ಟ್ರಾಫಿಕ್ ಕಿರಿಕಿರಿ, ದುಬಾರಿ ಬಾಡಿಗೆ ಇದ್ರೂ ಬೆಂಗಳೂರು ಬಿಡಲ್ಲ ಜನ! ಬಿಹಾರಿ ಯುವಕನ ವಿಡಿಯೋ ವೈರಲ್
ಬೆಂಗಳೂರು, ಮೇ 30: ಟ್ರಾಫಿಕ್ ಕಿರಿಕಿರಿ, ದುಬಾರಿ ಮನೆ ಬಾಡಿಗೆ ಹಾಗೂ ಒಂಟಿತನ ಕಾಡುತ್ತಿದ್ದರೂ ಸಹ ಜನ ಯಾಕೆ ಬೆಂಗಳೂರು (Bengaluru) ಬಿಟ್ಟು ಹೋಗಲು ಇಷ್ಟಪಡುವುದಿಲ್ಲ ಎಂಬುದನ್ನು ಬಿಹಾರ ಮೂಲದ ಯುವಕನೊಬ್ಬ ವಿವರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಮುಖ್ಯಾಂಶಗಳು ಟ್ರಾಫಿಕ್ ಹಾಗೂ ದುಬಾರಿ ಬಾಡಿಗೆ ಇದ್ದರೂ ಬೆಂಗಳೂರು ಬಿಡಲು ಜನ ಒಪ್ಪುತ್ತಿಲ್ಲ. ಸಿಲಿಕಾನ್ ಸಿಟಿಯ ಅದ್ಭುತ ಹವಾಮಾನವೇ ವಲಸಿಗರನ್ನು ಸೆಳೆಯಲು ಮುಖ್ಯ ಕಾರಣವಾಗಿದೆ. ವರ್ಕ್ ಫ್ರಮ್ ಹೋಮ್ ನೀಡಿದರೆ…