Headlines

nagaraj11081993

ಬಾಕ್ಸ್ ಆಫೀಸ್‌ನಲ್ಲಿ ರಣವೀರ್ ಸಿಂಗ್ ಅಬ್ಬರ: ಬಿಡುಗಡೆಗೂ ಮುನ್ನವೇ ಇತಿಹಾಸ ಸೃಷ್ಟಿಸಿದ ‘ಧುರಂಧರ್ 2’

ಬಾಲಿವುಡ್‌ ಸ್ಟಾರ್ ನಟ ರಣವೀರ್ ಸಿಂಗ್ ಅವರು ಈಗ ಭಾರತೀಯ ಚಿತ್ರರಂಗದ ಅತಿ ದೊಡ್ಡ ಬಾಕ್ಸ್ ಆಫೀಸ್ ಸುಲ್ತಾನ್ ಆಗಿ ಹೊರಹೊಮ್ಮಲು ಸಜ್ಜಾಗಿದ್ದಾರೆ. ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್ 2: ದ ರಿವೆಂಜ್’ (Dhurandhar 2: The Revenge) ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ದೇಶಾದ್ಯಂತ ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಈ ಸಿನಿಮಾ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಮಾರ್ಚ್ 18ರಂದು ಸಂಜೆ 5 ಗಂಟೆಯಿಂದ ಪೇಯ್ಡ್ ಪ್ರಿವ್ಯೂಗಳು (Dhurandhar 2 Paid preview) ಆರಂಭವಾಗಲಿದ್ದು,…

Read More

LPG ಸಿಲಿಂಡರ್‌ ಕೊರತೆ: ಹೋಟೆಲ್ ಮುಚ್ಚುವುದೇ ಕೊನೆಯ ದಾರಿ

ಬೆಂಗಳೂರು, ಮಾ.9: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧವು ಭಾರತದ ಮೇಲೂ ಪರಿಣಾಮ ಬೀರಿದೆ. ಈ ಯುದ್ಧದಿಂದಾಗಿ ವಾಣಿಜ್ಯ ಬಳಕೆಯ LPG ಸಿಲಿಂಡರ್‌ಗಳ ಕೊರತೆ ಬೆಂಗಳೂರಿನ ಹೋಟೆಲ್ ಉದ್ಯಮಕ್ಕೆ ತೀವ್ರ ಸಂಕಷ್ಟ ತಂದೊಡ್ಡಿದೆ. ಹೋಟೆಲ್ ಮಾಲೀಕರ ಸಂಘದ ಜಂಟಿ ಕಾರ್ಯದರ್ಶಿ ಕೃಷ್ಣರಾಜ್ ಅವರು ಈ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಗ್ಯಾಸ್ ಪೂರೈಕೆಯಲ್ಲಿ ಕೊರತೆ ಕಂಡುಬಂದಿದ್ದು, ಶನಿವಾರದಿಂದ 19 ಕೆ.ಜಿ. ಸಿಲಿಂಡರ್‌ಗಳ ಭರ್ತಿ ಸ್ಥಗಿತಗೊಂಡಿದೆ. ತೈಲ ಕಂಪನಿಗಳು ಸ್ಟಾಕ್ ಇದೆ ಎಂದು ಹೇಳುತ್ತಿದ್ದರೂ, ಡಿಸ್ಟ್ರಿಬ್ಯೂಟರ್‌ಗಳು…

Read More

ಆನೇಕಲ್‌ನಲ್ಲಿ ಕಿಡ್ನ್ಯಾಪ್ ಆಗಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಶವ ತಮಿಳುನಾಡಿನಲ್ಲಿ ಪತ್ತೆ

