ಸಾವಿನ ದವಡೆಯಿಂದ ಮಾಜಿ ಶಾಸಕನ ರಕ್ಷಣೆ: ಸತತ 9 ಬಾರಿ CPR ನೀಡಿ ಜೀವ ಉಳಿಸಿದ ವೈದ್ಯೆ – Kannada News | Heroic Doctor Revives Ex MLA from Heart Attack with 9 CPR Sessions
ಹನುಮಕೊಂಡ, ಜು.27: ಹೃದಯಾಘಾತದಿಂದ (Heart Attack) ಜೀವನ್ಮರಣ ಹೋರಾಟ ನಡೆಸುತ್ತಿದ್ದ ಹನುಮಕೊಂಡದ ಬಿಆರ್‌ಎಸ್ (BRS) ಹಿರಿಯ ನಾಯಕ, ನರಸಂಪೇಟೆಯ ಮಾಜಿ ಶಾಸಕ ಪೆದ್ದಿ ಸುದರ್ಶನ್ ರೆಡ್ಡಿ ಅವರಿಗೆ ಸತತ 9 ಬಾರಿ ಸಿಪಿಆರ್ (CPR) ನೀಡುವ ಮೂಲಕ ವೈದ್ಯೆಯೊಬ್ಬರು ಮರುಜೀವ ನೀಡಿದ್ದಾರೆ. ಭಾನುವಾರ ಬೆಳಿಗ್ಗೆ ತೀವ್ರ ಹೃದಯಾಘಾತಕ್ಕೊಳಗಾಗಿ ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿದ್ದ ಸುದರ್ಶನ್ ರೆಡ್ಡಿ ಅವರನ್ನು ರೋಹಿಣಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಥಿತಿ ಅತ್ಯಂತ ಗಂಭೀರವಾಗಿತ್ತು. ಆದರೆ ಆಸ್ಪತ್ರೆಯ ಕಾರ್ಡಿಯಾಲಜಿಸ್ಟ್ ಡಾ. ಸಿ. ಮಮತಾ ರೆಡ್ಡಿ ತಮ್ಮ ಸತತ…