Headlines

nagaraj11081993

ತಮಿಳುನಾಡು ಚುನಾವಣೆಯಲ್ಲಿ ವಿದೇಶಿಗರಿಂದ ಮತಚಲಾವಣೆ?: 10ಕ್ಕೂ ಹೆಚ್ಚು ಮಂದಿ ಬಂಧನ; ಫೇಲ್​​ ಆಯ್ತಾ SIR? – Kannada News | Foreign Nationals Voted in Tamil Nadu Elections?: More Than 10 Arrested

ಚೆನ್ನೈ, ಮೇ 15: ತಮಿಳುನಾಡು (Tamil Nadu) ವಿಧಾನಸಭೆ ಚುನಾವಣಾ ಫಲಿತಾಂಶ (Election Result) ಪ್ರಕಟವಾಗಿ, ನೂತನ ಸರ್ಕಾರ ರಚನೆ ಬೆನ್ನಲ್ಲೇ ಆಘಾತಕಾರಿ ವಿಷಯವೊಂದು ಬಹಿರಂಗಗೊಂಡಿದೆ. ಎಲೆಕ್ಷನ್​​ನಲ್ಲಿ ಮತ ಚಲಾಯಿಸಿರುವ ಆರೋಪದ ಮೇಲೆ ವಿದೇಶಿ ಪಾಸ್‌ಪೋರ್ಟ್ ಹೊಂದಿದ್ದ ಹಲವರನ್ನು ಚೆನ್ನೈ ಮತ್ತು ಮದುರೈ ವಿಮಾನ ನಿಲ್ದಾಣಗಳಲ್ಲಿ ಅಧಿಕಾರಿಗಳು ಬಂಧಿಸಿರುವ ಬಗ್ಗೆ ವರದಿಯಾಗಿದೆ. ಬಂಧಿತರಲ್ಲಿ ಹೆಚ್ಚಿನವರು ಶ್ರೀಲಂಕಾ ಮೂಲದವರಾಗಿದ್ದು, ಚೆನ್ನೈನಲ್ಲಿ ಕನಿಷ್ಠ 10 ಮಂದಿಯನ್ನು ಬಂಧಿಸಲಾಗಿದೆ. ಇವರಲ್ಲಿ ನಾಲ್ವರು ಮಹಿಳೆಯರೂ ಸೇರಿದ್ದಾರೆ. ಶ್ರೀಲಂಕಾದ ರಂಜಿನಿ (59), ಸರ್ಫುದೀನ್ (68),…

Read More

ಬೆಂಗಳೂರು, ಮಂಗಳೂರಿನಲ್ಲಿ ಡ್ರಗ್ಸ್ ಬೇಟೆ, ಒಟ್ಟೂ 16 ಕೆಜಿಗೂ ಹೆಚ್ಚು ಗಾಂಜಾ ಸೀಜ್! – Kannada News | Drug Crackdown in Karnataka: Ganja Seized in Mangaluru and Bengaluru Railway Station

ಬೆಂಗಳೂರು, ಮಂಗಳೂರಿನಲ್ಲಿ ಡ್ರಗ್ಸ್ ಬೇಟೆ, ಒಟ್ಟೂ 16 ಕೆಜಿಗೂ ಹೆಚ್ಚು ಗಾಂಜಾ ಸೀಜ್! ಮಂಗಳೂರು/ಬೆಂಗಳೂರು, ಮೇ 15: ರಾಜ್ಯದ ಪ್ರಮುಖ ನಗರಗಳಲ್ಲಿ ಮಾದಕ ವಸ್ತುಗಳ (Drugs) ಹಾವಳಿ ತಡೆಯಲು ಪೊಲೀಸರು ಮತ್ತು ಅಬಕಾರಿ ಇಲಾಖೆ ಕಾರ್ಯಾಚರಣೆ ತೀವ್ರಗೊಳಿಸಿದ್ದು, ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಭಾರಿ ಪ್ರಮಾಣದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಎರಡು ಕಡೆಗಳಲ್ಲಿ ಒಟ್ಟಾರೆಯಾಗಿ 16 ಕೆಜಿಗೂ ಹೆಚ್ಚು ಮಾದಕ ವಸ್ತುಗಳು ಪತ್ತೆಯಾಗಿವೆ. ಮುಖ್ಯಾಂಶಗಳು ಮಂಗಳೂರಿನ ಮೇರಿಹಿಲ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇರ್ಷಾದ್ ಎಂಬಾತನ ಬಂಧನ. ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಮಾಲೀಕರಿಲ್ಲದ…