ಬೆಂಗಳೂರು, (ಮಾರ್ಚ್ 09): ಆನೇಕಲ್‌ನಲ್ಲಿ (Anekal)  ಅಪಹರಣಕ್ಕೊಳಗಾಗಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ ನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಹೌದು..ಹೊನ್ನಕಳಸಾಪುರ ಗ್ರಾಮದ ನಿವಾಸಿ ಗೋಪಾಲ್‌ ಅವರು ನಿನ್ನೆ ಸಂಜೆ 7.30 ರ ಸುಮಾರಿನಲ್ಲಿ ಕರ್ಪೂರು ಗೇಟ್‌ ಬಳಿ ಕಾರಿನಲ್ಲಿ ಹೋಗುತ್ತಿದ್ದಾಗ ಅವರ ಕಾರಿಗೆ ದುರ್ಷ್ಕಮಿಗಳು ವಾಹನದಿಂದ ಅಪಘಾತವೆಂಬಂತೆ ಡಿಕ್ಕಿ ಹೊಡೆದಿದ್ದಾರೆ. ನಂತರ ಗೋಪಾಲ್‌ ಅವರ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿದ್ದು, ಬಳಿಕ ತಮಿಳುನಾಡಿಗೆ (Tamil Nadu) ಕರೆದೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ನಿನ್ನೆ…

Read More

ತನ್ನ ಮಾಜಿ ಪ್ರೇಯಸಿ ಅಂದುಕೊಂಡು ಯಾವುದೋ ಯುವತಿ ಮೇಲೆ ಆ್ಯಸಿಡ್ ಎರಚಿದ ವ್ಯಕ್ತಿ

ಗುರುಗ್ರಾಮ, ಮಾರ್ಚ್​ 09: ತನ್ನ ಮಾಜಿ ಪ್ರೇಯಸಿ ಎಂದು ತಪ್ಪಾಗಿ ಭಾವಿಸಿ ವ್ಯಕ್ತಿಯೊಬ್ಬ ಯಾವುದೋ ಯುವತಿಗೆ ಆ್ಯಸಿಡ್(Acid) ಎರಚಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಭಾನುವಾರ ರಾತ್ರಿ ಸೆಕ್ಟರ್ 10 ರ ಗುರುಗ್ರಾಮ್ ಸಿವಿಲ್ ಆಸ್ಪತ್ರೆಯ ಆವರಣದಲ್ಲಿ ಈ ಭಯಾನಕ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಪಿಜಿಐಎಂಎಸ್ ರೋಹ್ಟಕ್‌ಗೆ ಕಳುಹಿಸಲಾಗಿದೆ. ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ರಾತ್ರಿ 8.15 ರಿಂದ 8.30 ರ ನಡುವೆ ಈ ದಾಳಿ…

Read More

ಕಾವ್ಯಾನ ಮದುವೆ ಆಗಲ್ಲ: ಎಲ್ಲರ ಎದುರು ನೇರವಾಗಿ ಹೇಳಿದ ಗಿಲ್ಲಿ ನಟ

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ಶೋನಲ್ಲಿ ಇದ್ದಾಗ ಕಾವ್ಯಾ ಶೈವ ಮತ್ತು ಗಿಲ್ಲಿ ನಟ ಅವರು ಹೆಚ್ಚು ಕ್ಲೋಸ್ ಆಗಿದ್ದರು. ಮದುವೆ ವಿಷಯದಲ್ಲಿ ಗಿಲ್ಲಿ ಅವರು ಕಾವ್ಯಾನ ಆಗಾಗ ರೇಗಿಸುತ್ತಿದ್ದರು. ಬಿಗ್ ಬಾಸ್ ಶೋ ಮುಗಿದು ಹಲವು ದಿನಗಳು ಕಳೆದಿದ್ದರೂ ಕೂಡ ಜನರ ಕ್ರೇಜ್ ಕಡಿಮೆ ಆಗಿಲ್ಲ. ಖಾಸಗಿ ಮಳಿಗೆ ಉದ್ಘಾಟನೆಗಾಗಿ ಗಿಲ್ಲಿ ನಟ (Gilli Nata) ಅವರು ಯಾದಗಿರಿಗೆ ಬಂದಿದ್ದಾರೆ. ಈ ವೇಳೆ ಮದುವೆ ಬಗ್ಗೆ ಪ್ರಶ್ನೆ ಎದುರಾಯಿತು….

