Headlines

nagaraj11081993

ಪಾಕಿಸ್ತಾನದಂತೆ ಭಾರತ ದಲ್ಲಾಳಿ ರಾಷ್ಟ್ರವಲ್ಲ; ಇರಾನ್ ಯುದ್ಧದ ಮಧ್ಯಸ್ಥಿಕೆ ಕುರಿತು ಸಚಿವ ಜೈಶಂಕರ್ ವ್ಯಂಗ್ಯ

ನವದೆಹಲಿ,ಮಾರ್ಚ್ 25: ಮಧ್ಯಪ್ರಾಚ್ಯ ಪ್ರದೇಶದಲ್ಲಿ ನಡೆಯುತ್ತಿರುವ ಯುದ್ಧದಿಂದ ಜಗತ್ತಿನ ನಾನಾ ದೇಶಗಳು ಕಂಗೆಟ್ಟು ಕುಳಿತಿವೆ. ಕದನವಿರಾಮ ಘೋಷಣೆಯಾಗಲು ಹಲವು ದೇಶಗಳು ಪ್ರಯತ್ನ ಮಾಡುತ್ತಿವೆ. ಇದರ ನಡುವೆ ಇರಾನ್- ಇಸ್ರೇಲ್- ಅಮೆರಿಕದ ಯುದ್ಧದಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆ ಪ್ರಯತ್ನವನ್ನು ಭಾರತ ಅಪಹಾಸ್ಯ ಮಾಡಿದೆ. ಇಂದು ದೆಹಲಿಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಪಾಕಿಸ್ತಾನವನ್ನು “ದಲ್ಲಾಳಿ ರಾಷ್ಟ್ರ” (ಬ್ರೋಕರ್) ಎಂದು ಅಪಹಾಸ್ಯ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. “ಭಾರತವು ಪಾಕಿಸ್ತಾನದಂತೆ ಮಧ್ಯವರ್ತಿ ಅಥವಾ…

Read More

ಹುಳಿಯಾರಿನಲ್ಲಿ ಕಳ್ಳರ ಕೈಚಳಕ! ನಂಜನಗೂಡಿಗೆ ಹೋದ ದಂಪತಿ ವಾಪಸ್ ಬರುವಷ್ಟರಲ್ಲಿ ಮನೆ ಖಾಲಿ

ಹುಳಿಯಾರು, ಮಾ.25: ದೇವರ ದರ್ಶನಕ್ಕೆಂದು ಹೋದ ದಂಪತಿಯ ಮನೆಯೇ ಕಳ್ಳರ ಪಾಲಾಗಿರುವ ದುರ್ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪಟ್ಟಣದಲ್ಲಿ ನಡೆದಿದೆ. ರೋಷನ್ ಎಂಬುವವರ ಮನೆಯ ಬೀಗ ಮುರಿದಿರುವ ಕಳ್ಳರು ಕೈಚಳಕ ತೋರಿಸಿದ್ದಾರೆ. ಹುಳಿಯಾರಿನ ನಿವಾಸಿ ರೋಷನ್ ಅವರು ತಮ್ಮ ಪತ್ನಿಯೊಂದಿಗೆ ನಂಜನಗೂಡಿನ ನಂಜುಂಡೇಶ್ವರ ಸ್ವಾಮಿಯ ದರ್ಶನಕ್ಕಾಗಿ ನಿನ್ನೆ ರಾತ್ರಿ ಮನೆಯಿಂದ ಹೊರಟಿದ್ದರು.ಇಂದು ಮಧ್ಯಾಹ್ನ ರೋಷನ್ ಅವರು ದೇವಸ್ಥಾನದಲ್ಲಿದ್ದಾಗ, ಅವರ ಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿದ ನೆರೆಹೊರೆಯವರು ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಮನೆಯೊಳಗೆ…

Read More

ಮುಗಿಯಿತು ‘ದಿ ಕೇರಳ ಸ್ಟೋರಿ 2’ ಸಿನಿಮಾದ ಆಟ: ಅಂತಿಮವಾಗಿ ಆದ ಕಲೆಕ್ಷನ್ ಎಷ್ಟು?

