Headlines

nagaraj11081993

ಯುಗಾದಿ ಹಬ್ಬದಂದೇ ದಿನೇಶ್ ಕಾರ್ತಿಕ್ ಮನೆಗೆ ಪುಟ್ಟ ದೇವತೆಯ ಆಗಮನ

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾರ್ಗದರ್ಶಕ ಮತ್ತು ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ (Dinesh Karthik) ಮನೆಗೆ ಯುಗಾದಿ ಹಬ್ಬದಂದೇ ಪುಟ್ಟ ದೇವತೆಯ ಆಗಮನವಾಗಿದೆ. ದಿನೇಶ್ ಕಾರ್ತಿಕ್ ಅವರ ಮಡದಿ ದೀಪಿಕಾ ಪಳ್ಳಿಕಲ್ (Deepika Pallikal) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ಸ್ವತಃ ದಿನೇಶ್ ಕಾರ್ತಿಕ್ ಅವರೇ ತಮ್ಮ ಇನ್ಸ್​ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಮಗಳ ಹೆಸರನ್ನು ಬಹಿರಂಗಪಡಿಸಿರುವ ಕಾರ್ತಿಕ್, ಪುಟ್ಟ ಕಂದಮ್ಮನಿಗೆ ‘ರಾಹ’ (Raaha) ಎಂದು ಹೆಸರಿಟ್ಟಿರುವುದಾಗಿ ತಿಳಿಸಿದ್ದಾರೆ. ಮೇಲೆ…

Read More

Ugadi Bhavishya 2026: ಯುಗಾದಿ ವರ್ಷ ಭವಿಷ್ಯ; ಈ ವರ್ಷ ಮೀನ ರಾಶಿಯವರಿಗೆ ಹೇಗಿರಲಿದೆ?

2026ರ ಯುಗಾದಿ ಭವಿಷ್ಯದ ಪ್ರಕಾರ, ಮೀನ ರಾಶಿಯವರಿಗೆ ವ್ಯಾಪಾರ ಕ್ಷೇತ್ರದಲ್ಲಿ ಯಶಸ್ಸು ದೊರೆಯಲಿದೆ ಎಂದು ಜ್ಯೋತಿಷಿ ಕೆ ವೆಂಕಟೇಶ್ ಶರ್ಮಾ ಭವಿಷ್ಯ ನುಡಿದಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅನುಭವಿಸಿದ ತೊಂದರೆಗಳು ಕಡಿಮೆಯಾಗಿ ಸ್ಥಿರ ಆದಾಯವನ್ನು ಕಾಣುವ ಸಾಧ್ಯತೆ ಇದೆ. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ನೆಲೆಸಲಿದೆ. ಆದಾಗ್ಯೂ, ಆರೋಗ್ಯದ ಬಗ್ಗೆ ಗಮನ ಹರಿಸಬೇಕಿದ್ದು, ನಿದ್ರಾಹೀನತೆ ಮತ್ತು ಒತ್ತಡವು ಕಾಡಬಹುದು. ಉತ್ತಮ ನಿದ್ರೆ ಮತ್ತು ಮಾನಸಿಕ ನೆಮ್ಮದಿಗಾಗಿ ಹೆಚ್ಚು ಗಮನ ನೀಡಬೇಕು. ಗ್ರಹಗಳ ಸ್ಥಾನವನ್ನು ಅವಲೋಕಿಸಿದಾಗ, ಶನಿ ಗ್ರಹದ…

Read More

ಸಿಎಂ ಹುದ್ದೆ ಖಾಲಿ ಇಲ್ಲ ಎಂಬ ವೇಣುಗೋಪಾಲ್​​ ಹೇಳಿಕೆಗೆ ಡಿಸಿಎಂ ಡಿ.ಕೆ. ಶಿವಕುಮಾರ್​ ಉತ್ತರ ನೋಡಿ

ಬೆಂಗಳೂರು, ಮಾರ್ಚ್​​ 19: ಕರ್ನಾಟಕದಲ್ಲಿ ಪ್ರಭಾವಿ ಸಿಎಂ ಇದ್ದಾರೆ, ಸಿಎಂ ಹುದ್ದೆ ಖಾಲಿ ಇಲ್ಲ ಎಂಬ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿಕೆಗೆ ಡಿಸಿಎಂ ಡಿ.ಕೆ. ಶಿವಕುಮಾರ್​​ ಪ್ರತಿಕ್ರಿಯಿಸಿದ್ದಾರೆ. ಅವರ ಹೇಳಿಕೆಯನ್ನು ನಾನು ಗಮನಿಸಿದ್ದು, ಪಕ್ಷ ಮತ್ತು ಶಾಸಕರು ತೀರ್ಮಾನಿಸೋದಾಗಿಯೂ ಅವರು ತಿಳಿಸಿರೋದಾಗಿ ಡಿಕೆಶಿ ಹೇಳಿದ್ದಾರೆ. ಕೆಲ ಶಾಸಕರಿಂದ ಸಚಿವ ಸ್ಥಾನದ ಬೇಡಿಕೆ ವಿಚಾರವಾಗಿಯೂ ಮಾತನಾಡಿದ ಅವರು, ಮಂತ್ರಿ ಆಗಬೇಕು ಎಂದು ಆಸೆ ಪಡುವುದರಲ್ಲಿ ತಪ್ಪಿಲ್ಲ. ಸಂಪುಟ ಪುನಾರಚನೆ ಬಗ್ಗೆ ಸಿಎಂ ಹೇಳಿದ್ದಕ್ಕೆ ಕೆಲವರು ಆ…

