nagaraj11081993

ದಾವಣಗೆರೆ ಉಪಚುನಾವಣೆ: 23 ಮುಸ್ಲಿಂ ಅಭ್ಯರ್ಥಿಗಳು ಕಣಕ್ಕೆ, ಕಾಂಗ್ರೆಸ್​ಗೆ ಟೆನ್ಷನ್!

ದಾವಣಗೆರೆ, ಮಾರ್ಚ್​ 25: ದಾವಣಗೆರೆ (Davanagere) ದಕ್ಷಿಣ ಕ್ಷೇತ್ರದ ಉಪಚುನಾವಣೆ ಹೈವೋಲ್ಟೇಜ್ ಪಡೆದುಕೊಂಡಿದೆ. ದಾವಣಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ವಿರುದ್ಧ ತೊಡೆತಟ್ಟಿ ಕಣಕ್ಕಿಳಿದಿರುವ ಸಾದಿಕ್ ಪೈಲ್ವಾನ್ ನಾಮಪತ್ರ ತಿರಸ್ಕೃತವಾಗಿದೆ. ರಾಷ್ಟ್ರೀಯ ಪಕ್ಷಗಳ ಹೆಸರಿನಲ್ಲಿ‌ ನಾಮಪತ್ರವನ್ನು ಸಲ್ಲಿಸಿ ಬಿ ಫಾರಂ ಒದಗಿಸದ್ದಕ್ಕಾಗಿ ನಾಮಪತ್ರ ತಿರಸ್ಕಾರಗೊಂಡಿದೆ. ಆದರೆ, ಪಕ್ಷೇತರ ಅಭ್ಯರ್ಥಿಯಾಗಿ ಪೈಲ್ವಾನ್‌ ಸಲ್ಲಿಸಿದ ನಾಮಪತ್ರ ಊರ್ಜಿತವಾಗಿದೆ. ಕ್ಷೇತ್ರದಲ್ಲಿ 45 ನಾಮಪತ್ರ ಸಲ್ಲಿಕೆ ಆಗಿತ್ತು. ಆ ಪೈಕಿ ಮೂವರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತವಾಗಿದೆ. 42 ನಾಮಪತ್ರಗಳು ಮಾತ್ರ ಮಾನ್ಯವಾಗಿದೆ. ದಾವಣಗೆರೆ ದಕ್ಷಿಣ…

Read More

Video: ಡಬಲ್ ಡೆಕ್ಕರ್ ಬಸ್ ಪಲ್ಟಿ, ಇಬ್ಬರು ಸಾವು

ನವದೆಹಲಿ, ಮಾರ್ಚ್​ 25: ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿ ಮಂಗಳವಾರ ತಡ ರಾತ್ರಿ ಡಬಲ್ ಡೆಕ್ಕರ್ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿ, 23 ಜನರು ಗಾಯಗೊಂಡಿದ್ದಾರೆ. ರಾಜಸ್ಥಾನದಿಂದ ಬರುತ್ತಿದ್ದ ಬಸ್, ಝಂಡೆವಾಲನ್ ದೇವಸ್ಥಾನದ ಬಳಿ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಪಲ್ಟಿಯಾಗಿದೆ. ಬಸ್ಸಿನಲ್ಲಿ ಸುಮಾರು 25 ಪ್ರಯಾಣಿಕರಿದ್ದರು. ದೃಶ್ಯಗಳಲ್ಲಿ ಬಸ್ ತೀವ್ರವಾಗಿ ಹಾನಿಗೊಳಗಾಗಿದ್ದು, ಹಾನಿಗೊಳಗಾದ ಸೀಟುಗಳು ಮತ್ತು ಚಕ್ರಗಳು ವಾಹನದ ಬಳಿ ಬಿದ್ದಿರುವುದು ಕಾಣಬಹುದು.   ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್…