ಬಾಲಿವುಡ್‌ನ ವಿವಾದಾತ್ಮಕ ‘ದಿ ಕೇರಳ ಸ್ಟೋರಿ 2’ (The Kerala Story 2) ಸಿನಿಮಾ ಈಗ ಸೈಲೆಂಟ್ ಆಗಿದೆ. ಬಿಡುಗಡೆಗೂ ಮುನ್ನ ಈ ಸಿನಿಮಾ ಸಖತ್ ಸದ್ದು ಮಾಡಿತ್ತು. ಆದರೆ ‘ಧುರಂಧರ್ 2’ (Dhurandhar 2) ಬಿಡುಗಡೆ ಆದ ಬಳಿಕ ‘ದಿ ಕೇರಳ ಸ್ಟೋರಿ 2’ ಸಿನಿಮಾದ ಆಟ ಅಂತ್ಯವಾಗಿದೆ. ಚಿತ್ರಮಂದಿರದಲ್ಲಿ ಈ ಸಿನಿಮಾದ ಪ್ರದರ್ಶನ ಬಹುತೇಕ ಕೊನೆಗೊಂಡಿದೆ. ಉಲ್ಕಾ ಗುಪ್ತಾ, ಐಶ್ವರ್ಯಾ ಓಜಾ ಮತ್ತು ಅದಿತಿ ಭಾಟಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ ಬಾಕ್ಸ್…

Read More

RCB ಅಭಿಮಾನಿಗಳಿಗೆ ನಮ್ಮ ಮೆಟ್ರೋ ಗುಡ್ ನ್ಯೂಸ್! ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸೇವೆ ವಿಸ್ತರಣೆ

ಬೆಂಗಳೂರು, ಮಾ.25: ಐಪಿಎಲ್ 2026ರ (IPL 2026) ಉದ್ಘಾಟನಾ ಪಂದ್ಯ ಮಾರ್ಚ್ 28ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಡೆಯಲಿದೆ. ಇದೊಂದು ಅಭಿಮಾನಿಗಳಿಗೆ ಹಬ್ಬವೇ ಸರಿ, ಅದರಲ್ಲೂ ಈ ಬಾರಿ ಆರ್​​ಸಿಬಿ ಮೊದಲ ಪಂದ್ಯ ಇಲ್ಲಿ ನಡೆಯುತ್ತಿರುವ ಕಾರಣ ಇನ್ನು ರೋಚಕವಾಗಿರಲಿದೆ. ಬೆಂಗಳೂರಿನಲ್ಲಿ ಆರ್​ಸಿಬಿ ಅಭಿಮಾನಿಗಳು ಇರುವ ಕಾರಣ ಹೆಚ್ಚು ಜನ ಸೇರಬಹುದು. ಹಾಗೂ ಜನ ದಟ್ಟಣೆಯೂ ಆಗಬಹುದು ಇದರ ಜತೆಗೆ ವಾಹನ ದಟ್ಟಣೆ ಕೂಡ ಆಗಬಹುದು ಎಂಬ ಕಾರಣಕ್ಕೆ ಬೆಂಗಳೂರು ಸಂಚಾರಿ ಪೊಲೀಸರು ಹಾಗೂ ಚಿನ್ನಸ್ವಾಮಿ ಸ್ಟೇಡಿಯಂ…

Read More

Iran War: ಟ್ರಂಪ್​ಗೆ ಸೆಡ್ಡು ಹೊಡೆದ ಟೆಹ್ರಾನ್; ಯುದ್ಧ ನಿಲ್ಲಿಸಲು ಅಮೆರಿಕಕ್ಕೆ 5 ಷರತ್ತು ವಿಧಿಸಿದ ಇರಾನ್

ಟೆಹ್ರಾನ್, ಮಾರ್ಚ್ 25: ಕಳೆದ 2 ದಿನಗಳಿಂದ ಡೊನಾಲ್ಡ್ ಟ್ರಂಪ್ (Donald Trump) ಈ ಯುದ್ಧ ಸಾಕಾಗಿದೆ ಎಂಬಂತೆ ವರ್ತಿಸಿದ್ದರು. ಇರಾನ್ ಜೊತೆ ಕದನವಿರಾಮದ ಸುಳಿವನ್ನೂ ನೀಡಿದ್ದರು. ಹಾಗೇ, ಇರಾನ್ ಮೇಲಿನ ದಾಳಿಯನ್ನು ಕೊನೆಗೊಳಿಸಲು 15 ಅಂಶಗಳ ಶಾಂತಿ ಯೋಜನೆಯನ್ನು ಘೋಷಿಸಿದ್ದರು. ಆದರೆ, ಅವರ ಈ ನಿರ್ಧಾರವನ್ನು ತಿರಸ್ಕರಿಸಿರುವ ಇರಾನ್ ಅಮೆರಿಕಕ್ಕೆ ತಕ್ಕ ತಿರುಗೇಟು ನೀಡಿದೆ. ಈ ಯುದ್ಧವನ್ನು ಯಾವಾಗ ಕೊನೆಗೊಳಿಸಬೇಕು, ಹೇಗೆ ಕೊನೆಗೊಳಿಸಬೇಕೆಂದು ಟ್ರಂಪ್ ನಿರ್ಧರಿಸಲು ನಾವು ಅವಕಾಶ ನೀಡುವುದಿಲ್ಲ. ಈ ಯುದ್ಧ ನಿಲ್ಲಬೇಕಾದರೆ ನಾವು…

