ಮಹಾರಾಷ್ಟ್ರದ ಅಮರಾವತಿಯಲ್ಲಿ ಕಣಿವೆಗೆ ಉರುಳಿದ ಪಿಕ್ಅಪ್ ವ್ಯಾನ್, ಐವರು ಸಾವು, 7 ಮಂದಿಗೆ ಗಂಭೀರ ಗಾಯ – Kannada News | Five Dead, Several Hurt After Van Falls Into Gorge in Amravati
ಅಮರಾವತಿ, ಫೆಬ್ರವರಿ 23: ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ರಾಣಿಗಾಂವ್ ಘಾಟ್ ರಸ್ತೆಯಲ್ಲಿ ಸೋಮವಾರ ಪಿಕಪ್ ವ್ಯಾನ್ ಆಳವಾದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಐವರು ಸಾವನ್ನಪ್ಪಿದ್ದು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಧರಣಿ ತಾಲೂಕಿನ ರಾಣಿಗಾಂವ್ ಘಾಟ್ ವಿಭಾಗದಲ್ಲಿ ಈ ಅಪಘಾತ(Accident) ಸಂಭವಿಸಿದ್ದು, ಶಿವಝಿರಿಯಿಂದ ಸುಮಾರು ಎರಡು ಕಿಲೋಮೀಟರ್ ಮುಂದಿದೆ. ಅಧಿಕಾರಿಗಳ ಪ್ರಕಾರ, ಪಿಕಪ್ ವ್ಯಾನ್ ನಿಯಂತ್ರಣ ತಪ್ಪಿ ಕಿರಿದಾದ ಬೆಟ್ಟದ ರಸ್ತೆಯಿಂದ ಆಳವಾದ ಕಂದಕಕ್ಕೆ ಬಿದ್ದಿದೆ. ಈ ಭೀಕರ ಅಪಘಾತದಲ್ಲಿ ಐದು ಜನರು ಸ್ಥಳದಲ್ಲೇ ಸಾವನ್ನಪ್ಪಿದರೆ,…