Read More

ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರದಿಂದ ಹೊಸ ಮಾರ್ಗಸೂಚಿ: ಸಿಲಿಂಡರ್ ಬುಕಿಂಗ್ ದಿನಗಳಲ್ಲಿ ಮಹತ್ವದ ಬದಲಾವಣೆ

ನವದೆಹಲಿ ಮಾ.9: ದೇಶದಲ್ಲಿ ಎಲ್‌ಪಿಜಿ (LPG) ಸಿಲಿಂಡರ್‌ಗಳ ಕೃತಕ ಅಭಾವ ಮತ್ತು ಕಾಳಸಂತೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಈಗ ಕಠಿಣ ಕ್ರಮಗಳಿಗೆ ಮುಂದಾಗಿದೆ. ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಗ್ಯಾಸ್ ಸಿಲಿಂಡರ್‌ಗಳ ದಾಸ್ತಾನು (Hoarding) ಮಾಡುವುದನ್ನು ತಡೆಯಲು, ಎರಡು ಬುಕ್ಕಿಂಗ್‌ಗಳ ನಡುವಿನ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಲಾಗಿದೆ. ಈ ಹಿಂದೆ 55 ದಿನಗಳಿಗೊಮ್ಮೆ ಸಿಲಿಂಡರ್ ಬುಕ್ ಮಾಡುತ್ತಿದ್ದವರು, ಈಗ ಯುದ್ಧದ ಭೀತಿಯಿಂದ ಕೇವಲ 15 ದಿನಗಳಲ್ಲೇ ಬುಕ್ಕಿಂಗ್ ಮಾಡುತ್ತಿರುವುದು…

Read More

ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಟೂರ್ನಮೆಂಟ್ ತಂಡ ಪ್ರಕಟಿಸಿದ ಐಸಿಸಿ

2026 ರ ಟಿ20 ವಿಶ್ವಕಪ್ (ICC T20 World Cup 2026) ಮುಗಿದ ಒಂದು ದಿನದ ನಂತರ ಎಂದಿನಂತೆ ಐಸಿಸಿ ಟೂರ್ನಮೆಂಟ್‌ನ ಅತ್ಯುತ್ತಮ ತಂಡವನ್ನು (Team of the Tournament) ಪ್ರಕಟಿಸಿದೆ. ಈ ತಂಡದಲ್ಲಿ ಭಾರತದ 4 ಆಟಗಾರರು ಸ್ಥಾನ ಪಡೆದಿದ್ದಾರೆ. ಆದಾಗ್ಯೂ ಫೈನಲ್​ನಲ್ಲಿ ಟೀಂ ಇಂಡಿಯಾ ವಿರುದ್ಧ ಸೋತ ರನ್ನರ್ ಅಪ್ ನ್ಯೂಜಿಲೆಂಡ್‌ ತಂಡದ ಯಾವುದೇ ಆಟಗಾರನಿಗೆ ಈ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಬಾರಿಸಿದ ಫಿನ್ ಅಲೆನ್…

Read More

ಬಿಪಿ ನಿಯಂತ್ರಣದಲ್ಲಿಡಲು ಈ ಅಭ್ಯಾಸಗಳನ್ನು ತಪ್ಪದೆ ಅಳವಡಿಸಿಕೊಳ್ಳಿ! ಯಾವುದು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಹೈ ಬ್ಲಡ್ ಪ್ರೆಶರ್ (ಬಿಪಿ) ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಹಿಂದೆ ಈ ಸಮಸ್ಯೆ ಹಿರಿಯರಲ್ಲಿ ಮಾತ್ರ ಕಂಡುಬರುತ್ತಿತ್ತು. ಆದರೆ ಈಗ ಯುವಕರಲ್ಲೂ ಇದು ಸಾಮಾನ್ಯವಾಗಿದೆ. ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು, ಒತ್ತಡ, ದೈಹಿಕ ಚಟುವಟಿಕೆಗಳ ಕೊರತೆ, ಹೆಚ್ಚು ಉಪ್ಪಿನ ಸೇವನೆ ಹಾಗೂ ಜೀವನಶೈಲಿಯಲ್ಲಿ ಮಾಡಿಕೊಂಡ ಬದಲಾವಣೆಗಳು ಬಿಪಿ (Blood Pressure) ಹೆಚ್ಚಾಗಲು ಪ್ರಮುಖ ಕಾರಣಗಳೆಂದು ವೈದ್ಯರು ಹೇಳುತ್ತಾರೆ. ಅದರಲ್ಲಿಯೂ ಬಿಪಿ ದೀರ್ಘಕಾಲದ ವರೆಗೆ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿದ್ದರೆ ಹೃದಯ, ಮೂತ್ರಪಿಂಡ ಮತ್ತು ಮೆದುಳಿಗೆ ಸಂಬಂಧಿಸಿದ…

Read More

ಅಮೆರಿಕದ ಮುಂದಿನ ದಾಳಿ ಯಾರ ಮೇಲೆ? ವೆನಿಜುವೆಲಾ, ಕ್ಯೂಬಾ, ಇರಾನ್​ನಲ್ಲಿ ಒಂದೇ ಪ್ಯಾಟರ್ನ್; ಇದೆಯಾ ಚೀನಾ ಲಿಂಕ್?