Read More

ಬಾಗಲಕೋಟೆ ಅಭ್ಯರ್ಥಿಗೆ ಬೆಂಬಲ ಘೋಷಿಸಿದ ಯತ್ನಾಳ್: ದಾವಣಗೆರೆ ಬಿಜೆಪಿ ಅಭ್ಯರ್ಥಿ ಬಗ್ಗೆ ಹೊಸ ಬಾಂಬ್

ವಿಜಯಪುರ, ಮಾರ್ಚ್​​ 19: ದಾವಣಗೆರೆ ಹಾಗೂ ಬಾಗಲಕೋಟೆ ಉಪ ಚುನಾವಣೆಗೆ ಈಗಾಗಲೇ ಮುಹೂರ್ತ ಫಿಕ್ಸ್ ಆಗಿದೆ. ಎರಡು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನ ಘೋಷಣೆ ಮಾಡಲಾಗಿದೆ. ಬಾಗಕೋಟೆಗೆ ವೀರಣ್ಣ ಚರಂತಿಮಠ ಹಾಗೂ ದಾವಣಗೆರೆಗೆ ಶ್ರೀನಿವಾಸ ಹೆಸರು ಫೈನಲ್ ಆಗಿದೆ. ಈ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (basanagouda patil yatnal)​​ ಮಾತನಾಡಿದ್ದು, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠಗೆ ನಾನು ಬೆಂಬಲ ನೀಡುತ್ತೇನೆ ಎಂದಿದ್ದಾರೆ. ಜೊತೆಗೆ ದಾವಣಗೆರೆಯಲ್ಲಿ ಕೊನೆಕ್ಷಣದಲ್ಲಿ ಏನಾದರೂ ಆಗಬಹುದು, ಶಾಮನೂರು ಕುಟುಂಬಕ್ಕೆ ‌ಬಿಜೆಪಿ ಟಿಕೆಟ್ ಕೊಟ್ಟರು…

Read More

ವಿವಾಹ ವದಂತಿಗೆ ಸ್ಪಷ್ಟನೆ ಕೊಟ್ಟ ಅನುಷ್ಕಾ ಶೆಟ್ಟಿ

ಇತ್ತೀಚೆಗೆ ಸ್ಟಾರ್ ನಾಯಕಿ ಅನುಷ್ಕಾ ಶೆಟ್ಟಿ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಬಹುನಿರೀಕ್ಷಿತ ‘ಘಾಟಿ’ ಬಾಕ್ಸ್ ಆಫೀಸ್‌ನಲ್ಲಿ ಹೀನಾಯವಾಗಿ ಸೋತಿತು. ಅನುಷ್ಕಾ ತಂಡದಿಂದ ಅವರ ಮುಂದಿನ ಯೋಜನೆಯ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಸಿನಿಮಾ ಹೊರತಾಗಿ ಸ್ವೀಟಿ ಅವರ ಮದುವೆಯ ವದಂತಿಗಳಿಗಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಹಿಂದೆ ಅವರ ಮದುವೆಯ ಬಗ್ಗೆ ಅನೇಕ ವದಂತಿಗಳು ಬಂದಿವೆ. ಉದ್ಯಮಿ, ಹೀರೋದಿಂದ ಅವರ ವಿವಾಹದ ವದಂತಿಗಳು ಇದ್ದವು. ಆದರೆ ಅದರಲ್ಲಿ ಯಾವುದೇ ಸತ್ಯವಿಲ್ಲ ಎಂದು ಸ್ಪಷ್ಟವಾಗಿದೆ. ಈಗ, ಅನುಷ್ಕಾ ಉದ್ಯಮಿಯನ್ನು ಮದುವೆಯಾಗಲಿದ್ದಾರೆ…