Read More

Video: ಅಮ್ಮ ಪ್ಲೀಸ್ ಮಲಗೋಕೆ ಬಿಡಮ್ಮ; ಹಾಯಾಗಿ ಮಲಗಿರುವ ಕಂದಮ್ಮನನ್ನು ಎಬ್ಬಿಸುತ್ತಿರುವ ತಾಯಾನೆ – Kannada News | A mother elephant gently wakes up her baby elephant with her trunk

ಆನೆಗಳು (elephants) ತುಂಟಾಟ ಮಾಡುವುದರಲ್ಲಿ ಎತ್ತಿದ ಕೈ. ಮರಿಯಾನೆಗಳ ಆಟ ತುಂಟಾಟ, ತಾಯಾನೆ ತನ್ನ ಮರಿಗಳ ಮೇಲೆ ತೋರುವ ಪ್ರೀತಿಯ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಹಾಯಾಗಿ ಮಲಗಿ ನಿದ್ರಿಸುತ್ತಿರುವ ಮರಿಯಾನೆಯನ್ನು ತಾಯಾನೆ ಮೆಲ್ಲನೆ ಎಬ್ಬಿಸಲು ಪ್ರಯತ್ನಿಸುವ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ. leezahverse ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ತಾಯಿ ಪ್ರೀತಿಯನ್ನು ಕಾಣಬಹುದು. ಮರಿಯಾನೆಯೊಂದು ಹಾಯಾಗಿ ನಿದ್ರಿಸುತ್ತಿದೆ. ನಿದ್ರೆಗೆ ಜಾರಿರುವ ಕಂದಮ್ಮನನ್ನು ತಾಯಿ ಆನೆಯು ಮೆಲ್ಲನೆ ಎಬ್ಬಿಸುತ್ತಿದೆ. ಆದರೆ ಆನೆ ಮರಿ ಮಾತ್ರ…

Read More

Vasthu Tips: ಬಾಗಿಲಿನ ಹಿಂದೆ ಈ ವಸ್ತುಗಳನ್ನು ನೇತುಹಾಕಲೇಬೇಡಿ; ಇದು ಸಂಕಷ್ಟಕ್ಕೆ ಆಹ್ವಾನ! – Kannada News | Vastu Tips: 5 Things You Must Never Keep Behind Doors for Positive Home Energy

ಬಾಗಿಲಿನ ಹಿಂದೆ ಈ ವಸ್ತುಗಳನ್ನು ನೇತುಹಾಕಬೇಡಿ Image Credit source: Pinterest ಮನೆಯ ಪ್ರತಿಯೊಂದು ಮೂಲೆಯೂ ಒಂದಲ್ಲ ಒಂದು ರೀತಿಯ ಶಕ್ತಿಯನ್ನು (Energy) ಹೊಂದಿರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ವಾಸ್ತು ಪ್ರಕಾರ, ಮನೆಯ ಬಾಗಿಲುಗಳು ಕೇವಲ ಓಡಾಟದ ದಾರಿಯಲ್ಲ, ಅವು ಸುಖ-ಸಮೃದ್ಧಿ ಮನೆಗೆ ಪ್ರವೇಶಿಸುವ ದ್ವಾರಗಳು. ಆದರೆ ನಾವು ತಿಳಿಯದೆಯೇ ಬಾಗಿಲಿನ ಹಿಂದೆ ಕೆಲವು ವಸ್ತುಗಳನ್ನು ನೇತುಹಾಕುತ್ತೇವೆ. ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಲು ಕಾರಣವಾಗಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಬಾಗಿಲಿನ ಹಿಂಭಾಗದಲ್ಲಿ ಯಾವ 5…