Read More

ಒಂದೇ ಧಾರಾವಾಹಿಯಲ್ಲಿ ಅಮೃತಾ ರಾಮಮೂರ್ತಿ ಹಾಗೂ ಅಮೂಲ್ಯ ಗೌಡ

ಕಿರುತೆರೆ ನಟಿ ಅಮೂಲ್ಯ ಗೌಡ ಅವರು ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಅದೇ ರೀತಿ ಅಮೃತಾ ರಾಮಮೂರ್ತಿ (Amrutha Ramamoorthi) ಕೂಡ ಸಾಕಷ್ಟು ಹೆಸರು ಮಾಡಿದ್ದಾರೆ. ಇಬ್ಬರಿಗೂ ದೊಡ್ಡ ಫ್ಯಾನ್ ಬೇಸ್​ ಇದೆ. ಈಗ ಇಬ್ಬರೂ ಒಂದೇ ಧಾರಾವಾಹಿ ಮೂಲಕ ಬರಲು ರೆಡಿ ಆಗಿದ್ದಾರೆ ಎಂಬುದು ವಿಶೇಷ. ಉದಯ ಟಿವಿಯಲ್ಲಿ ಪ್ರಸಾರ ಆಗಲಿರುವ ಸೀರಿಯಲ್​​ನ ಭಾಗವಾಗಿ ಅಮೂಲ್ಯ ಗೌಡ ಹಾಗೂ ಅಮೃತಾ ರಾಮಮೂರ್ತಿ ಕಾಣಿಸಿಕೊಳ್ಳಲಿದ್ದಾರೆ. ಇದು ಅಭಿಮಾನಿಗಳ ಪಾಲಿಗೆ ಖುಷಿಯ ವಿಷಯ. ಅಮೂಲ್ಯ ಗೌಡ ಕನ್ನಡ ಕಿರುತೆರೆ…

Read More

ಕರ್ನಾಟಕ ಹವಾಮಾನ ವರದಿ: ಮಳೆರಾಯನ ಅವಾಂತರಕ್ಕೆ ಹಾರಿ ಹೋಯ್ತು ಸೂರು! ಇಂದೂ ವರುಣನ ಆರ್ಭಟ ಜೋರು

ಬೆಂಗಳೂರು, ಮಾರ್ಚ್​ 25: ಮಂಗಳವಾರ ಸುರಿದ ಮಳೆಯಿಂದಾಗಿ (Weather Forecast) ಹಲವೆಡೆ ಅವಾಂತಗಳು ಸೃಷ್ಟಿಯಾಗಿವೆ. ಜೋರಾದ ಗಾಳಿಗೆ ಮನೆ ಮೇಲಿನ ಸೂರು ಸಹ ಹಾರಿ ಹೋಗಿದ್ದು, ಜನರು ಕಂಗಾಲಾಗಿದ್ದಾರೆ. ಇಂದೂ ಸಹ ರಾಜ್ಯದೆಲ್ಲೆಡೆ ಗುಡುಗು ಸಹಿತ ಮಳೆಯಿರಲಿದ್ದು, ಹವಾಮಾನ ಇಲಾಖೆ 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಿದೆ. ಜೋರು ಗಾಳಿ ಮಳೆಗೆ ಗದಗದಲ್ಲಿ ಅವಾಂತರ ಗದಗ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಭಾರಿ ಗಾಳಿ, ಗುಡುಗು ಸಹಿತ ಮಳೆಯ ಅಬ್ಬರದಿಂದ ಹಲವು ಕಡೆ ಅವಾಂತರಗಳು ಸಂಭವಿಸಿವೆ. ವಿಶೇಷವಾಗಿ…

Read More

13 ವರ್ಷಗಳ ಹೋರಾಟ ಅಂತ್ಯ, ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ಪಡೆದ ಭಾರತದ ಮೊದಲ ವ್ಯಕ್ತಿ ಹರೀಶ್ ರಾಣಾ ನಿಧನ

ನವದೆಹಲಿ, ಮಾರ್ಚ್​ 25: ಒಂದಲ್ಲಾ ಎರಡಲ್ಲ ಹದಿಮೂರು ವರ್ಷಗಳ ಹೋರಾಟ ಅಂತ್ಯಗೊಂಡಿದೆ. 13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾ ಕೊನೆಯುಸಿರೆಳೆದಿದ್ದಾರೆ. ನಿಷ್ಕ್ರಿಯ ದಯಾಮರಣ(Passive Euthanasia)ಕ್ಕೆ ಅನುಮತಿ ಪಡೆದ ಭಾರತದಲ್ಲಿ ಮೊದಲ ವ್ಯಕ್ತಿ ಹರೀಶ್ ರಾಣಾ ಏಮ್ಸ್​ ಆಸ್ಪತ್ರೆಯಲ್ಲಿ ಉಸಿರು ಚೆಲ್ಲಿದ್ದಾರೆ. ರಾಣಾ (31) ಅವರನ್ನು ಮಾರ್ಚ್ 14 ರಂದು ಗಾಜಿಯಾಬಾದ್‌ನಲ್ಲಿರುವ ತಮ್ಮ ಮನೆಯಿಂದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (AIIMS) ಡಾ.ಬಿ.ಆರ್. ಅಂಬೇಡ್ಕರ್ ಇನ್ಸ್ಟಿಟ್ಯೂಟ್ ರೋಟರಿ ಕ್ಯಾನ್ಸರ್ ಆಸ್ಪತ್ರೆ ಸ್ಥಳಾಂತರಿಸಲಾಗಿತ್ತು, ಅವರು 2013 ರಿಂದ ಕೋಮಾದಲ್ಲಿದ್ದರು….

