ಬಿರುಗಾಳಿಗೆ ಮಂಟಪವನ್ನೇ ಹಾರದಂತೆ ತಡೆದವನು, ಇನ್ನು ಪತ್ನಿ ಕೈ ಬಿಡುವನೇ!
ಅಂದು ರಾತ್ರಿ ಹೊತ್ತು, ಎಲ್ಲರೂ ಮದುವೆಯ ಸಿದ್ಧತೆಯಲ್ಲಿ ನಿರತರಾಗಿದ್ದರು. ಮದುವೆಯ ವಿಧಿ ವಿಧಾನಗಳು ಒಂದೊಂದಾಗಿ ನಡೆಯುತ್ತಿತ್ತು. ಸಣ್ಣದಾಗಿ ಆರಂಭವಾದ ಗಾಳಿ ಒಂದೇ ಬಾರಿಗೆ ರೌದ್ರ ರೂಪ ತಾಳಿತ್ತು. ವರ ಮಂಟಪದಲ್ಲಿರುವಾಗಲೇ ಗಾಳಿ ಮಂಟಪವನ್ನೂ ಎಳೆದುಕೊಂಡು ಹೋಗುವಷ್ಟು ರಭಸವಾಗಿತ್ತು. ಆಗ ಒಂದೆಡೆ ಸಂಬಂಧಿಕರು ಇನ್ನೊಂದೆಡೆ ತಾನು ಮಂಟಪದ ಕಂಬಗಳನ್ನು ಕಟ್ಟಿಯಾಗಿ ಹಿಡಿದುಕೊಂಡು ಗಾಳಿಯಲ್ಲಿ ಹಾರದಂತೆ ತಡೆದಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿ ಜನ ಮಂಟಪವನ್ನೇ ಹಾರಲು ಬಿಡದವನು ಪತ್ನಿ ಕೈ ಬಿಡುವುದುಂಟೇ ಎಂದಿದ್ದಾರೆ. …