ದುಬಾರಿಯಾದ ಸಲ್ಮಾನ್ ಖಾನ್ ಸಿನಿಮಾ; 40 ದಿನ ರೀಶೂಟ್
‘ಬ್ಯಾಟಲ್ ಆಫ್ ಗಲ್ವಾನ್’ ಸಿನಿಮಾದ ಟೈಟಲ್ನ ಇತ್ತೀಚೆಗೆ ‘ಮಾತೃಭೂಮಿ’ (Matrabhoomi) ಎಂದು ಬದಲಾಯಿಸಲಾಗಿದೆ. ಇದಕ್ಕೆ ಕಾರಣ ಏನು ಎಂಬುದನ್ನು ತಂಡ ರಿವೀಲ್ ಮಾಡಿರಲಿಲ್ಲ. ಹೀಗಿರುವಾಗಲೇ ಇದರ ಹಿಂದಿನ ಅಸಲಿ ವಿಷಯ ರಿವೀಲ್ ಆಗಿದೆ. ಸಲ್ಮಾನ್ ಖಾನ್ ಸಿನಿಮಾ ದುಬಾರಿ ಆಗಿದೆ. ತಂಡದವರು ಸಿನಿಮಾದ ಟೈಟಲ್ ಬದಲಿಸಿದ್ದು ಮಾತ್ರವಲ್ಲ, 40 ದಿನಗಳ ರೀ ಶೂಟ್ ಮಾಡುತ್ತಿದ್ದಾರೆ. ಅಪೂರ್ವ ಲಖಿಯಾ ಅವರು ‘ಮಾತೃಭೂಮಿ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. 2020ರಲ್ಲಿ ಗಲ್ವಾನ್ ಕಣಿವೆಯಲ್ಲಿ ನಡೆದ ಭಾರತ ಹಾಗೂ ಚೀನಾ ಸಂಘರ್ಷದ ಬಗ್ಗೆ…