Read More

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾರಾಟ; ಶೀಘ್ರವೇ ಆರ್​​ಸಿಬಿ ಹೆಸರು ಬದಲಾವಣೆ?

ಆದಿತ್ಯ ಬಿರ್ಲಾ ಸಮೂಹ ಸುಮಾರು 16,706 ಕೋಟಿ ರೂಪಾಯಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರ್ಯಾಂಚೈಸಿಯನ್ನು ಖರೀದಿ ಮಾಡಿದೆ. ಇವರ ಜೊತೆ ಬ್ಲ್ಯಾಕ್‌ಸ್ಟೋನ್ ಇಕ್ವಿಟಿ ಫರ್ಮ್‌, ಅಮೆರಿಕದ ಹೂಡಿಕೆದಾರ ಡೇವಿಡ್‌ ಬ್ಲಿಟ್ಝರ್ ಒಡೆತನದ ಬೋಲ್ಟ್‌ ವೆಂಚರ್ಸ್‌ ಮತ್ತು ಟೈಮ್ಸ್‌ ಆಫ್‌ ಇಂಡಿಯಾ ಮಾಧ್ಯಮ ಸಮೂಹ ಕೂಡ ಖರೀದಿಯಲ್ಲಿ ಕೈ ಜೋಡಿಸಿದೆ. ಈಗ ಆರ್​​ಸಿಬಿ ಹೆಸರು ಬದಲಾವಣೆ ಸಾಧ್ಯತೆ ಬಲವಾಗಿ ಕಾಣಿಸುತ್ತಿದೆ. ಮಾರ್ಚ್ 28ರಂದು ಆರ್​​ಸಿಬಿ ಈ ಸೀಸನ್​​ನ ಮೊದಲ ಪಂದ್ಯ ಆಡಲಿದೆ. ಅದಕ್ಕೂ ಮೊದಲು ಮಾರಾಟ ವಹಿವಾಟು…

Read More

ಅಮೆರಿಕ ಯುದ್ಧ ಗೆದ್ದಿದೆ, ಇರಾನಿನ ನೌಕಾಪಡೆ, ವಾಯುಪಡೆ ಸಂಪೂರ್ಣ ನಾಶವಾಗಿದೆ ಎಂದ ಟ್ರಂಪ್

ವಾಷಿಂಗ್ಟನ್, ಮಾರ್ಚ್ 25: ಪಶ್ಚಿಮ ಏಷ್ಯಾದಲ್ಲಿ ಯುದ್ಧ ಉಲ್ಬಣಗೊಳ್ಳುತ್ತಿದ್ದರೂ, ಡೊನಾಲ್ಡ್​ ಟ್ರಂಪ್(Donald Trump) ಮಾತ್ರ ತಾವೇ ಯುದ್ಧ ಗೆದ್ದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಇರಾನಿನ ನೌಕಾಪಡೆ, ವಾಯುಪಡೆ ಸಂಪೂರ್ಣವಾಗಿ ನಾಶವಾಗಿದೆ ಎಂದರು. ಗೃಹ ಭದ್ರತಾ ಕಾರ್ಯದರ್ಶಿಯ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಟ್ರಂಪ್, ನಾವು ಈಗ ಮಾತುಕತೆ ನಡೆಸುತ್ತಿದ್ದೇವೆ ಇರಾನ್ ಒಪ್ಪಂದ ಮಾಡಿಕೊಳ್ಳಲು ಸಿದ್ಧವಿದೆ. ಅವರ ನೌಕಾಪಡೆ ಹೋಗಿದೆ, ಅವರ ವಾಯುಪಡೆ ಹೋಗಿದೆ, ಅವರ ಸಂವಹನ ಹೋಗಿದೆ ಅವರ ಶಕ್ತಿ ಬಹುತೇಕ ಕುಸಿದಿದೆ ಎಂದು ಟ್ರಂಪ್ ಹೇಳಿದ್ದಾರೆ. ಇರಾನ್ ಜತೆಗಿನ…

Read More

Daily Devotional: ಧರ್ಮ ಮತ್ತು ಅಧರ್ಮ ಯಾವುದಕ್ಕೆ ಹೆಚ್ಚು ಪ್ರಾಶಸ್ತ್ಯ?

