ್ ಕೊನೆಯ ವಾರ ಮಂಗಳ ಮತ್ತು ಗುರು ಪ್ರಭಾವದಿಂದ ಉದ್ಯೋಗದಲ್ಲಿ ಚಟುವಟಿಕೆ ಹೆಚ್ಚಾಗುತ್ತದೆ. ಹೊಸ ಜವಾಬ್ದಾರಿ ಅಥವಾ ಹುದ್ದೆ ಬದಲಾವಣೆ ಸಾಧ್ಯ. ಅವಿರತ ಶ್ರಮಕ್ಕೆ ಫಲ ಸಿಗುತ್ತದೆ. ನಿರುದ್ಯೋಗಿಗಳಿಗೆ ಸಂದರ್ಶನಕ್ಕೆ ಅವಕಾಶ. ಈ…