ರಾಮಲಿಂಗಾರೆಡ್ಡಿ ನನಗೆ ತುಂಬಾ ಆತ್ಮೀಯರು, ಸಮಸ್ಯೆ ಬಗೆಹರಿಸುತ್ತೇನೆ: ಸಿಎಂ ಡಿಕೆಶಿ – Kannada News
ಬೆಂಗಳೂರು, ಜೂ.5: ಖಾತೆ ಹಂಚಿಕೆಯ ಬೆನ್ನಲ್ಲೇ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಕಾಂಗ್ರೆಸ್ ವಲಯದಲ್ಲಿ ತಲ್ಲಣ ಮೂಡಿಸಿದೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಕ್ಷಣವೇ ಅಖಾಡಕ್ಕಿಳಿದಿದ್ದು, ಬಂಡಾಯ ಶಮನಗೊಳಿಸಲು ‘ಡ್ಯಾಮೇಜ್ ಕಂಟ್ರೋಲ್’ ಕಸರತ್ತು ಆರಂಭಿಸಿದ್ದಾರೆ. ರಾಮಲಿಂಗಾ ರೆಡ್ಡಿ ಅವರ ರಾಜೀನಾಮೆ ನಿರ್ಧಾರದ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಡಿ.ಕೆ. ಶಿವಕುಮಾರ್, “ರಾಮಲಿಂಗಾರೆಡ್ಡಿ ಅವರು ನನಗೆ ತುಂಬಾ ಆತ್ಮೀಯರು. ಪಕ್ಷ ಮತ್ತು ಸರ್ಕಾರದ ಬೆಳವಣಿಗೆಯಲ್ಲಿ…