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಧರ್ಮ ಮತ್ತು ಅಧರ್ಮ ಯಾವುದಕ್ಕೆ ಹೆಚ್ಚು ಪ್ರಾಶಸ್ತ್ಯ ಎಂದು ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಇಂದು ಅನೇಕರಲ್ಲಿ ಧರ್ಮ ಮತ್ತು ಅಧರ್ಮಗಳಲ್ಲಿ ಯಾವುದಕ್ಕೆ ಹೆಚ್ಚು ಪ್ರಾಶಸ್ತ್ಯ ಎಂಬ ಪ್ರಶ್ನೆ ಕಾಡುತ್ತದೆ. ಶಾರ್ಟ್‌ಕಟ್‌ಗಳ ಮೂಲಕ ಯಶಸ್ಸು ಸಾಧಿಸುವ ಅಧರ್ಮದ ಮಾರ್ಗಗಳು ತಾತ್ಕಾಲಿಕವಾಗಿ ಜಯವನ್ನು ತಂದುಕೊಟ್ಟಂತೆ ಕಂಡರೂ, ಧರ್ಮದ ಹಾದಿಯಲ್ಲಿನ ಕಷ್ಟಗಳು ಸಹಜವಾಗಿ ಕಾಣುತ್ತವೆ. ಸನಾತನ ಧರ್ಮದ ಇತಿಹಾಸವು ಶ್ರೀರಾಮಚಂದ್ರ, ಸತ್ಯ ಹರಿಶ್ಚಂದ್ರ ಮತ್ತು ಧರ್ಮರಾಯರಂತಹ ಮಹನೀಯರು ಧರ್ಮ ಮಾರ್ಗದಲ್ಲಿ ಅನುಭವಿಸಿದ ಕಷ್ಟಗಳನ್ನು ನೆನಪಿಸುತ್ತದೆ….

Read More

Horoscope Today: ಇಂದು ಈ ರಾಶಿಯವರು ಇಂದು ತಾಳ್ಮೆ ಕಳೆದುಕೊಳ್ಳಬೇಡಿ!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್​ 25​, ಬುಧವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ಸಪ್ತಮಿ ತಿಥಿ, ಮೃಗಶಿರಾ ನಕ್ಷತ್ರ, ಸೌಭಾಗ್ಯ ಯೋಗ, ವಣಿಕ ಕರಣಗಳನ್ನು ಒಳಗೊಂಡಿದೆ. ಇಂದು ರವಿ ಮೀನ ರಾಶಿಯಲ್ಲಿ, ಚಂದ್ರ ಮಿಥುನ ರಾಶಿಯಲ್ಲಿ ಸಂಚರಿಸಲಿದ್ದಾರೆ. ಸಂತಾನ ಸಪ್ತಮಿ, ಸೂರ್ಯ ದವನಾರ್ಪಣೆ, ಹಾಗೂ ನವಿಲೆ ಆಂಜನೇಯ…

Read More

IPL 2026: ಚಿನ್ನಸ್ವಾಮಿಯಲ್ಲಿ ಆರ್​ಸಿಬಿ ಮ್ಯಾಚ್, ಮಾರ್ಚ್ 28ಕ್ಕೆ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ಬಂದ್

ಬೆಂಗಳೂರು, ಮಾರ್ಚ್ 25: ಮಾರ್ಚ್ 28ಕ್ಕೆ ಐಪಿಎಲ್ (IPL 2026) ಆರಂಭವಾಗಲಿದ್ದು, ಬೆಂಗಳೂರಿನ (Bangalore) ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹಾಗೂ ಎಸ್​ಆರ್​ಎಚ್ ಮಧ್ಯೆ ಮ್ಯಾಚ್ ನಡೆಯಲಿದೆ. ಪಂದ್ಯಕ್ಕೆ ನಗರ ಪೊಲೀಸರು ಭಾರೀ ಭದ್ರತೆ ಒದಗಿಸುತ್ತಿದ್ದು, ಸಂಚಾರ ಸಮಸ್ಯೆ ನಿರ್ವಹಣೆಗೂ ಕ್ರಮ ಕೈಗೊಂಡಿದ್ದಾರೆ. ಬೆಂಗಳೂರು ಸಂಚಾರ ಪೊಲೀಸರು ಟ್ರಾಫಿಕ್ ಅಡ್ವೈಸರಿ ಪ್ರಕಟಿಸಿದ್ದು, ಅಭಿಮಾನಿಗಳ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕಾಗಿ ಹಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ. ಕಳೆದ ವರ್ಷದ ಕಾಲ್ತುಳಿತ ಘಟನೆ ಮರುಕಳಿಸದಂತೆ ಈ ಬಾರಿ…

Read More