Read More

IPL 2026: ಕೆಕೆಆರ್ ತಂಡದಲ್ಲಿ ರಿಂಕು ಸಿಂಗ್​ಗೆ ಮಹತ್ವದ ಜವಾಬ್ದಾರಿ

2026 ರ ಐಪಿಎಲ್ ಆರಂಭಕ್ಕೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ರಿಂಕು ಸಿಂಗ್ ಅವರನ್ನು ತಂಡದ ಉಪನಾಯಕನನ್ನಾಗಿ ನೇಮಿಸಿದೆ. ಇದು ಕೆಕೆಆರ್ ಜೊತೆಗಿನ ರಿಂಕು ಸಿಂಗ್ ಅವರ ಎಂಟನೇ ಸೀಸನ್ ಆಗಿದ್ದು, ಈಗ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ. 2018 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ರಿಂಕು ಸಿಂಗ್ ಆ ಆವೃತ್ತಿಯಲ್ಲಿ ಕೇವಲ 29 ರನ್ ಗಳಿಸಿದರು. ಮುಂದಿನ ಆವೃತ್ತಿಯಲ್ಲಿ ರಿಂಕು ಕಲೆಹಾಕಿದ್ದು, ಕೇವಲ 37 ರನ್ ಗಳಿಸಿದರು. ಅದರ ನಂತರದ…

Read More

ಪಿಎಂ ಎಸ್​ವೈಎಂ ಸ್ಕೀಮ್; ತಿಂಗಳಿಗೆ ಕೇವಲ 55 ರೂ ಹೂಡಿಕೆ; ಉತ್ತಮ ಮಾಸಿಕ ವರಮಾನ ಸೃಷ್ಟಿ

ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಿಗೆಂದು ಸರ್ಕಾರ ವಿವಿಧ ನಿವೃತ್ತಿ ಸ್ಕೀಮ್​ಗಳನ್ನು ನಡೆಸುತ್ತಿದೆ. ಇದರಲ್ಲಿ ಪಿಎಂ ಎಸ್​ವೈಎಂ ಸ್ಕೀಮ್ ಕೂಡ ಒಂದು. ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಯಲ್ಲಿ ಬಹಳ ಅಲ್ಪ ಹೂಡಿಕೆಯಲ್ಲಿ 3,000 ರೂಗಳ ಮಾಸಿಕ ಖಾತ್ರಿ ಪಿಂಚಣಿ ಸೃಷ್ಟಿಸಲು ಸಾಧ್ಯ. 2019ರಲ್ಲೇ ಈ ಸ್ಕೀಮ್ ಆರಂಭವಾಗಿದೆ. ಇಪಿಎಫ್, ಎನ್​ಪಿಎಸ್ ಇತ್ಯಾದಿ ಸೌಲಭ್ಯ ಇಲ್ಲದ ಕೆಲಸಗಾರರು, ಉದ್ಯೋಗಿಗಳಿಗೆಂದು ಈ ಯೋಜನೆ ಇರುವುದು. ಬೀದಿಬದಿ ವ್ಯಾಪಾರಿಗಳು, ಕಟ್ಟಡ ನಿರ್ಮಾಣದ ಕೂಲಿಕಾರ್ಮಿಕರು, ಮನೆಗೆಲಸದವರು, ಸಣ್ಣ ವರ್ತಕರು ಇತ್ಯಾದಿ…

Read More

Shantaram Siddi: ಶಾಂತಾರಾಮರಿಗೆ ʼಸಿದ್ಧಿʼಸಿದ ವಿಧಾನ ಪರಿಷತ್ ಸಭಾಪತಿ ಪೀಠದ ಗೌರವ!

