Headlines

nagaraj11081993

ತನ್ನ ಕಾಮದಾಟಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನೇ ಸುಪಾರಿ ನೀಡಿ ಕೊಲೆ ಮಾಡಿಸಿದ ಪತ್ನಿ!

ಯಾದಗಿರಿ, ಮಾ.28: ಸುಖವಾಗಿದ್ದ ಸಂಸಾರಕ್ಕೆ ‘ಸೈತಾನ’ನಂತೆ ಎಂಟ್ರಿ ಕೊಟ್ಟ ಪರಪುರುಷನ ಮೋಹಕ್ಕೆ ಬಿದ್ದ ಪತ್ನಿಯೊಬ್ಬಳು, ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನೇ ಸುಪಾರಿ ನೀಡಿ ಕೊಲೆ ಮಾಡಿಸಿದ ಭೀಕರ ಘಟನೆ ಯಾದಗಿರಿ ಜಿಲ್ಲೆಯಲ್ಲಿ (Yadgiri murder case) ಬೆಳಕಿಗೆ ಬಂದಿದೆ. ಅಪಘಾತ ಎಂದು ಬಿಂಬಿಸಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಆರೋಪಿಗಳ ಕರಾಳ ಕೃತ್ಯ ಈಗ ಬಯಲಾಗಿದೆ. ಯಾದಗಿರಿ ತಾಲೂಕಿನ ಚಾಮನಹಳ್ಳಿ ತಾಂಡದ ನಿವಾಸಿ, ಆಟೋ ಚಾಲಕ ಸಾಗರ್ ರಾಠೋಡ್ (35) ಕೊಲೆಯಾದ ದುರ್ದೈವಿ. ಸಾಗರ್ ಪತ್ನಿ…

Read More

‘ನನ್ನ ಸ್ಕ್ರಿಪ್ಟ್ ಕದ್ದು ಸಿನಿಮಾ ಮಾಡಿದ್ರು, ಅದು 100 ಕೋಟಿ ಕಲೆಕ್ಷ್ ಮಾಡಿತು’; ಆದಿತ್ಯ ಧಾರ್ ಆರೋಪ

ಆದಿತ್ಯ ಧಾರ್ ಅವರು ಇಂದು ಯಶಸ್ವಿ ನಿರ್ದೇಶಕರಲ್ಲಿ ಒಬ್ಬರು. ಅವರನ್ನು ಎಲ್ಲರೂ ಹಾಡಿ ಹೊಗಳುತ್ತಿದ್ದಾರೆ. ಆದರೆ, ಅವರು ಪಟ್ಟ ಕಷ್ಟದ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಕ್ರಿಕೆಟರ್ ಆಗಬೇಕು ಎಂದು ಆದಿತ್ಯ ಧಾರ್ ಕನಸು ಕಂಡಿದ್ದರು. ಟೀಂ ಇಂಡಿಯಾದ ಅಂಡರ್ 19 ತಂಡವನ್ನು ಪ್ರತಿನಿಧಿಸುವ ಕನಸನ್ನು ಅವರು ಕಂಡಿದ್ದರು. ಆದರೆ, ಕನಸು ಈಡೇರಲಿಲ್ಲ. ಈ ಹಿನ್ನೆಲೆಯಲ್ಲಿ ಆದಿತ್ಯ ಧಾರ್ ಅವರು ನಿರ್ದೇಶನಕ್ಕೆ ಬಂದರು. ಇಲ್ಲಿಯೂ ಅವರ ಜರ್ನಿ ಸುಲಭದಲ್ಲಿ ಇರಲಿಲ್ಲ. ಅವರ ಸ್ಕ್ರಿಪ್ಟ್​​ಗಳನ್ನು ಕದಿಯಲಾಗಿತ್ತಂತೆ. ಈ ಬಗ್ಗೆ ಅವರೇ…

