Headlines

nagaraj11081993

ಓಡಿಬಂದು ಮುಳ್ಳಿನ ಪೊದೆಗೆ ಹಾರ್ತಾರೆ, ಆದ್ರೂ ಏನಾಗಲ್ಲ! ಚಾಮರಾಜನಗರ ಗೂಳಿಪುರದಲ್ಲಿ ವಿಶೇಷ ಹಬ್ಬ, ವಿಡಿಯೋ ಇಲ್ಲಿದೆ ನೋಡಿ – Kannada News | Devotees Leap Into Thorn Bushes During Bisilu Mariamma Festival in Chamarajanagar’s Goolipura; Viral Video Surfaces

ಚಾಮರಾಜನಗರ, ಮಾರ್ಚ್ 3: ಚಾಮರಾಜನಗರ ತಾಲೂಕಿನ ಗೂಳಿಪುರ ಗ್ರಾಮದಲ್ಲಿ ಗ್ರಾಮ ದೇವತೆ ಬಿಸಿಲು ಮಾರಮ್ಮ ಜಾತ್ರೆ ಸಂಭ್ರಮ ಸಡಗರದಿಂದ ನಡೆಯಿತು. ಈ ಜಾತ್ರೆಯ ಪ್ರಮುಖ ವಿಶೇಷತೆ ಎಂದರೆ ಭಕ್ತರು ಮುಳ್ಳಿನ ಪೊದೆಗಳ ಮೇಲೆ ಹಾರುವುದು. ಈ ವಿಶೇಷ ಆಚರಣೆ ಪ್ರಕಾರ, ದೇವಿಗೆ ಪೂಜೆ ಸಲ್ಲಿಸಿದ ಬಳಿಕ ತಮಟೆ ನಾದದ ನಡುವೆ ಭಕ್ತರು ವೇಗವಾಗಿ ಓಡಿಬಂದು ಮುಳ್ಳಿನ ಪೊದೆಗಳ ಮೇಲೆ ಹಾರುತ್ತಾರೆ. ಆಶ್ಚರ್ಯಕರ ಸಂಗತಿ ಏನೆಂದರೆ, ಹೀಗೆ ಹಾರಿದರೂ ಯಾರಿಗೂ ಯಾವುದೇ ಗಾಯವಾಗುವುದಿಲ್ಲ ಎಂಬುದು ಗ್ರಾಮಸ್ಥರ ನಂಬಿಕೆ. ಈ…

Read More

ರಶ್ಮಿಕಾ-ವಿಜಯ್ ಮದುವೆ ಆರತಕ್ಷತೆ: ನೂತನ ಜೋಡಿಯಿಂದ ವಿಶೇಷ ಮನವಿ – Kannada News | Rashmika Mandanna and Vijay Deverakonda statement begore reception

ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಇತ್ತೀಚೆಗಷ್ಟೆ ರಾಜಸ್ಥಾನದ ಉದಯಪುರದಲ್ಲಿ ಬಲು ಅದ್ಧೂರಿಯಾಗಿ ನೆರವೇರಿದೆ. ರಶ್ಮಿಕಾ ಹಾಗೂ ವಿಜಯ್ ಅವರ ಮದುವೆ ಚಿತ್ರಗಳಂತೂ ದೇಶದಾದ್ಯಂತ ಸದ್ದು-ಸುದ್ದಿ ಆಗಿವೆ. ಇಬ್ಬರ ಮದುವೆ ಒಂದು ರೀತಿ ‘ನ್ಯಾಷನಲ್ ನ್ಯೂಸ್’ ಆಗಿದೆ. ರಶ್ಮಿಕಾ-ವಿಜಯ್ ಹೋದಲ್ಲೆಲ್ಲ ಅವರ ನೋಡಲು ಜನ ಮುಗಿಬೀಳುತ್ತಿದ್ದಾರೆ. ಇದರ ನಡುವೆ ನಾಳೆ (ಮಾರ್ಚ್ 04) ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಆರತಕ್ಷತೆ ಆಯೋಜಿಸಲಾಗಿದ್ದು ಆರತಕ್ಷತೆ ಕಾರ್ಯಕ್ರಮ ಬಲು ಅದ್ಧೂರಿಯಾಗಿ ನಡೆಯಲಿದೆ. ರಿಸೆಪ್ಷನ್​​ಗೆ ಮುಂಚೆ…

Read More

Mega Job Fair: ರಾಮನಗರದಲ್ಲಿ ಮಾ. 5ರಂದು ಬೃಹತ್ ಉದ್ಯೋಗ ಮೇಳ; ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ – Kannada News | Ramanagara Mega Job Fair: 20,000+ Jobs on March 5 for Bengaluru South Job Seekers

ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ ಒದಗಿಸುವ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಮಾರ್ಚ್ 5ರ ಗುರುವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ರಾಮನಗರ ಟೌನ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಈ ಮಹತ್ವದ ಮೇಳ ನಡೆಯಲಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 171…

Read More

ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಆರೋಗ್ಯಕ್ಕೇನಾಯ್ತು, ಕುತ್ತಿಗೆ ಮೇಲೆ ಕಾಣಿಸಿಕೊಂಡ ಕೆಂಪು ಕಲೆ – Kannada News | Trump’s Neck Rash: Unpacking the Health Rumors and Official White House Statement

ವಾಷಿಂಗ್ಟನ್, ಮಾರ್ಚ್​ 03: ಇರಾನ್ ಮೇಲೆ ಇಸ್ರೇಲ್ ಜತೆ ಸೇರಿ ಡೊನಾಲ್ಡ್​ ಟ್ರಂಪ್(Donald Trump) ಸಮರ ಸಾರಿದ್ದು, ಇದೀಗ ವಿಶ್ವದಾದ್ಯಂತ ಅವರದ್ದೇ ಮಾತು. ಪ್ರತಿಯೊಂದು ನಡೆಯನ್ನೂ ಜಗತ್ತು ಸೂಕ್ಷ್ಮವಾಗಿ ಗಮನಿಸುತ್ತಿದೆ. ಇದೀಗ ಆವರ ಆರೋಗ್ಯದ ಬಗ್ಗೆ ಊಹಾಪೋಹಗಳು ಎದ್ದಿವೆ. ಟ್ರಂಪ್ ಕುತ್ತಿಗೆ ಭಾಗದಲ್ಲಿ ಕೆಂಪು ದದ್ದು ಕಾಣಿಸಿಕೊಂಡಿದ್ದು, ಅವರ ಆರೋಗ್ಯದ ಬಗ್ಗೆ ನಾನಾ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆದರೆ ಶ್ವೇತಭವನವು ಅವರು ಬಳಸುತ್ತಿದ್ದ ಕ್ರೀಂನಿಂದಾಗಿ ಈ ಕಲೆಯಾಗಿದೆ ಎಂದು ಹೇಳಿಕೊಂಡಿದೆ. ಅಧ್ಯಕ್ಷ ಟ್ರಂಪ್ ಅವರ ಕಿವಿಯ ಕೆಳಗೆ ಕುತ್ತಿಗೆಯ…

Read More

ಮಂಗಳೂರು: ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುವುದಾಗಿ ಪ್ರಚೋದನಕಾರಿ ಪೋಸ್ಟ್, ಕೇಸ್ ದಾಖಲು – Kannada News | Bomb Threat Comment Near Ullal Mosque in Mangaluru; Police Register Suo Motu Case Over Viral Instagram Post

ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುವುದಾಗಿ ಪೋಸ್ಟ್, ಕೇಸ್ ದಾಖಲು ಮಂಗಳೂರು, ಮಾರ್ಚ್ 3: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಉಳ್ಳಾಲ ಪ್ರದೇಶದ ಮಸೀದಿ ಬಳಿ ಬಾಂಬ್ ಸ್ಫೋಟ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಮಾಡಿರುವ ಘಟನೆಗೆ ಸಂಬಂಧಿಸಿ ಉಳ್ಳಾಲ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಪೋಸ್ಟ್ ಮಾಡಿದ ಕಿಡಿಗೇಡಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ‘ಉಳ್ಳಾಲದ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ, ಸಪೋರ್ಟ್ ಮಾಡಿ’ ಎಂದು ಶಂಕರ್11916 (shankar11916) ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ ಪೋಸ್ಟ್…

Read More

Dry Fruit Price Hike: ಇಸ್ರೇಲ್-ಇರಾನ್ ಸಂಘರ್ಷ, ಬೆಂಗಳೂರಿನಲ್ಲಿ ದುಬಾರಿಯಾಗಲಿದೆ ಡ್ರೈ ಫ್ರೂಟ್ಸ್ – Kannada News | Dry Fruit Price Hike in Bengaluru Likely Amid Israel Iran Conflict; Supply of Iranian Dates, Pistachios, Figs May Be Hit