Read More

ನೀಟ್ ಪರೀಕ್ಷಾ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ: ಇನ್ಮುಂದೆ ಕಂಪ್ಯೂಟರ್ ಆಧಾರಿತ ಪರೀಕ್ಷೆ; ಜೂನ್ 21ಕ್ಕೆ ರೀ-ಎಕ್ಸಾಮ್! – Kannada News | Major NEET Changes: Computer Based Test and June 21 Re exam Confirmed by Govt

ದೆಹಲಿ, ಮೇ.15: ನೀಟ್-ಯುಜಿ ಪತ್ರಿಕೆ ಸೋರಿಕೆ ಹಗರಣದ ಬೆನ್ನಲ್ಲೇ ಕೇಂದ್ರ ಶಿಕ್ಷಣ ಸಚಿವಾಲಯವು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಮುಂದಿನ ವರ್ಷದಿಂದ ನೀಟ್ ಪರೀಕ್ಷೆಯನ್ನು ಸಂಪೂರ್ಣವಾಗಿ ಕಂಪ್ಯೂಟರ್ ಆಧಾರಿತ (CBT Mode) ಮಾದರಿಯಲ್ಲಿ ನಡೆಸಲಾಗುವುದು ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಘೋಷಿಸಿದ್ದಾರೆ. ಇನ್ನು ರದ್ದುಗೊಂಡಿದ್ದ ನೀಟ್-ಯುಜಿ 2026ರ ಮರು ಪರೀಕ್ಷೆಯು ಜೂನ್ 21 ರಂದು ನಡೆಯಲಿದೆ.ಜೂನ್ 14 ರೊಳಗೆ ಅಭ್ಯರ್ಥಿಗಳಿಗೆ ಪ್ರವೇಶ ಪತ್ರಗಳನ್ನು ವಿತರಿಸಲಾಗುವುದು ಎಂದು ಹೇಳಲಾಗಿದೆ. ವಿದ್ಯಾರ್ಥಿಗಳಿಗೆ ತಮ್ಮ ಪರೀಕ್ಷಾ ಕೇಂದ್ರವಾಗಿ ಆಯ್ಕೆ ಮಾಡಿಕೊಳ್ಳಲು ಒಂದು…

Read More

ಮಾಧುರಿ ದೀಕ್ಷಿತ್​ಗೆ ಕನಸಲ್ಲೂ ಬಂದು ಕಾಡುತ್ತಿದ್ದ ಈ ಕ್ರಿಕೆಟಿಗ – Kannada News | Madhuri Dixit’s Birthday: Reveals Crush on Sunil Gavaskar

ಬಾಲಿವುಡ್‌ನ ‘ಧಕ್ ಧಕ್ ಗರ್ಲ್’ ಮಾಧುರಿ ದೀಕ್ಷಿತ್ ಅವರಿಗೆ (Madhuri Dixit) ಇಂದು (ಮೇ 15) 59ನೇ ಜನ್ಮದಿನದ ಸಂಭ್ರಮ. ದಶಕಗಳ ಕಾಲ ತಮ್ಮ ನಟನೆ ಮತ್ತು ನೃತ್ಯದ ಮೂಲಕ ಭಾರತೀಯ ಚಿತ್ರರಂಗವನ್ನು ಆಳಿದ ಮಾಧುರಿ, ಇಂದಿಗೂ ಸೌಂದರ್ಯ ಮತ್ತು ಪ್ರತಿಭೆಯ ವಿಷಯದಲ್ಲಿ ಹೊಸ ತಲೆಮಾರಿನ ನಟಿಯರಿಗೆ ಸ್ಫೂರ್ತಿಯಾಗಿದ್ದಾರೆ. ಮಾಧುರಿ ಅವರ ಜನ್ಮದಿನದ ಈ ಸಂದರ್ಭದಲ್ಲಿ ಅವರ ಹಳೆಯ ಸಂದರ್ಶನವೊಂದು ಸಖತ್ ಸುದ್ದಿಯಾಗುತ್ತಿದೆ. ಈ ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ ಮಾಧುರಿ ಅವರು ತಮಗೆ ಭಾರತೀಯ ಕ್ರಿಕೆಟ್ ದಿಗ್ಗಜ…

