Bakrid 2026: ಬಕ್ರೀದ್ ಹಬ್ಬದ ಸ್ಪೆಷಲ್ ಮಟನ್ ಬಿರಿಯಾನಿ; ಮಾಡೋದು ಬಲು ಸುಲಭ
ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಬಕ್ರೀದ್ (Bakri Eid) ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದು. ಈದ್ ಅಲ್-ಅಧಾ ಎಂದೂ ಕರೆಯಲ್ಪಡುವ ಈ ಬಕ್ರೀದ್ ಹಬ್ಬವನ್ನು ಪ್ರವಾದಿ ಇಬ್ರಾಹಿಂ ಅವರ ಸಮರ್ಪಣಾ ಮನೋಭಾವ ಮತ್ತು ತ್ಯಾಗವನ್ನು ಸ್ಮರಿಸಲು ಆಚರಿಸಲಾಗುತ್ತದೆ. ತ್ಯಾಗ, ಮಾನವೀಯತೆ, ಸಹೋದರತ್ವ ಮತ್ತು ಸಹಾಯ ಮನೋಭಾವದ ಪ್ರತೀಕವಾಗಿರುವ ಈ ಹಬ್ಬದ ದಿನ ಸಾಮಾನ್ಯವಾಗಿ ಕುರಿ, ಮೇಕೆಯನ್ನು ದೇವರಿಗಾಗಿ ಬಲಿ ಕೊಡಲಾಗುತ್ತದೆ. ಜೊತೆ ಮುಸ್ಲಿಂ ಬಾಂಧವರು ತಮ್ಮ ಸಂಬಂಧಿಕರು ಮತ್ತು ಸ್ನೇಹಿತರ ಮನೆಗಳಿಗೆ ಭೇಟಿ ನೀಡಿ ಹಬ್ಬವನ್ನು ಸಂಭ್ರಮದಿಂದ…