ಬೆಂಗಳೂರು, (ಮಾರ್ಚ್ 25): ಕರ್ನಾಟಕ ವಿಧಾನ ಪರಿಷತ್‌ (Karnataka Legislative Council) ಕಲಾಪದ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಅವರು ವಿರಮಿಸಿದ್ದ ವೇಳೆ, ಬಿಜೆಪಿಯ ಶಾಂತರಾಮ ಸಿದ್ದಿಯವರಿಗೆ (Shantaram Siddi) ಕೆಲಕಾಲ ಕಲಾಪ ನಡೆಸುವ ಅವಕಾಶ ದೊರಕಿದೆ. ಹಾಗೆಂದು ಅವರು ಶಾಶ್ವತವಾಗಿ ಆ ಪೀಠ ಅಲಂಕರಿಸಿಲ್ಲ. ವಿಧಾನ ಪರಿಷತ್‌ ಕಲಾಪದ ವೇಳೆ ಪರಿಷತ್‌ ಸಭಾಪತಿ ವಿರಮಿಸುವ ವೇಳೆ, ಸದನದಲ್ಲಿರುವ ಹಿರಿಯ ಸದಸ್ಯರಿಗೆ ಕೆಲವು ಬಾರಿ ಕಲಾಪ ನಡೆಸಲು ಅವಕಾಶ ನೀಡಲಾಗುತ್ತದೆ. ಅದರಂತೆ ಇಂದು (ಮಾರ್ಚ್ 25) ವಿಧಾನ…

Read More

ಬಿಲ್ ಪಾವತಿಸಲು ಲಂಚ ಪಡಯುತ್ತಿರುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಡಿಹೆಚ್​ಒ ಕಚೇರಿ ಲೆಕ್ಕಪತ್ರ ವ್ಯವಸ್ಥಾಪಕ

ತುಮಕೂರು, ಮಾ.25: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಭ್ರಷ್ಟಾಚಾರದ ಬಣ್ಣ ಬಯಲಾಗಿದೆ. ಆರೋಗ್ಯ ಜಾಗೃತಿ ಕಾರ್ಯಕ್ರಮದ ಬಿಲ್ ಪಾವತಿಸಲು ಎನ್​ಜಿಒ ಅಧ್ಯಕ್ಷರಿಂದ ಲಂಚ ಸ್ವೀಕರಿಸುತ್ತಿದ್ದ ಲೆಕ್ಕಪತ್ರ ವ್ಯವಸ್ಥಾಪಕ ಅರವಿಂದ್ ಅವರನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. 2025-26ರ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿ ಜಿಲ್ಲೆಯ 10 ತಾಲೂಕುಗಳ ಜಾತ್ರೆ ಮತ್ತು ಸಂತೆಗಳಲ್ಲಿ ಆರೋಗ್ಯ ಜಾಗೃತಿ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಜಿಲ್ಲೆಯ ಹತ್ತು ತಾಲ್ಲೂಕುಗಳಲ್ಲಿ ಜಾತ್ರೆ, ಸಂತೆಗಳಲ್ಲಿ ಆರೋಗ್ಯ ಕುರಿತ ವಸ್ತು ಪ್ರದರ್ಶನ…

Read More

ಕಥೆ ಕದ್ದ ಆರೋಪಕ್ಕೆ ಡಾರ್ಲಿಂಗ್ ಕೃಷ್ಣ ಖಡಕ್ ತಿರುಗೇಟು: ಕಾನೂನು ಕ್ರಮಕ್ಕೆ ನಿರ್ಧಾರ

‘ಲವ್ ಮಾಕ್ಟೇಲ್ 3’ (Love Mocktail 3) ಸಿನಿಮಾದ ಕಥೆ ಬಗ್ಗೆ ಗುರು ದೇಶಪಾಂಡೆ, ರಾಘವೇಂದ್ರ ನಾಯ್ಕ್ ಅವರು ತಕರಾರು ತೆಗೆದಿದ್ದಾರೆ. ಕೃತಿಚೌರ್ಯ ಆಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಆರೋಪಕ್ಕೆ ‘ಲವ್ ಮಾಕ್ಟೇಲ್ 3’ ಸಿನಿಮಾದ ನಿರ್ದೇಶಕ, ನಟ ಡಾರ್ಲಿಂಗ್ ಕೃಷ್ಣ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಸೆಕೆಂಡ್ ಹಾಫ್ ಕಥೆ ಕದ್ದಿದ್ದಾರೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಬಂದಿದೆ. ಒಬ್ಬ ಫಿಲ್ಮ್ ಮೇಕರ್​ಗೆ ಇದಕ್ಕಿಂತ ಬೇರೆ ಅವಮಾನ ಇಲ್ಲ. ನಮ್ಮ ಮರ್ಯಾದೆ ಹೋಗಿದೆ. ಅದಕ್ಕಾಗಿ ನಾನು…

Read More