BCCI vs BCB: ಬಿಸಿಸಿಐಗೆ ಸೆಡ್ಡು ಹೊಡೆಯಲು ನಿಂತ ಬಾಂಗ್ಲಾ ಕ್ರಿಕೆಟ್ ಮಂಡಳಿ
2026ರ ಐಪಿಎಲ್ (IPL 2026) ಇದೇ ಮಾರ್ಚ್ 28 ರಿಂದ ಪ್ರಾರಂಭವಾಗುತ್ತಿರುವುದು ಪ್ರತಿಯೊಬ್ಬ ಕ್ರಿಕೆಟ್ ಪ್ರಿಯರಿಗೂ ತಿಳಿದಿರುವಂತ ವಿಚಾರ. ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ನಲ್ಲಿ ವಿಶ್ವ ಕ್ರಿಕೆಟ್ನ ಸೂಪರ್ ಸ್ಟಾರ್ ಆಟಗಾರರು ಆಡುವುದು ಹೊಸ ವಿಚಾರವೆನ್ನಲ್ಲ. ಹೀಗಾಗಿ ಐಪಿಎಲ್ ನಡೆಯುವ ಸಮಯದಲ್ಲಿ ಸಾಮಾನ್ಯವಾಗಿ, ಯಾವುದೇ ಪ್ರಮುಖ ಕ್ರಿಕೆಟ್ ಮಂಡಳಿಯು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುವುದಿಲ್ಲ. ಆದಾಗ್ಯೂ, ಈ ಬಾರಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಐಪಿಎಲ್ ಸಮಯದಲ್ಲಿ ಸರಣಿಯನ್ನಾಡಲು ಮುಂದಾಗಿದ್ದು, ಅದರ ವೇಳಾಪಟ್ಟಿಯನ್ನು ಸಹ ಪ್ರಕಟಿಸಿದೆ. ಅದರಂತೆ ಐಪಿಎಲ್…