Read More

ದರ್ಶನ್ ಜಾಮೀನು ಅರ್ಜಿ: ಸುಪ್ರೀಂ ಕೋರ್ಟ್​​ನಲ್ಲಿ ವಾದ-ಪ್ರತಿವಾದ ಹೀಗಿತ್ತು? – Kannada News | Darshan Bail application: here is the detail of argument in Supreme Court

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಇತ್ತೀಚೆಗಷ್ಟೆ ಸುಪ್ರೀಂಕೋರ್ಟ್​​ಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಜೈಲಿನ ಅವ್ಯವಸ್ಥೆ, ಜೈಲಧಿಕಾರಿಗಳ ತಾರತಮ್ಯ, ಸಾಕ್ಷ್ಯಗಳ ವಿಚಾರಣೆಯಲ್ಲಿ ವಿಳಂಬ ಇನ್ನೂ ಹಲವು ಕಾರಣಗಳನ್ನು ನೀಡಿ ನಟ ದರ್ಶನ್ ಅವರು ತಮಗೆ ಜಾಮೀನು ನೀಡಬೇಕೆಂದು ಸುಪ್ರೀಂಕೋರ್ಟ್​​ನಲ್ಲಿ ಮನವಿ ಮಾಡಿದ್ದರು. ಇಂದು ನಟ ದರ್ಶನ್ ಪರವಾಗಿ ಖ್ಯಾತ ವಕೀಲ ಮುಕುಲ್ ರೊಹ್ಟಗಿ ವಾದ ಮಂಡಿಸಿದರೆ, ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸಿದ್ಧಾರ್ಥ್ ಲೂಥ್ರಾ ವಾದ ಮಂಡಿಸಿದರು. ನ್ಯಾಯಮೂರ್ತಿ ಜೆಬಿ ಪರ್ದಿವಾಲಾ,…

Read More

ಸುಪ್ರೀಂಕೋರ್ಟ್​ ಆದೇಶದಿಂದ ದರ್ಶನ್​​ಗೆ ಹೆಚ್ಚಿತು ಸಂಕಷ್ಟ; 2028ರವರೆಗೂ ಬರಲ್ಲ ಡಿ ಬಾಸ್ ಸಿನಿಮಾ? – Kannada News | Darshan Bail Plea Rejected: Renukaswamy Case Delays Career, Future Films at Risk

ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಸಾಕ್ಷಿ ವಿಚಾರಣೆ ವಿಳಂಬ ಆಗುತ್ತಿದೆ ಎಂದು ನಟ ದರ್ಶನ್ ಅವರು ಆರೋಪಿಸಿದ್ದರು. ಇದೇ ಕಾರಣ ನೀಡಿ ಸುಪ್ರೀಂಕೋರ್ಟ್​​​ನಲ್ಲಿ ಜಾಮೀನು ಅರ್ಜಿ ಕೂಡ ಸಲ್ಲಿಕೆ ಮಾಡಿದ್ದರು. ಇದೇ ವೇಳೆ ಅವರು ಸುದೀರ್ಘ ಜೈಲುವಾಸದಿಂದ ಜೀವನೋಪಾಯಕ್ಕೂ ಸಮಸ್ಯೆ ಆಗುತ್ತಿದೆ ಎಂದು ಆರೋಪಿಸಿದ್ದರು. ಏನೇ ಹೇಳಿದರೂ ಕೋರ್ಟ್ ಮಾತ್ರ ದರ್ಶನ್ ಮನವಿಯನ್ನು ಪರುಸ್ಕರಿಸಿಲ್ಲ. ಮುಂದಿನ ಒಂದು ವರ್ಷ ದರ್ಶನ್ (Darshan)​​ ಜಾಮೀನು ಕೇಳುವಂತಿಲ್ಲ ಎಂದು ಕೋರ್ಟ್ ಹೇಳಿದೆ. ಇದರಿಂದ ದರ್ಶನ್ ವೃತ್ತಿ ಜೀವನಕ್ಕೆ ಸಂಕಷ್ಟ ಎದುರಾಗಿದೆ. ಜಾಮೀನು…