ನವದೆಹಲಿ, ಜೂನ್ 9: ಅಮೆರಿಕ ಇರಾನ್ ಮೇಲೆ ಯಾಕೆ ಯುದ್ಧ ಮಾಡುತ್ತಿದೆ? ಇರಾನ್ ಪರಮಾಣು ಶಸ್ತ್ರಾಸ್ತ್ರ ತಯಾರಿಸುತ್ತಿದೆ ಎನ್ನುವ ಕಾರಣವೊಡ್ಡಿ ದಾಳಿ ಮಾಡುತ್ತಿರುವುದು ಮೇಲ್ನೋಟಕ್ಕೆ ಕಾಣುವ ಸಂಗತಿ. ಆದರೆ, ಇರಾನ್ ತನ್ನ ಪರಮಾಣು ಯೋಜನೆಯನ್ನು ಕೈಬಿಡುತ್ತೇನೆ ಎಂದು ಹಲವು ಬಾರಿ ವಾಗ್ದಾನ ಕೊಟ್ಟಿದೆ. ಆ ನಿಟ್ಟಿನಲ್ಲಿ ಇಂಟರ್ನ್ಯಾನಲ್ ಏಜೆನ್ಸಿಗಳಿಗೆ ಸಹಕಾರ ಕೂಡ ಕೊಟ್ಟಿದೆ. ಆದರೂ ಕೂಡ ಇಸ್ರೇಲ್ ಜೊತೆಗೂಡಿ ಅಮೆರಿಕವು ಇರಾನ್ ಮೇಲೆ ಎರಗಿದೆ. ಮೇಲ್ನೋಟಕ್ಕೆ ಕಾಣುವ ಮತ್ತೊಂದು ಕಾರಣವೆಂದರೆ, ಇರಾನ್ ಅನೇಕ ಭಯೋತ್ಪಾದಕ ಸಂಘಟನೆಗಳ ಬೆಂಬಲಿಗ…

Read More

ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾ ಮತ್ತೆ ಕಣಕ್ಕಿಳಿಯುವುದು ಯಾವಾಗ?

ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ (T20 World Cup) ಗೆದ್ದಿರುವ ಟೀಂ ಇಂಡಿಯಾ (Team India) ಹಲವು ದಾಖಲೆಗಳೊಂದಿಗೆ ಚುಟುಕು ಸಮರಕ್ಕೆ ವಿದಾಯ ಹೇಳಿದೆ. ಕಳೆದೊಂದು ತಿಂಗಳಿಂದ ಟಿ20 ವಿಶ್ವಕಪ್​ನಲ್ಲಿ ಭಾಗವಹಿಸಿದ್ದ ಟೀಂ ಇಂಡಿಯಾ ಇದೀಗ ವಿಶ್ರಾಂತಿ ಜಾರಿದೆ. ಅಹಮದಾಬಾದ್‌ನಲ್ಲಿ ಫೈನಲ್ ಪಂದ್ಯವನ್ನು ಮುಗಿಸಿ ತಂಡದೊಂದಿಗೆ ಸಂಭ್ರಮಾಚರಣೆಯಲ್ಲಿ ತೊಡಗಿದ ಆಟಗಾರರು ಇದೀಗ ತಮ್ಮ ತಮ್ಮ ಮನೆಗಳತ್ತ ಮುಖಮಾಡಿದ್ದಾರೆ. ಟಿ20 ವಿಶ್ವಕಪ್​ ಗೆದ್ದ ಖುಷಿಯನ್ನು ಇನ್ನು ಕೆಲವು ದಿನ ಆಚರಿಸಲಿದ್ದಾರೆ. ಇದು ಟೀಂ ಇಂಡಿಯಾ ಆಟಗಾರರ ಕಥೆಯಾದರೆ,…

Read More