ಬೆಂಗಳೂರು, ಮಾರ್ಚ್ 3: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ (Israel-Iran Conflict) ಪರಿಣಾಮ ಬೆಂಗಳೂರಿನಲ್ಲಿ ಡ್ರೈ ಫ್ರೂಟ್ಸ್ ಬೆಲೆ (Dry Fruit Price) ಏರಿಕೆಯಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ, ಪೂರೈಕೆ ಸಮಸ್ಯೆಯೂ ಎದುರಾಗಬಹುದು ಎಂದು ಸ್ಥಳೀಯ ವ್ಯಾಪಾರಿಗಳು ತಿಳಿಸಿದ್ದಾರೆ. ನಗರಕ್ಕೆ ಆಮದಾಗುವ ಡ್ರೈ ಫ್ರೂಟ್ಸ್‌ಗಳಲ್ಲಿ ಹೆಚ್ಚಿನ ಪ್ರಮಾಣದ ವಸ್ತುಗಳು ಇರಾನ್‌ನಿಂದ ಬರುತ್ತವೆ. ಅಂಜೂರ, ಮಾಮ್ರಾ ಬಾದಾಮಿ, ಪಿಸ್ತಾ, ಪೈನ್ ಬೀಜಗಳ ಜೊತೆಗೆ ಮಜಾಫತಿ ಖರ್ಜೂರಗಳು ವಿಶೇಷವಾಗಿ ಹೆಚ್ಚು ಬೇಡಿಕೆಯಲ್ಲಿವೆ. ರಂಜಾನ್ ಸಮಯದಲ್ಲಿ ಮಜಫತಿ ಖರ್ಜೂರಗಳಿಗೆ ಹೆಚ್ಚಿನ ಬೇಡಿಕೆ…

Read More

ಟೀಮ್ ಇಂಡಿಯಾಗೆ ಆಯ್ಕೆ ಮಾಡಿ… ಸೌರವ್ ಗಂಗೂಲಿ ಮನವಿ – Kannada News | Sourav Ganguly backs Auqib Nabi for Team India

ಜಮ್ಮು-ಕಾಶ್ಮೀರ ತಂಡದ ವೇಗಿ ಆಖಿಬ್ ನಬಿ (Auqib Nabi) ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡುವಂತೆ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಸೂಚಿಸಿದ್ದಾರೆ. 2025-26ರ ದೇಶೀಯ ಕ್ರಿಕೆಟ್ ಸೀಸನ್​ನಲ್ಲಿ ನಬಿ ಅವರ ಅದ್ಭುತ ಪ್ರದರ್ಶನವನ್ನು ಕೊಂಡಾಡಿರುವ ಗಂಗೂಲಿ, ಅವರ ಆಯ್ಕೆಗೆ ಇದು ಸೂಕ್ತವಾದ ಸಮಯ ಎಂದಿದ್ದಾರೆ. 2025-26ರ ರಣಜಿ ಟ್ರೋಫಿ ಫೈನಲ್‌ನಲ್ಲಿ ಕರ್ನಾಟಕದ ವಿರುದ್ಧ ಆಖಿಬ್ ನಬಿ 5 ವಿಕೆಟ್ ಪಡೆದಿದ್ದರು. ಅಲ್ಲದೆ ಚೊಚ್ಚಲ ಬಾರಿ ಜಮ್ಮು-ಕಾಶ್ಮೀರ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ…

Read More

Jain Sanyasa Deeksha: ದಾವಣಗೆರೆಯ ಜೈನ್ ಸಮಾಜದ ನಾಲ್ವರಿಂದ ಸನ್ಯಾಸ ಧೀಕ್ಷೆ ಸ್ವೀಕಾರ – Kannada News | Davanagere: Jain Couple and Two Young Women Take Sanyasa Diksha in Historic Ceremony

ದಾವಣಗೆರೆಯ ಜೈನ್ ಸಮಾಜದ ನಾಲ್ವರಿಂದ ಸನ್ಯಾಸ ಧೀಕ್ಷೆ ಸ್ವೀಕಾರ ದಾವಣಗೆರೆ, ಮಾರ್ಚ್​ 03: ಜೈನ್ ಸಮುದಾಯದಲ್ಲಿ ಅಪರೂಪದ ಆಧ್ಯಾತ್ಮಿಕ ಘಟನೆಯೊಂದು ನಗರದಲ್ಲಿ ನಡೆಯಲಿದೆ. ಜೈನ್ ಸಮಾಜದ ನಾಲ್ವರು ಸನ್ಯಾಸ ದೀಕ್ಷೆ ಸ್ವೀಕರಿಸಲು ನಿರ್ಧರಿಸಿದ್ದು, ಮಾರ್ಚ್ 4ರಂದು ನಗರದ (Davanagere) ಹೊಳೆಹೊನ್ನೂರು ತೋಟದಲ್ಲಿ ದೀಕ್ಷಾ ಮಹೋತ್ಸವ ಜರುಗಲಿದೆ. ಜೈನ ಗುರು ಅಭಯ್ ಶೇಖರ್ ಸುರೀಶ್ವರ ಮಹಾರಾಜ್ ಅವರ ಸಮ್ಮುಖದಲ್ಲಿ ಇಬ್ಬರು ಯುವತಿಯರು ಹಾಗೂ ಉದ್ಯಮಿ ದಂಪತಿ ಸನ್ಯಾಸ ಜೀವನಕ್ಕೆ ಕಾಲಿಡಲಿದ್ದಾರೆ. ನಗರದ ಪ್ರಸಿದ್ಧ ಲಲಿತ್ ಗಾರ್ಮೆಂಟ್ಸ್ ಮಾಲೀಕರಾದ ಭರತ್…

