Headlines

nagaraj11081993

ಗದಗ: ಬಿರುಗಾಳಿ ಮಳೆಯ ಅಬ್ಬರಕ್ಕೆ ಹಾರಿಹೋದ ಮನೆ ಮೇಲಿನ ಶೀಟ್, ಮೂವರಿಗೆ ಗಾಯ

ಗದಗ, ಮಾರ್ಚ್ 25: ಗದಗ ಜಿಲ್ಲೆಯ ಹಲವೆಡೆ ಕಳೆದ ರಾತ್ರಿ ಬಿರುಗಾಳಿ, ಗುಡುಗು ಸಹಿತ ಭಾರೀ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ. ವಿಶೇಷವಾಗಿ ಮುಂಡರಗಿ ತಾಲೂಕಿನ ದಿಂಡೂರ ತಾಂಡಾದಲ್ಲಿ ಭಾರೀ ಅವಾಂತರ ಉಂಟಾಗಿದೆ. ಭಾರಿ ಗಾಳಿ ಹಾಗೂ ಮಳೆಯ ಅಬ್ಬರಕ್ಕೆ ತಾಂಡಾದಲ್ಲಿ 4ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿಗೆ ಹಾಕಿದ್ದ ತಗಡಿನ ಶೀಟ್‌ಗಳು ಹಾರಿಹೋಗಿವೆ. ಈ ವೇಳೆ ಹಾರಿದ ಶೀಟ್‌ಗಳು ತಗುಲಿ ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಶಿವಪ್ಪ ಲಮಾಣಿ, ಸೋಮವ್ವ ಲಮಾಣಿ ಮತ್ತು ದೇವಲಪ್ಪ ಲಮಾಣಿ ಎಂದು…

Read More

ಪೊಲೀಸ್ ಇನ್​ಸ್ಪೆಕ್ಟರ್​ನಿಂದ ಲೇಡಿ ರೌಡಿಶೀಟರ್​ಗೇ ಲೈಂಗಿಕ ಕಿರುಕುಳ: ಚಿನ್ನ, ಮುದ್ದು, ಬಂಗಾರಿ ಎಂದವನಿಂದಲೇ ಕೊಲೆ ಬೆದರಿಕೆ!

ಬೆಂಗಳೂರು, ಮಾರ್ಚ್ 25: ಬೆಂಗಳೂರಿನ (Bangalore) ಕೋಣನಕುಂಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಾಪಣ್ಣ ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ದೂರು ಸಲ್ಲಿಸಿರುವ ಸಂತ್ರಸ್ತೆ, ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಸಂತ್ರಸ್ತೆಯು ರೌಡಿಶೀಟರ್ ಆಗಿದ್ದು, ಆಕೆಗೆ ಫೋನ್ ಕರೆ ಮಾಡಿದ್ದ ಇನ್​ಸ್ಪೆಕ್ಟರ್ ‘ಚಿನ್ನ, ಮುದ್ದು, ಬಂಗಾರಿ’ ಎಂದೆಲ್ಲ ಸಂಬಂಧಿಸಿದ್ದಲ್ಲದೆ ಅಶ್ಲೀಲ ಸಂದೇಶಗಳನ್ನೂ ಕಳುಹಿಸಿದ್ದ ಎಂಬ ಆರೋಪ ಮಾಡಲಾಗಿದೆ. ಅಲ್ಲದೆ, ನಂತರ ಕೊಲೆ ಬೆದರಿಕೆಯನ್ನೂ ಹಾಕಿದ್ದ…

Read More

ಕಿರುತೆರೆ ನಟಿ ಸಂಜನಾ ಬುರ್ಲಿ ಮನೆಯಲ್ಲಿ ಮದುವೆ ಸಂಭ್ರಮ; ಅದ್ದೂರಿ ಆರತಕ್ಷತೆ

ಕಿರುತೆರೆ ನಟಿ ಸಂಜನಾ ಬುರ್ಲಿ (Sanjana Burli) ಮನೆಯಲ್ಲಿ ಈಗ ಮದುವೆ ಸಂಭ್ರಮ ಜೋರಾಗಿದೆ. ಸಮರ್ಥ್ ಚನ್ನಗಿರಿ ಜೊತೆ ಅವರ ವಿವಾಹ ಶಾಸ್ತ್ರ ನಡೆಯುತ್ತಿದೆ. ಅದಕ್ಕೂ ಮೊದಲ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆದಿದೆ ಎನ್ನಲಾಗಿದೆ. ಇದರ ವಿಡಿಯೋಗಳನ್ನು ಸಂಜನಾ ಬುರ್ಲಿ ಅವರ ಅಭಿಮಾನಿ ಬಳಗದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಗುತ್ತಿದೆ. ಸಂಜನಾ ಬುರ್ಲಿ ಅವರು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಸ್ನೇಹಾ ಹೆಸರಿನ ಪಾತ್ರ ಮಾಡಿ ಗಮನ ಸೆಳೆದರು. ಈ ಧಾರಾವಾಹಿಯನ್ನು ಅವರು…

