ಐಪಿಒಗೆ ಮುನ್ನ ಫ್ಲಿಪ್ಕಾರ್ಟ್ ಗ್ರೂಪ್ ಸಿಎಫ್ಒ ಸ್ಥಾನ ಬಿಟ್ಟ ಶ್ರೀರಾಮ್ ವೆಂಕಟರಾಮ್
ನವದೆಹಲಿ, ಮಾರ್ಚ್ 20: ಅಮೆರಿಕದ ಎಂಎನ್ಸಿ ಕಂಪನಿಯಾದ ವಾಲ್ಮಾರ್ಟ್ನ ಒಡೆತನದ ಫ್ಲಿಪ್ಕಾರ್ಟ್ ಸಂಸ್ಥೆಯ (Flipkart) ಎಕ್ಸಿಕ್ಯೂಟಿವ್ ಸ್ಥಾನಪಲ್ಲಟವಾಗುತ್ತಿದೆ. ಫ್ಲಿಪ್ಕಾರ್ಟ್ ಗ್ರೂಪ್ ಚೀಫ್ ಫೈನಾನ್ಷಿಯಲ್ ಆಫೀಸರ್ ಸ್ಥಾನದಿಂದ ಶ್ರೀರಾಮ್ ವೆಂಕಟರಾಮ್ (Sriram Venkatram) ಅವರು ಕೆಳಗಿಳಿಯಲಿದ್ದಾರೆ. ಭಾರತದ ಅತಿದೊಡ್ಡ ಇಕಾಮರ್ಸ್ ಕಂಪನಿಗಳಲ್ಲಿ ಒಂದೆನಿಸಿರುವ ಫ್ಲಿಪ್ಕಾರ್ಟ್ ಈ ಸಂಗತಿಯನ್ನು ಶುಕ್ರವಾರ ಪ್ರಕಟಿಸಿದೆ. ಶ್ರೀರಾಮ್ ವೆಂಕಟರಾಮ್ ಅವರು 2015ರಲ್ಲಿ ಫ್ಲಿಪ್ಕಾರ್ಟ್ ಸೇರಿದ್ದರು. ಹಲವು ಮುಂಚೂಣಿ ಹುದ್ದೆಗಳನ್ನು ನಿಭಾಯಿಸುತ್ತಾ ಹೋಗಿದ್ದ ಅವರು 2018ರಲ್ಲಿ ಗ್ರೂಪ್ನ ಸಿಎಫ್ಒ ಆಗಿ ಕಂಪನಿಯ ಹಣಕಾಸು ವಿಭಾಗದ ಚುಕ್ಕಾಣಿ…