Read More

ಚಿಕ್ಕೋಡಿ ಕಾಡಸಿದ್ದೇಶ್ವರ ಮಠಕ್ಕೆ ಮೋಹನ್ ಭಾಗವತ್​ ಭೇಟಿ: ಶ್ರೀಗಳ ನೇತೃತ್ವದಲ್ಲಿ ತುಲಾಭಾರ

ಬೆಳಗಾವಿ, ಮಾರ್ಚ್​ 28: ಜಿಲ್ಲೆಯ ಚಿಕ್ಕೋಡಿ ತಾಲೂಕಿನ‌ ಯಡೂರ ಗ್ರಾಮದ ಕಾಡಸಿದ್ದೇಶ್ವರ ಮಠದಲ್ಲಿ ನಡೆದ ವಿದ್ಯಾರ್ಥಿಗಳ ಯುವ ಸಮಾವೇಶದಲ್ಲಿ ಆರ್​​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್​​ ಭಾಗವಹಿಸಿದ್ದರು. ಬಳಿಕ ಚಿಕ್ಕೋಡಿ ತಾಲೂಕಿನ ಯಡೂರಿನ ಕಾಡಸಿದ್ದೇಶ್ವರ ಮಠದಿಂದ ಮೋಹನ್ ಭಾಗವತ್​​​ರ ತುಲಾಭಾರ ಮಾಡಲಾಗಿದೆ. ಶ್ರೀಶೈಲ ಜಗದ್ಗುರು ಚನ್ನರಾಮಸಿದ್ಧ ಶ್ರೀಗಳ ನೇತೃತ್ವದಲ್ಲಿ ಗೋವುಗಳಿಗೆ ನೀಡುವ ಆಹಾರ ಪದಾರ್ಥಗಳಿಂದ ತುಲಾಭಾರ ಮಾಡಲಾಗಿದೆ. ಬಳಿಕ ಮೋಹನ್ ಭಾಗವತ್ ಗೋವುಗಳಿಗೆ ಮೇವು ಹಾಕಿ ಗೋ ಪೂಜೆ ನೆರವೇರಿಸಿದರು. ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್…

Read More

ಈ ವಾರ ಒಟಿಟಿಗೆ ಬಂದ ಸಿನಿಮಾಗಳಿವು: ಪಟ್ಟಿ ಇಲ್ಲಿದೆ ನೋಡಿ

ಮಲಯಾಳಂ ಸಿನಿಮಾ ‘ಮಸ್ತಿಷ್ಕ ಮರಣಂ’ ಸಿನಿಮಾ ಹಾಸ್ಯಮಯ ಕ್ರೈಂ ಥ್ರಿಲ್ಲರ್ ಸಿನಿಮಾ ಆಗಿದೆ. ಸೈಬರ್ ಅಪರಾದ ಸೇರಿದಂತೆ ಇನ್ನೂ ಕೆಲವು ವಿಷಯಗಳನ್ನು ಸಿನಿಮಾ ಒಳಗೊಂಡಿದೆ. ಈ ಸಿನಿಮಾವನ್ನು ನೆಟ್​ಫ್ಲಿಕ್ಸ್​​ನಲ್ಲಿ ವೀಕ್ಷಿಸಬಹುದಾಗಿದೆ. ವಿಜಯ್ ಸೇತುಪತಿ ನಟನೆಯ ‘ಮುತ್ತು ಅಲಿಯಾಸ್ ಕಟ್ಟನ್’ ಆಸಕ್ತಿಕರ ಕ್ರೈಂ ಡ್ರಾಮಾ ಕತೆ ಹೊಂದಿದೆ. ವ್ಯಕ್ತಿಯೊಬ್ಬನ ರುಂಡ ಹಳ್ಳಿಗರಿಗೆ ಸಿಗುತ್ತದೆ. ಕೆಲವರು ಅವನನ್ನು ಹೀರೋ ಎಂದರೆ ಇನ್ನು ಕೆಲವರು ವಿಲನ್ ಎನ್ನುತ್ತಾರೆ. ನಿಜಕ್ಕೂ ಯಾರಾತ ಎಂಬುದು ಕತೆ. ಸಿನಿಮಾ ಜಿಯೋ ಹಾಟ್​​ಸ್ಟಾರ್​​ನಲ್ಲಿ ಈ ವಾರ ಬಿಡುಗಡೆ…

Read More

ಉತ್ತರ ಪ್ರದೇಶದ ಜೆವಾರ್‌ನಲ್ಲಿ ಅಂತಾರಾಷ್ಟ್ರೀಯ ಏರ್​ಪೋರ್ಟ್​ ಉದ್ಘಾಟನೆ ಮಾಡಿದ ಮೋದಿ!

ಉತ್ತರ ಪ್ರದೇಶ, ಮಾರ್ಚ್​ 28: ಜೆವಾರ್‌ನಲ್ಲಿ ನಿರ್ಮಾಣಗೊಂಡಿರುವ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನರೇಂದ್ರ ಮೋದಿ ಉದ್ಘಾಟಿಸಿದರು. ಸುಮಾರು 11,200 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ವಿಮಾನ ನಿಲ್ದಾಣವು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿದೆ. ಈ ಯೋಜನೆ ಉತ್ತರ ಪ್ರದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಮಹತ್ವದ ಮೈಲುಗಲ್ಲಾಗಲಿದೆ. ಈ ವಿಮಾನ ನಿಲ್ದಾಣ ಉದ್ಘಾಟನೆಯೊಂದಿಗೆ ಉತ್ತರ ಪ್ರದೇಶ ದೇಶದಲ್ಲೇ 5 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ಮೊದಲ ರಾಜ್ಯವಾಗಿದೆ. ಹೊಸ ಏರ್‌ಪೋರ್ಟ್‌ನಿಂದ ಪ್ರಯಾಣಿಕರಿಗೆ ಸುಧಾರಿತ ಸೇವೆಗಳು ಲಭ್ಯವಾಗಲಿದ್ದು, ಉದ್ಯೋಗಾವಕಾಶಗಳು ಹೆಚ್ಚಾಗುವ…