Read More

Video: ಹೊಸ ಕಾರಿನಲ್ಲಿ ಜಾಲಿರೈಡ್​ಗೆಂದು ಕರ್ಕೊಂಡು ಬಂದ್ರೆ ಮಕ್ಕಳು ಕಾಪಾಡಿ ಕಾಪಾಡಿ ಎಂದು ಕೂಗೋದಾ?

ಸೋನಭದ್ರ, ಮಾರ್ಚ್​ 25: ಹೊಸ ಕಾರು ಖರೀದಿಸಿದ ಖುಷಿಯಲ್ಲಿ, ಅಕ್ಕಪಕ್ಕದ ಮನೆಯ ಮಕ್ಕಳನ್ನು ಕರೆದು ಬನ್ರಿ ಮಕ್ಕಳ ಜಾಲಿ ರೈಡ್ ಹೋಗೋಣ ಎಂದು ವ್ಯಕ್ತಿ ತನ್ನ ಹೊಸ ಕಾರಿನಲ್ಲಿ ಕೂರಿಸಿಕೊಂಡಿದ್ದರು. ಮಕ್ಕಳು ಕಾರೊಳಗೆ ಆಟವಾಡುತ್ತಿದ್ದರು. ಇದ್ದಕ್ಕಿದ್ದಂತೆ ತಮಾಷೆಗೆ ಕಾಪಾಡಿ ಕಾಪಾಡಿ ಎಂದು ಮಕ್ಕಳು ಕಿರುಚಿದ್ದಾರೆ. ಜನರು ಅವರನ್ನು ಮಕ್ಕಳ ಕಳ್ಳ ಎಂದು ಭಾವಿಸಿ ಹೊಡೆದು, ಕಾರನ್ನು ಧ್ವಂಸ ಮಾಡಿದ್ದಾರೆ. ಪೊಲೀಸರು ತನಿಖೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ.       ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್…

Read More

‘ಧುರಂಧರ್’ ಯಲಿನಾ; ಭಾರತೀಯ ಗೂಢಚಾರನನ್ನು ಮದುವೆಯಾಗಿದ್ದಾಳೆ ಪಾಕ್ ನಾಯಕನ ಮಗಳು?

ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಮತ್ತು ‘ಧುರಂಧರ್: ದಿ ರಿವೆಂಜ್’ ಚಿತ್ರಗಳಲ್ಲಿನ ಅವರ ಅನೇಕ ಪಾತ್ರಗಳು ಪ್ರೇಕ್ಷಕರಿಗೆ ಇಷ್ಟವಾಗಿವೆ. 20 ವರ್ಷದ ಸಾರಾ ಅರ್ಜುನ್ ಇದರಲ್ಲಿ ಜಮಿಲ್ ಜಮಾಲಿ ಅವರ ಮಗಳು ಯೆಲೆನಾ ಜಮಾಲಿ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದ ನಂತರ, ಅವರು ದೊಡ್ಡ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಈ ಪಾತ್ರ ಕೂಡ ಸಾಕಷ್ಟು ಗಮನ ಸೆಳೆಯಿತು. ಧುರಂಧರ್’ ಚಿತ್ರವನ್ನು ನಿರ್ದೇಶಕರು ನೈಜ ಘಟನೆಗಳನ್ನು ಆಧರಿಸಿದ ಕಾಲ್ಪನಿಕ ಚಿತ್ರ ಎಂದು ಹೇಳಿಕೊಂಡಿದ್ದಾರೆ. ಇದರಲ್ಲಿರುವ ಹಲವು ವಿಷಯಗಳನ್ನು ಸತ್ಯವೆಂದು…

Read More

Bengaluru Air Quality: ಉಡುಪಿಯಲ್ಲಿ ಅತಿಯಾಯ್ತು ವಾಯು ಮಾಲಿನ್ಯ; ಉಸಿರಾಡೋದೂ ಕಷ್ಟ!