Read More

Video: ಹೋಳಿ ಆಚರಣೆ ವೇಳೆ ಹೊತ್ತಿಸಿದ್ದ ಬೆಂಕಿಯ ಗೋಪುರದ ಮೇಲೆ ನಡೆದ ಕಲಿಯುಗದ ಪ್ರಹ್ಲಾದ – Kannada News | Man Depicting Prahlad Enters Holi Bonfire in Mathura, Claims 45 Day Fast

ಮಥುರಾ, ಮಾರ್ಚ್​ 03: ದೇಶಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹೋಳಿ ಆಚರಣೆ ಸಂದರ್ಭದಲ್ಲಿ ಹೊತ್ತಿಸಿದ್ದ ಬೃಹತ್ ಬೆಂಕಿಯ ಗೋಪುರದ ಮೇಲೆ ವ್ಯಕ್ತಿಯೊಬ್ಬ ನಡೆದಿದ್ದಾರೆ. ಅದು ಅಲ್ಲಿಯ ಸಂಪ್ರದಾಯ, ಪ್ರತಿ ವರ್ಷ ಹೋಳಿ ಹಬ್ಬದ ಮುನ್ನಾದಿನ ಈ ಆಚರಣೆ ನಡೆಯುತ್ತದೆ. ಪ್ರಹ್ಲಾದನ ಪಾತ್ರಧಾರಿ ಈ ಬೆಂಕಿಯಲ್ಲಿ ನಡೆದುಕೊಂಡು ಹೋಗಿದ್ದಾರೆ. ಅವರು ಕಳೆದ 45 ದಿನಗಳಿಂದ ಕಠಿಣ ವ್ರತವನ್ನು ಆಚರಿಸುವುದು ಮಾತ್ರವಲ್ಲದೆ, 45 ದಿನಗಳಿಂದ ಉಪವಾಸವಿದ್ದಾರೆ. ಮನೆ ಹಾಗೂ ಕುಟುಂಬದಿಂದ ಬೇರ್ಪಟ್ಟಿರುತ್ತಾರೆ.   ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್…

Read More

Lunar Eclipse: ಇಂದು ಕೇತುಗ್ರಸ್ತ ಚಂದ್ರಗ್ರಹಣ; ಗ್ರಹಣ ಪ್ರಾರಂಭದ ನಿಖರ ಸಮಯ ಹಾಗೂ ವಿಧಿವಿಧಾನಗಳ ಮಾಹಿತಿ ಇಲ್ಲಿದೆ – Kannada News | Grastodaya Lunar Eclipse: India Timings, Rituals and Dosha Nivaran Guide

ನಮ್ಮ ಸನಾತನ ಸಂಸ್ಕೃತಿಯಲ್ಲಿ ಗ್ರಹಣಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಇಂದು (ಮಾ.03) ಗ್ರಸ್ತೋದಯ ಪಾಕ್ಷಿಕ ಕೇತುಗ್ರಸ್ತ ಚಂದ್ರಗ್ರಹಣ ಸಂಭವಿಸಲಿದೆ. ಇದು ಭಾರತದಲ್ಲಿ ಗೋಚರವಾಗುತ್ತದೆ. ಗ್ರಸ್ತೋದಯ ಎಂದರೆ ಸೂರ್ಯ ಅಸ್ತಮಿಸುವಾಗ ಮತ್ತು ಚಂದ್ರ ಉದಯಿಸುವಾಗ ಗ್ರಹಣ ಸಂಭವಿಸುವುದು. ಈ ಗ್ರಹಣದ ವಿಶೇಷಗಳು, ಆಚರಣೆಗಳು, ವಿಧಿವಿಧಾನಗಳು ಮತ್ತು ರಾಶಿಗಳ ಮೇಲಿನ ಪ್ರಭಾವಗಳ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ತಿಳಿಸಿರುವ ಮಾಹಿತಿ ಇಲ್ಲಿದೆ. ಈ ಚಂದ್ರಗ್ರಹಣವು ವಿಶ್ವಾವಸು ನಾಮ ಸಂವತ್ಸರ,…

Read More