Read More

ಒಟಿಟಿಯಲ್ಲಿ ಬಿಡುಗಡೆ ಆಯ್ತು ‘ಧುರಂಧರ್ 2’ ಆದರೆ ಭಾರತೀಯರಿಗಲ್ಲ – Kannada News | Dhurandhar 2 movie released on Netflix but not in India

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಭಾರಿ ಅಬ್ಬರದ ಬಳಿಕ ಇದೀಗ ಒಟಿಟಿಗೆ ಬಂದಿದೆ. ‘ಧುರಂಧರ್ 2’ ಸಿನಿಮಾದ ಒಟಿಟಿ ಬಿಡುಗಡೆ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿದ್ದವು. ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಲಿದೆ, ಜಿಯೋ ಹಾಟ್​​ಸ್ಟಾರ್​​ನಲ್ಲಿ ಮಾತ್ರವೇ ಬರಲಿದೆ ಎಂಬೆಲ್ಲ ಸುದ್ದಿಗಳು ಹಬ್ಬಿದ್ದವು. ಇದೀಗ ಕೊನೆಗೂ ‘ಧುರಂಧರ್ 2’ ಸಿನಿಮಾ ಒಟಿಟಿಗೆ ಬಂದಿದೆ. ಆದರೆ ಭಾರತೀಯರು ‘ಧುರಂಧರ್ 2’ ಸಿನಿಮಾ ವೀಕ್ಷಿಸಲು ಇನ್ನೂ ಸ್ವಲ್ಪ ಸಮಯ ಕಾಯಬೇಕಿದೆ. ಆದರೆ ಸದ್ಯಕ್ಕೆ ವಿದೇಶಿಗರು ಮಾತ್ರವೇ…

Read More

ತಾಯಿ ಆಸ್ತಿ ಬೇಕು, ಆಕೆ ಬೇಡ ಎಂದ ಮಗಳಿಗೆ ಹೈಕೋರ್ಟ್​​ ತಪರಾಕಿ: ಮಹತ್ವದ ಆದೇಶ ನೀಡಿದ ಕೋರ್ಟ್​ – Kannada News | Wanted Mother’s Property, Not Her Care: Karnataka High Court Issues Order Against Daughter

ಕರ್ನಾಟಕ ಹೈಕೋರ್ಟ್​​Image Credit source: dinamalar.com ಬೆಂಗಳೂರು, ಮೇ 15: ಕಾನೂನುಬದ್ಧ, ನೈತಿಕ ಮತ್ತು ಸಾಮಾಜಿಕ ಜವಾಬ್ದಾರಿಯಿಂದ ಮಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಕರ್ನಾಟಕ ಹೈಕೋರ್ಟ್ (High Court of Karnataka)​​, ತಾಯಿಯಿಂದ ಉಡುಗೊರೆಯಾಗಿ ಪಡೆದಿದ್ದ ಆಸ್ತಿಯನ್ನು ಹಿಂತಿರುಗಿಸುವಂತೆ 44 ವರ್ಷದ ಮಹಿಳೆಗೆ ಆದೇಶಿಸಿದ್ದ ತೀರ್ಪನ್ನು ಎತ್ತಿಹಿಡಿದಿದೆ. ತಾಯಿ ನೀಡಿದ್ದ ಗಿಫ್ಟ್ ಡೀಡ್ ರದ್ದುಗೊಳಿಸಿದ್ದ ಹಿರಿಯ ನಾಗರಿಕ ನಿರ್ವಹಣಾ ನ್ಯಾಮಂಡಳಿ ಮತ್ತು ಉಪವಿಭಾಗಾಧಿಕಾರಿಗಳ ಆದೇಶವನ್ನು ಪ್ರಶ್ನಿಸಿ ಪವಿತ್ರಾ ಎಂಬ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ನ್ಯಾಯಮೂರ್ತಿ…

Read More