ಬೆಂಗಳೂರು, ಮಾರ್ಚ್​ 25: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಏರ್ ಕ್ವಾಲಿಟಿಯಲ್ಲಿ   (Bengaluru Air Quality)  ಏರುಪೇರಾಗುತ್ತಲೇ ಇದೆ. ವಾಯು ಗುಣಮಟ್ಟ ಎಲ್​ಲೆಡೆಯೂ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ. ಆದರೆ ಇಂದು ಉಡುಪಿಯ ಏರ್ ಕ್ವಾಲಿಟಿ ನೋಡಿದಾಗ ಆತಂಕ ಸೃಷ್ಟಿಯಾಗುವುದಂತೂ ನಿಜ. 100ರಿಂದ 150ರ ಒಳಗಿದ್ದ ಉಡುಪಿಯ AQI ಇಂದು ಒಮ್ಮೆಲೇ 200ರ ಗಡಿ ದಾಟಿರುವುದು ಆಶ್ಚರ್ಯವಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಗಾಳಿಯ ಗುಣಮಟ್ಟ 150ಕ್ಕೂ ಕಡಿಮೆಯಿದೆ. ಆದರೆ ಉಡುಪಿಯಲ್ಲಿ ಗಾಳಿಯ ಗುಣಮಟ್ಟ 221ಕ್ಕೇರಿದೆ. ಕೆಲ ದಿನಗಳ…

Read More

ದಾವಣಗೆರೆ ಉಪಚುನಾವಣೆ: 23 ಮುಸ್ಲಿಂ ಅಭ್ಯರ್ಥಿಗಳು ಕಣಕ್ಕೆ, ಕಾಂಗ್ರೆಸ್​ಗೆ ಟೆನ್ಷನ್!

ದಾವಣಗೆರೆ, ಮಾರ್ಚ್​ 25: ದಾವಣಗೆರೆ (Davanagere) ದಕ್ಷಿಣ ಕ್ಷೇತ್ರದ ಉಪಚುನಾವಣೆ ಹೈವೋಲ್ಟೇಜ್ ಪಡೆದುಕೊಂಡಿದೆ. ದಾವಣಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ವಿರುದ್ಧ ತೊಡೆತಟ್ಟಿ ಕಣಕ್ಕಿಳಿದಿರುವ ಸಾದಿಕ್ ಪೈಲ್ವಾನ್ ನಾಮಪತ್ರ ತಿರಸ್ಕೃತವಾಗಿದೆ. ರಾಷ್ಟ್ರೀಯ ಪಕ್ಷಗಳ ಹೆಸರಿನಲ್ಲಿ‌ ನಾಮಪತ್ರವನ್ನು ಸಲ್ಲಿಸಿ ಬಿ ಫಾರಂ ಒದಗಿಸದ್ದಕ್ಕಾಗಿ ನಾಮಪತ್ರ ತಿರಸ್ಕಾರಗೊಂಡಿದೆ. ಆದರೆ, ಪಕ್ಷೇತರ ಅಭ್ಯರ್ಥಿಯಾಗಿ ಪೈಲ್ವಾನ್‌ ಸಲ್ಲಿಸಿದ ನಾಮಪತ್ರ ಊರ್ಜಿತವಾಗಿದೆ. ಕ್ಷೇತ್ರದಲ್ಲಿ 45 ನಾಮಪತ್ರ ಸಲ್ಲಿಕೆ ಆಗಿತ್ತು. ಆ ಪೈಕಿ ಮೂವರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತವಾಗಿದೆ. 42 ನಾಮಪತ್ರಗಳು ಮಾತ್ರ ಮಾನ್ಯವಾಗಿದೆ. ದಾವಣಗೆರೆ ದಕ್ಷಿಣ…