Read More

Video: ಸೊಸೆ ಕೈ ಮುರಿದಿದೆ ಕಷ್ಟವಾಗುತ್ತೆಂದು ರೊಟ್ಟಿ ಲಟ್ಟಿಸಿಕೊಟ್ಟ ಮಾವ

ಈ ವಿಡಿಯೋ ನೋಡಿದಾಗ ಮಾವ-ಸೊಸೆ ಹೀಗಿರಬೇಕೆಂದು ಹೇಳುವುದು ಪಕ್ಕಾ, ಸೊಸೆಯ ಕೈ ಮುರಿದಿದೆ ಕಷ್ಟವಾಗುತ್ತೆಂದು ಮಾವ ಆಕೆಗೆ ರೊಟ್ಟಿ ಒರೆದುಕೊಟ್ಟಿರುವ ವಿಡಿಯೋ ವೈರಲ್ ಆಗಿದೆ. ಮಾವ ಮಾಡಿಕೊಟ್ಟರೆ ಮತ್ತೊಂದೆಡೆ ಸೊಸೆ ಅದನ್ನು ಕಾವಲಿ ಮೇಲೆ ಬೇಯಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಮಾವನಿಗೆ ನಿಲ್ಲಲಾಗದಷ್ಟು ವಯಸ್ಸಾಗಿದ್ದರೂ ಕೂಡ ಸೊಸೆ ಮೇಲಿನ ಕಾಳಜಿಯಿಂದ ಊಟಕ್ಕೆ ಸಹಾಯ ಮಾಡಿದ್ದಾರೆ.ಈ ವಿಡಿಯೋ ನೋಡಿದ ನಂತರ, ವೀಡಿಯೊವನ್ನು ಯಾರು ಚಿತ್ರೀಕರಿಸುತ್ತಿದ್ದಾರೆ ಮತ್ತು ಅವರು ರೊಟ್ಟಿಗೆ ಏಕೆ ಸಹಾಯ ಮಾಡುತ್ತಿಲ್ಲ ಎಂಬ ಪ್ರಶ್ನೆಗಳನ್ನು ಜನರು ಎತ್ತಿದ್ದಾರೆ….

Read More

ದಾವಣಗೆರೆ ಬೈ ಎಲೆಕ್ಷನ್: ಬಿಎಸ್​​ವೈ ಬಣಕ್ಕೆ ತೀವ್ರ ಮುಖಭಂಗ, ಮೇಲುಗೈ ಸಾಧಿಸಿದ ಮಾಜಿ ಎಂಪಿ

ದಾವಣಗೆರೆ, (ಮಾರ್ಚ್ 19): ಕರ್ನಾಟಕದ ಎರಡು ವಿಧಾನಸಭಾ ಉಪಚುನಾವಣೆಗೆ (Davanagere By Election ) ಬಿಜೆಪಿಯ ಕೇಂದ್ರೀಯ ಆಯ್ಕೆ ಸಮಿತಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಯುಗಾದಿಯ ದಿನದಂದು, ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ದಾವಣಗೆರೆಯಲ್ಲಿ ಅಚ್ಚರಿಯ ಅಭ್ಯರ್ಥಿಯ ಘೋಷಣೆ ಮಾಡಲಾಗಿದೆ. ದಾವಣಗೆರೆ ದಕ್ಷಿಣದಿಂದ ಶ್ರೀನಿವಾಸ ಟಿ ದಾಸಕರಿಯಪ್ಪ (Srinivas Dasakariyappa) ಅವರಿಗೆ ಟಿಕೆಟ್ ನೀಡಲಾಗಿದೆ. ಈ ಮೂಲಕ ದಾವಣಗೆರೆ ರೆಬೆಲ್ ಬಣದ ಅಭ್ಯರ್ಥಿಗೆ ಮಣೆ ಹಾಕಿದ್ದು, ರಾಜ್ಯ ಬಿಜೆಪಿ ಘಟಕಕ್ಕೆ ಕೇಂದ್ರದ ನಾಯಕರು ಅಚ್ಚರಿಯನ್ನು ಮೂಡಿಸಿದ್ದಾರೆ. ಮಾಜಿ ಸಿಎಂ…