Read More

ಕಾಫಿನಾಡಿನಲ್ಲಿ ವರುಣನ ಅಬ್ಬರ: ಬಿರುಗಾಳಿ ಸಹಿತ ಧಾರಾಕಾರ ಮಳೆ, ಮೂಡಿಗೆರೆ ರಸ್ತೆಗಳು ಜಲಾವೃತ!

ಚಿಕ್ಕಮಗಳೂರು, ಮಾ.28: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಹವಾಮಾನ ದಿಢೀರ್ ಬದಲಾಗಿದ್ದು, ಬಿರುಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿದೆ. ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದಾದ್ಯಂತ ಬಿರುಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದು, ತಾಲೂಕಿನ ಗ್ರಾಮೀಣ ಭಾಗಗಳಲ್ಲೂ ಮಳೆಯ ಆರ್ಭಟ ಜೋರಾಗಿದೆ. ಆಲ್ದೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕಾಫಿ ತೋಟಗಳಿಗೆ ಇದು ಆಸರೆಯಾದರೂ ಬಿರುಗಾಳಿಯ ಭೀತಿ ಆವರಿಸಿದೆ. ಮೂಡಿಗೆರೆಯಲ್ಲಿ ಮಳೆಯ ಅಬ್ಬರ ತೀವ್ರವಾಗಿದ್ದು, ರಸ್ತೆಗಳು ನದಿಯಂತಾಗಿವೆ. ಚರಂಡಿಗಳು ತುಂಬಿ ಹರಿಯುತ್ತಿದ್ದು, ವಾಹನ…

Read More

IPL 2026: 10 ತಂಡಗಳ ಆರಂಭಿಕ ಜೋಡಿಗಳ ಪಟ್ಟಿ ಇಲ್ಲಿದೆ

IPL 2026: ರಂಗು ರಂಗಿನ ಕ್ರಿಕೆಟ್ ಟೂರ್ನಿ ಐಪಿಎಲ್​ಗೆ ಇಂದು (ಮಾ.28) ಚಾಲನೆ ದೊರೆಯಲಿದೆ. ಹತ್ತು ತಂಡಗಳ ನಡುವಣ ಈ ಕದನಕ್ಕಾಗಿ ಎಲ್ಲಾ ತಂಡಗಳು ಈಗಾಗಲೇ ಸಜ್ಜಾಗಿದೆ. ಇನ್ನು ಈ ಸೀಸನ್​ಗಾಗಿ ಪ್ರತಿ ತಂಡಗಳು ಈ ಬಾರಿ ಬ್ಯಾಟಿಂಗ್ ಲೈನಪ್​ ಅನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ. ಅದರಲ್ಲೂ 10 ತಂಡಗಳು ಬಲಿಷ್ಠ ಓಪನಿಂಗ್ ಜೋಡಿಯನ್ನು ಕಣಕ್ಕಿಳಿಸುತ್ತಿದ್ದು, ಯಾವ ತಂಡದ ಪರ ಯಾರು ಇನಿಂಗ್ಸ್ ಆರಂಭಿಸಲಿದ್ದಾರೆ ಎಂದು ನೋಡುವುದಾದರೆ… ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆರ್​ಸಿಬಿ ಪರ ಈ ಬಾರಿ ಕೂಡ…

Read More

ಬಾಗಲಕೋಟೆಯಲ್ಲಿ ಇನ್ನೋವಾ ಕಾರು ಡಿಕ್ಕಿಯಾಗಿ ಗರ್ಭಿಣಿ ಇದ್ದ ಆಂಬುಲೆನ್ಸ್ ಪಲ್ಟಿ; ಭಯಾನಕ ವಿಡಿಯೋ