Read More

Video: ಡಬಲ್ ಡೆಕ್ಕರ್ ಬಸ್ ಪಲ್ಟಿ, ಇಬ್ಬರು ಸಾವು

ನವದೆಹಲಿ, ಮಾರ್ಚ್​ 25: ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿ ಮಂಗಳವಾರ ತಡ ರಾತ್ರಿ ಡಬಲ್ ಡೆಕ್ಕರ್ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿ, 23 ಜನರು ಗಾಯಗೊಂಡಿದ್ದಾರೆ. ರಾಜಸ್ಥಾನದಿಂದ ಬರುತ್ತಿದ್ದ ಬಸ್, ಝಂಡೆವಾಲನ್ ದೇವಸ್ಥಾನದ ಬಳಿ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಪಲ್ಟಿಯಾಗಿದೆ. ಬಸ್ಸಿನಲ್ಲಿ ಸುಮಾರು 25 ಪ್ರಯಾಣಿಕರಿದ್ದರು. ದೃಶ್ಯಗಳಲ್ಲಿ ಬಸ್ ತೀವ್ರವಾಗಿ ಹಾನಿಗೊಳಗಾಗಿದ್ದು, ಹಾನಿಗೊಳಗಾದ ಸೀಟುಗಳು ಮತ್ತು ಚಕ್ರಗಳು ವಾಹನದ ಬಳಿ ಬಿದ್ದಿರುವುದು ಕಾಣಬಹುದು.   ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್…

Read More

ಒಂದೇ ಧಾರಾವಾಹಿಯಲ್ಲಿ ಅಮೃತಾ ರಾಮಮೂರ್ತಿ ಹಾಗೂ ಅಮೂಲ್ಯ ಗೌಡ

ಕಿರುತೆರೆ ನಟಿ ಅಮೂಲ್ಯ ಗೌಡ ಅವರು ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಅದೇ ರೀತಿ ಅಮೃತಾ ರಾಮಮೂರ್ತಿ (Amrutha Ramamoorthi) ಕೂಡ ಸಾಕಷ್ಟು ಹೆಸರು ಮಾಡಿದ್ದಾರೆ. ಇಬ್ಬರಿಗೂ ದೊಡ್ಡ ಫ್ಯಾನ್ ಬೇಸ್​ ಇದೆ. ಈಗ ಇಬ್ಬರೂ ಒಂದೇ ಧಾರಾವಾಹಿ ಮೂಲಕ ಬರಲು ರೆಡಿ ಆಗಿದ್ದಾರೆ ಎಂಬುದು ವಿಶೇಷ. ಉದಯ ಟಿವಿಯಲ್ಲಿ ಪ್ರಸಾರ ಆಗಲಿರುವ ಸೀರಿಯಲ್​​ನ ಭಾಗವಾಗಿ ಅಮೂಲ್ಯ ಗೌಡ ಹಾಗೂ ಅಮೃತಾ ರಾಮಮೂರ್ತಿ ಕಾಣಿಸಿಕೊಳ್ಳಲಿದ್ದಾರೆ. ಇದು ಅಭಿಮಾನಿಗಳ ಪಾಲಿಗೆ ಖುಷಿಯ ವಿಷಯ. ಅಮೂಲ್ಯ ಗೌಡ ಕನ್ನಡ ಕಿರುತೆರೆ…

Read More

ಕರ್ನಾಟಕ ಹವಾಮಾನ ವರದಿ: ಮಳೆರಾಯನ ಅವಾಂತರಕ್ಕೆ ಹಾರಿ ಹೋಯ್ತು ಸೂರು! ಇಂದೂ ವರುಣನ ಆರ್ಭಟ ಜೋರು

ಬೆಂಗಳೂರು, ಮಾರ್ಚ್​ 25: ಮಂಗಳವಾರ ಸುರಿದ ಮಳೆಯಿಂದಾಗಿ (Weather Forecast) ಹಲವೆಡೆ ಅವಾಂತಗಳು ಸೃಷ್ಟಿಯಾಗಿವೆ. ಜೋರಾದ ಗಾಳಿಗೆ ಮನೆ ಮೇಲಿನ ಸೂರು ಸಹ ಹಾರಿ ಹೋಗಿದ್ದು, ಜನರು ಕಂಗಾಲಾಗಿದ್ದಾರೆ. ಇಂದೂ ಸಹ ರಾಜ್ಯದೆಲ್ಲೆಡೆ ಗುಡುಗು ಸಹಿತ ಮಳೆಯಿರಲಿದ್ದು, ಹವಾಮಾನ ಇಲಾಖೆ 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಿದೆ. ಜೋರು ಗಾಳಿ ಮಳೆಗೆ ಗದಗದಲ್ಲಿ ಅವಾಂತರ ಗದಗ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಭಾರಿ ಗಾಳಿ, ಗುಡುಗು ಸಹಿತ ಮಳೆಯ ಅಬ್ಬರದಿಂದ ಹಲವು ಕಡೆ ಅವಾಂತರಗಳು ಸಂಭವಿಸಿವೆ. ವಿಶೇಷವಾಗಿ…

Read More