Read More

ಈ ಫಂಡ್​ನಲ್ಲಿ 10,000 ರೂ ಎಸ್​ಐಪಿ; 21 ವರ್ಷದಲ್ಲಿ ಬರೋಬ್ಬರಿ 2 ಕೋಟಿ ರೂ ರಿಟರ್ನ್ಸ್

ಸದ್ಯ ಷೇರು ಮಾರುಕಟ್ಟೆ ಕಳೆದ ಒಂದು ವರ್ಷದಿಂದ ಅಲ್ಪ ಹಿನ್ನಡೆಯಲ್ಲಿದೆ. ಆದರೆ, ದೀರ್ಘಾವಧಿಯಲ್ಲಿ ಮಾರುಕಟ್ಟೆ ಬೆಳವಣಿಗೆ ಉತ್ತಮವಾಗಿರುತ್ತದೆ. ಅಂತೆಯೇ, ಮ್ಯೂಚುವಲ್ ಫಂಡ್​ಗಳೂ ಕೂಡ ದೀರ್ಘಾವಧಿಯಲ್ಲಿ ಸ್ಥಿರವಾಗಿ ರಿಟರ್ನ್ಸ್ ತರಬಲ್ಲುವು. ಕೆನರಾ ರೊಬೇಕೊ ಲಾರ್ಜ್ ಅಂಡ್ ಮಿಡ್​ಕ್ಯಾಪ್ ಫಂಡ್ (Canara Robeco Large and Mid Cap Fund) ಇದಕ್ಕೆ ಉತ್ತಮ ಉದಾಹರಣೆ. ಈ ಫಂಡ್ ಆರಂಭವಾಗಿ 21 ವರ್ಷ ಪೂರ್ಣವಾಗಿದೆ. 2005ರ ಮಾರ್ಚ್ 11ರಂದು ಶುರುವಾದ ಈ ಸ್ಕೀಮ್​ನಲ್ಲಿ ಈಗ ಇರುವ ಒಟ್ಟು ಹೂಡಿಕೆ ಹತ್ತಿರಹತ್ತಿರ 25,000…

Read More

ಕರ್ನಾಟಕದಲ್ಲಿ ಹೇಗಿದೆ ‘ಧುರಂಧರ್ 2’ ಹವಾ? ಗಳಿಕೆ ಎಷ್ಟು?

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾ ಇಂದು (ಮಾರ್ಚ್ 19) ಬಿಡುಗಡೆ ಆಗಿದೆ. ‘ಧುರಂಧರ್ 2’ ಸಿನಿಮಾ ಭಾರತದಾದ್ಯಂತ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ. ಕರ್ನಾಟಕದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಿದೆ. ಅದರಲ್ಲೂ ನಿನ್ನೆಯೇ (ಮಾರ್ಚ್ 18) ಪೇಯ್ಡ್ ಪ್ರೀಮಿಯರ್ ಶೋಗಳು ಸಹ ಪ್ರದರ್ಶನಗೊಂಡಿದ್ದು, ದುಬಾರಿ ಬೆಲೆಗೆ ಟಿಕೆಟ್​​ಗಳನ್ನು ಸಹ ಮಾರಾಟ ಮಾಡಲಾಗಿತ್ತು. ಹಾಗಿದ್ದರೂ ಸಹ ಬಹುತೇಕ ಶೋಗಳು ಹೌಸ್​​ಫುಲ್ ಆಗಿದ್ದು, ಬೆಂಗಳೂರಿನಲ್ಲಿ ಭರ್ಜರಿ ಕಲೆಕ್ಷನ್ ಅನ್ನೇ ಸಿನಿಮಾ…

Read More

ಕೊನೆಗೂ ರಿಲೀಸ್ ಆಗ್ತಿದೆ ಸೂರ್ಯ ಸಿನಿಮಾ; ಈಗಾದ್ರೂ ಸಿಗುತ್ತಾ ಗೆಲುವು?

ತಮಿಳು ನಟ ಸೂರ್ಯ (Suriya) ಅವರು ಇತ್ತೀಚೆಗೆ ದೊಡ್ಡ ಗೆಲುವು ಕಂಡಿಲ್ಲ. ಅವರ ನಟನೆಯ ‘ಕರುಪ್ಪು’ ಚಿತ್ರ ಹಲವು ಸಮಯದಿಂದ ಮುಂದಕ್ಕೆ ಹೋಗುತ್ತಲೇ ಇತ್ತು. ಕೊನೆಗೂ ಅದಕ್ಕೆ ಬಿಡುಗಡೆ ಭಾಗ್ಯ ಸಿಕ್ಕಿದೆ. ‘ಕರುಪ್ಪು’ ಸಿನಿಮಾ ಮೇ 15ರಂದು ತೆರೆಗೆ ಬರುತ್ತಿದೆ. ಈಗ ಹೊಸ ಪೋಸ್ಟರ್ ಹಂಚಿಕೊಂಡು ಸಿನಿಮಾ ರಿಲೀಸ್ ದಿನಾಂಕವನ್ನು ರಿವೀಲ್ ಮಾಡಲಾಗಿದೆ. ಇದು ಅವರ ಅಭಿಮಾನಿಗಳ ಖುಷಿಗೆ ಕಾರಣ ಆಗಿದೆ. 2020ರಲ್ಲಿ ರಿಲೀಸ್ ಆದ ಸೂರ್ಯ ನಟನೆಯ ‘ಸೂರರೈ ಪೊಟ್ರು’ ಸಿನಿಮಾ ಮೆಚ್ಚುಗೆ ಪಡೆಯಿತು. ಇದಾದ…

Read More