ಬಾಗಲಕೋಟೆ, ಮಾ.28: ನಗರದ ಜಿಲ್ಲಾಸ್ಪತ್ರೆಗೆ ಗರ್ಭಿಣಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಮತ್ತು ಇನ್ನೋವಾ ಕಾರಿನ ನಡುವೆ ಭೀಕರ ಡಿಕ್ಕಿ ಸಂಭವಿಸಿ, ಆಂಬುಲೆನ್ಸ್ ರಸ್ತೆಯಲ್ಲೇ ಪಲ್ಟಿಯಾದ ಘಟನೆ ಬಾಗಲಕೋಟೆಯ ಬಸ್ ನಿಲ್ದಾಣದ ಸರ್ಕಲ್ ಬಳಿ ನಡೆದಿದೆ. ಜಿಲ್ಲಾಸ್ಪತ್ರೆಯ ಕಡೆಗೆ ವೇಗವಾಗಿ ಹೊರಟಿದ್ದ ಆಂಬುಲೆನ್ಸ್ ಮತ್ತು ಕಾಳಿದಾಸ ವೃತ್ತದ ಕಡೆಗೆ ಚಲಿಸುತ್ತಿದ್ದ ಇನ್ನೋವಾ ಕಾರಿನ ನಡುವೆ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಆಂಬುಲೆನ್ಸ್ ವಾಹನವು ರಸ್ತೆಯ ಮಧ್ಯದಲ್ಲೇ ಪಲ್ಟಿಯಾಗಿದೆ. ಈ ದೃಶ್ಯವು ಹತ್ತಿರದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪಘಾತ…

Read More

ಬೆಂಗಳೂರಿನಲ್ಲಿ ಗ್ಯಾಸ್​​ ಸಿಲಿಂಡರ್​ ಲಾರಿ ಪಲ್ಟಿ: ತಪ್ಪಿದ ಭಾರಿ ಅನಾಹುತ

ಬೆಂಗಳೂರು, ಮಾರ್ಚ್​ 28: ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳನ್ನು ಹೊತ್ತ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಅಪಘಾತದಲ್ಲಿ ಲಾರಿ ಚಾಲಕನಿಗೆ ಗಾಯಗಳಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿಯಲ್ಲಿದ್ದ ಇತರ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ನಂತರ, ಗ್ಯಾಸ್ ಸಿಲಿಂಡರ್‌ಗಳಿಂದ ಅನಿಲ ಸೋರಿಕೆ ಆಗದಂತೆ ತುರ್ತು ಕ್ರಮಗಳನ್ನು ಕೈಗೊಳ್ಳಲಾಯಿತು. ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆಯಿಂದ ದೊಡ್ಡ ಅನಾಹುತ ತಪ್ಪಿದೆ. ಲಾರಿ ಪಲ್ಟಿಯಾದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಘಟನೆ…

Read More

‘ಐಪಿಎಲ್ ಟಿಕೆಟ್​ಗಳು ಖಂಡಿತಾ ನನಗೆ ಬೇಡ’: ವಿಶೇಷ ಟಿಕೆಟ್ ನಿರಾಕರಿಸಿದ ಶಾಸಕ ಸುರೇಶ್ ಕುಮಾರ್!

ಬೆಂಗಳೂರು, ಮಾರ್ಚ್​ 28: ಐಪಿಎಲ್ ಮ್ಯಾಚ್​ಗಳ ಟಿಕೆಟ್ (IPL Ticket) ವಿಚಾರವಾಗಿ ಸದನದಲ್ಲಿ ನಡೆದ ಚರ್ಚೆಯು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಶಾಸಕರು ತಮಗೆ ಐಪಿಎಲ್ ಟಿಕೆಟ್​ಗಳನ್ನು ನೀಡಬೇಕೆಂದುದಕ್ಕೆ ಸ್ಪಂದಿಸಿರುವ ಕೆಎಸ್‌ಸಿಎ, ತಥಾಸ್ತು ಎಂದಿದೆ. ಸದನದಲ್ಲಿ ಚರ್ಚೆಯಾಗಿ ಕೇವಲ 24 ಗಂಟೆಗಳಲ್ಲಿಯೇ ಈ ರೀತಿಯ ಸ್ಪಂದನೆ ದೊರೆತಿರುವುದೂ ವಿವಾದವೆದ್ದಿದೆ. ಆದರೆ ಈ ಎಲ್ಲಾ ಜಟಾಪಟಿ ನಡುವೆ ಎಮ್ಎಲ್ಎ ಸುರೇಶ್ ಕುಮಾರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟಿಕೆಟ್​ಗಳನ್ನು ನಿರಾಕರಿಸಿದ್ದಾರೆ. ಟಿಕೆಟ್ ಬೇಡವೆಂದು ಫೆಸ್​ಬುಕ್ ಪೋಸ್ಟ್ ಹಂಚಿಕೊಂಡ ಶಾಸಕ ಕಾಂಗ್ರೆಸ್…

Read More